ಚಂದ್ರಯಾನ-3 ಯೋಜನೆಯಲ್ಲಿ ಬಳಸಲಾಗುವ ಸಿಇ 20 ಪ್ರಯೋಜನಕ್ ಇಂಜಿನ್ ನ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಪ್ರಕಟಿಸಿದೆ. ಚಂದ್ರಯಾನ-3ರ ಉಡಾವಣಾ ವಾಹಕದ ಮೇಲಿನ ಪ್ರಯೋಜನಿಕ ಹಂತವನ್ನು ಮುನ್ನಡೆಸಲು ಈ ಇಂಜಿನ್ ಅನ್ನು ಬಳಸಲಾಗುತ್ತದೆ ತಮಿಳುನಾಡಿನ ಮಹೇಂದ್ರ ಗಿರಿಯಲ್ಲಿರುವ ಇಸ್ರೋ ಪ್ರೊಫಲ್ಶನ್ ಕಾಂಪ್ಲೆಕ್ಸ್ ನಲ್ಲಿರುವ ಆಲ್ಟಿಟ್ಯೂಡ್ ಟೆಸ್ಟ್ ಫೆಸಿಲಿಟಿಯಲ್ಲಿ ಫೆಬ್ರವರಿ 24ರಂದು 25 ಸೆಕೆಂಡುಗಳ ಕಾಲ ಉಷ್ಣತಾ ಪರೀಕ್ಷೆಯನ್ನು ನಡೆಸಲಾಯಿತು ಎಂದು ಬೆಂಗಳೂರಿನಲ್ಲಿ ಪ್ರಧಾನ ಕೇಂದ್ರ ಹೊಂದಿರುವ ಇಸ್ರೋ ತಿಳಿಸಿದೆ ಪರೀಕ್ಷೆಯ ವೇಳೆ ಎಲ್ಲಾ ಮಾನದಂಡಗಳು ತೃಪ್ತಿಕರವಾಗಿ ಕಾರ್ಯನಿರ್ವಹಿಸಿದವು ಫಲಿತಾಂಶ ನಿರೀಕ್ಷೆಯ ಮಟ್ಟಕ್ಕೆ ಇತ್ತು ಎಂದು ಸೋಮವಾರ ಬಿಡುಗಡೆ ಮಾಡಿದ ಹೇಳಿಕೆ ಎಂದರಲ್ಲಿ ಇಸ್ರೋ ಹೇಳಿದೆ. ಕ್ರಯೋಜೆನಿಕ್ ಇಂಜಿನನ್ನು ಪ್ರೊಪೆಲಾಂಟ್ ಟ್ಯಾಂಕ್ಗಳು ವಿವಿಧ ಹಂತಗಳ ವ್ಯವಸ್ಥೆಗಳು ಮತ್ತು ಸಂಬಂಧಿತ ದ್ರವ ಸಾಗಾಟ ಮಾರ್ಗಗಳೊಂದಿಗೆ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ವಿಲೀನಗೊಳಿಸಿ ಸಮಗ್ರ ಹಾರಾಟ ಹಂತವನ್ನು ಸೃಷ್ಟಿಸಲಾಗುವುದು ಎಂದು ಅದು ತಿಳಿಸಿದೆ ಈ ವರ್ಷದ ಆದಿ ಭಾಗದಲ್ಲಿ ಇಲ್ಲಿನ ಯು ಆರ್ ರಾವ್ ಉಪಗ್ರಹ ಕೇಂದ್ರದಲ್ಲಿ ಚಂದ್ರಯಾನ-3 ಲ್ಯಾಂಡರ್ ಯಶಸ್ವಿಯಾಗಿ ಇಎಂಐ/ಇಎಂಸಿ ಪರೀಕ್ಷೆಗೆ ಒಳಪಟ್ಟಿದೆ.