ಜಾನುವಾರು ಮೇವು ವಿತರಣಾ ಕಾರ್ಯಕ್ರಮ – 2023

ಪಾವಗಡ ಹಾಗೂ ಸುತ್ತಮುತ್ತಲಿನ ರೈತ ಬಾಂಧವರಿಗೆ ಹಾಗೂ ಗೋಪಾಲಕರಿಗೆ ತಿಳಿಸುವುದೇನೆಂದರೆ ಇದೇ ತಿಂಗಳು ತಾ.15-3-2023ನೇ ಬುಧವಾರ ಎಂದಿನಂತೆ ಮೇವು ವಿತರಣಾ ಕೇಂದ್ರವನ್ನು ತೆರೆಯಲಾಗುತ್ತದೆ. ರೈತ ಬಾಂಧವರು ಹಾಗೂ ಗೋಪಾಲಕರು ಈ ಕೂಡಲೇ ತಮ್ಮ ನಿಖರ ಹಾಗೂ ಖಚಿತವಾದ ದನ ಕರುಗಳ, ಎಮ್ಮೆಗಳ ಸಂಖ್ಯೆಯನ್ನು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಕಛೇರಿಯಲ್ಲಿ ಪ್ರತಿದಿನ ಬೆಳಿಗ್ಗೆ 10 ರಿಂದ 12 ಗಂಟೆಯೊಳಗಾಗಿ ನೊಂದಾಯಿಸಬಹುದು. ಈ ಒಂದು ಮಾಹಿತಿಯನ್ನು ಸಂಬಂಧಪಟ್ಟ ಎಲ್ಲ ರೈತ ಬಾಂಧವರಿಗೆ ಹಾಗೂ ಗೋಪಾಲಕರಿಗೆ ತಿಳಿಸಬಹುದು. ಆದಷ್ಟು ಶೀಘ್ರವಾಗಿ ಈ ಮಾಹಿತಿಗಳನ್ನು ನೀಡಿದರೆ ಮೇವು ವಿತರಣಾ ಕಾರ್ಯ ಯೋಜನೆಗೆ ಅನುಕೂಲಕರವಾಗುತ್ತದೆ ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.

You May Also Like