ಪುನೀತ್ ಡಿ.ಎನ್ ಪಿಎಚ್‌ಡಿ ಪದವಿ

ತುಮಕೂರು: ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುಚ್ಛಾಸ್ತç ಮತ್ತು ದೂರಸಂಪರ್ಕ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಪುನೀತ್ ಡಿ.ಎನ್ ರವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ.


ಎಸ್‌ಎಸ್‌ಐಟಿಯಲ್ಲಿ ಹಿರಿಯ ಪ್ರಾಧ್ಯಾಪಕರಾಗಿರುವ ಡಾ.ಎಂ.ಎನ್ ಈಶ್ವರಪ್ಪ ಅವರ ಮಾರ್ಗದರ್ಶನದಲ್ಲಿ “ಪೀಕ್ ಟು ಆವರೇಜ್ ಪವರ್ ರೇಶಿಯೋ ರೆಡ್ಯೂಕ್ಷನ್ ಇನ್‌ಮಲ್ಟಿಪಲ್ ಇನ್‌ಪುಟ್ ಮಲ್ಟಿಪಲ್ ಔಟ್‌ಪುಟ್ ಆರ್ಥೋಗೋನಲ್ ಫ್ರೀಕ್ವೆನ್ಸಿ ಡಿವಿಷನ್ ಮಲ್ಟಿಪ್ಲೆಕ್ಸಿಂಗ್ ಸಿಸ್ಟಮ್”ಎಂಬ ವಿಷಯದ ಅಧ್ಯಯನ ಕುರಿತುsವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯಕ್ಕೆ ಸಲ್ಲಿಸಲಾದ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ನೀಡಲಾಗಿದೆ.
ಪುನೀತ್ ಡಿ.ಎನ್ ಅವರು ಕಳೆದ ೧೧ ವರ್ಷಗಳಿಂದ ಎಸ್‌ಎಸ್‌ಐಟಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ವಿದ್ಯುತ್‌ಶಾಸ್ತç ಮತ್ತು ದೂರಸಂಪರ್ಕ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ.ಎಸ್ ರವಿಪ್ರಕಾಶಹಾಗೂ ಆಡಳಿತ ಮಂಡಳಿಯು ಪುನೀತ್ ಡಿ.ಎನ್ ಅವರಿಗೆ ಅಭಿನಂದಿಸಿದ್ದಾರೆ.

You May Also Like