ವಿಕಿಪೀಡಿಯಕ್ಕೆ 27 ಸಾವಿರ ಡಾಲರ್ ದಂಡ

ಮಾಸ್ಕೋ: ರಷ್ಯಾದ ಮಿಲಿಟರಿಗೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ವಿಕಿಪೀಡಿಯಾದಿಂದ ತೆಗೆದು ಹಾಕಲು ವಿಫಲವಾದ ವಿಕಿಮೀಡಿಯ ಫೌಂಡೇಶನ್ ಗೆ  27000 ಡಾಲರ್ ದಂಡ ವಿಧಿಸಿ ರಷ್ಯಾದ ನ್ಯಾಯಾಲಯ ಮಂಗಳವಾರ ಆದೇಶ ಜಾರಿಗೊಳಿಸಿದೆ.

ಉಕ್ರೇನ್ ನಲ್ಲಿ ರಷ್ಯಾ ನಡೆಸುತ್ತಿರುವ ಯುದ್ಧದ ಕುರಿತು ಕಳೆದ ವರ್ಷ ವಿಕಿಪೀಡಿಯಾದಲ್ಲಿ ಪ್ರಕಟವಾಗಿದ್ದ ಎರಡು ಲೇಖನಗಳಿಗೆ ಸಂಬಂಧಿಸಿದ ಈಗಾಗಲೇ ವಿಕಿಮೀಡಿಯಕ್ಕೆ ರಷ್ಯಾ ದಂಡ ವಿಧಿಸಿದೆ ಇದೀಗ ಮೂರನೇ ಲೇಖನದಲ್ಲಿ ರಷ್ಯಾದ ಸೇನಾ ಘಟಕಗಳ ಬಗ್ಗೆ ತಪ್ಪು ಮಾಹಿತಿ ಪ್ರಸಾರ ಮಾಡಿರುವುದು ಬೆಳಕಿಗೆ ಬಂದಿತ್ತು ಈ ಲೇಖನವನ್ನು ತೆಗೆದುಹಾಕಲು ವಿಕಿ ಮೀಡಿಯಾ ವಿಫಲವಾಗಿರುವುದರಿಂದ 27000 ದಂಡ ವಿಧಿಸಲಾಗಿದೆ ಎಂದು ರಷ್ಯಾದ ನ್ಯಾಯಾಲಯ ಹೇಳಿದೆ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಬಗ್ಗೆ ಇನ್ನು ನಿರ್ಧರಿಸಿಲ್ಲ ಎಂದು ವಿಕಿಮೀಡಿಯ ಹೇಳಿದೆ.

You May Also Like