ಗ್ರೇಸ್ ಮಾರ್ಕ್ಸ್ ಕುರಿತಂತೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ

BIGG NEWS : ಗ್ರೇಸ್ ಮಾರ್ಕ್ಸ್ ಕುರಿತಂತೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ|2nd PUC Exam

ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಿಹಿಸುದ್ದಿಯೊಂದನ್ನು ನೀಡಿದ್ದು, ಪರೀಕ್ಷೆ ನಿಯಮಗಳನ್ನು ಬದಲಾವಣೆ ಮಾಡಲಾಗಿದೆ.

ಫಲಿತಾಂಶವನ್ನು ಸುಧಾರಿಸು ನಿಟ್ಟಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕೆಲವು ನಿಯಮಗಳನ್ನು ಬದಲಾವಣೆ ಮಾಡಲಾಗಿದ್ದು, ಒಂದು ಭಾಷೆಯಲ್ಲಿ ಮತ್ತು ಇನ್ನೊಂದು ಪ್ರಮುಖ ವಿಷಯದಲ್ಲಿ. ವಿದ್ಯಾರ್ಥಿಗಳು ಯಾವುದೇ ಎರಡು ವಿಷಯಗಳಲ್ಲೂ ಒಂದೇ ರೀತಿ ಗ್ರೇಸ್ ಮಾರ್ಕ್ಸ್​​ ಪಡೆಯುತ್ತಾರೆ. ಒಟ್ಟು 600 ಅಂಕಗಳಲ್ಲಿ 210 ಪಡೆಯುವ ವಿದ್ಯಾರ್ಥಿಯು ಗ್ರೇಸ್ ಅಂಕಗಳನ್ನು ಪಡೆಯಲು ಅರ್ಹನಾಗಿರುತ್ತಾನೆ ಎಂದು ಕೆಎಸ್‌ಇಎಬಿಯ ನಿರ್ದೇಶಕ ಗೋಪಾಲಕೃಷ್ಣ ತಿಳಿಸಿದ್ದಾರೆ.

ಮಾರ್ಚ 9 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದ್ದು, ದ್ವಿತೀಯ ಪಿಯುಸಿ ಫಲಿತಾಂಶವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಇಲಾಖೆ ಈ ಬಾರಿಯ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಯಲ್ಲಿ ಎಲ್ಲ ವಿಷಯಗಳಲ್ಲೂ 1 ಅಂಕದ 20 ಪ್ರಶ್ನೆಗಳನ್ನು ಕೇಳಿದೆ. ಈ 20 ಪ್ರಶ್ನೆಗಳಲ್ಲಿ 12 ಬಹುಆಯ್ಕೆ ಪ್ರಶ್ನೆಗಳು, ಕೆಲವು ಬಿಟ್ಟಸ್ಥಳ ತುಂಬಿರಿ ಮತ್ತು ಹೊಂದಿಸಿ ಬರೆಯಿರಿ ಇತ್ಯಾದಿ ಪ್ರಶ್ನೆಗಳನ್ನು ಕೇಳಿದೆ ಎಂದು ಕೆಎಸ್‌ಇಎಬಿಯ ನಿರ್ದೇಶಕ ಗೋಪಾಲಕೃಷ್ಣ ಹೇಳಿದ್ದಾರೆ.

You May Also Like