ಶೂಟಿಂಗ್ ವೇಳೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಬಿದ್ದು ಪಕ್ಕೆಲುಬಿಗೆ ಗಾಯವಾಗಿದೆ. ತಕ್ಷಣವೇ ಬಚ್ಚನ್ ಅವರನ್ನ ಹೈದರಾಬಾದ್‌ನ AIG ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆದ ಬಳಿಕ ಅಮಿತಾಭ್ ಬಚ್ಚನ್ ಮುಂಬೈಗೆ ತೆರಳಿದ್ದಾರೆ.
ಅಮಿತಾಭ್ ಬಚ್ಚನ್ ಹೈದರಾಬಾದ್ ನಲ್ಲಿ ಚಿತ್ರೀಕರಣ ಮಾಡುತ್ತಿರುವ ಸಮಯದಲ್ಲಿ ಈ ಅವಾಂತರ ನಡೆದಿದೆ.
ಆಕ್ಷನ್ ಸಿನಿಮಾವೊಂದರ ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ. ಸದ್ಯ ಯಾರ ಭೇಟಿಗೂ ಅವಕಾಶ ನೀಡಲಾಗುತ್ತಿಲ್ಲ. ವೈದ್ಯರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಅಭಿಮಾನಿಗಳು ಯಾವುದೇ ಕಾರಣಕ್ಕೂ ಆತಂಕ ಪಡಬಾರದು. ಯಾವುದೇ ಪ್ರಾಣಾಪಾಯವಿಲ್ಲ ಎಂದಿದ್ದಾರೆ.
ಪ್ರಾಜೆಕ್ಟ್ K ಚಿತ್ರೀಕರಣ
ಈ ಹಿಂದೆ ಕೂಲಿ ಚಲನಚಿತ್ರ ವೇಳೆಯೂ ಬಚ್ಚನ್‌ಗೆ ಇದೇ ರೀತಿಯ ಗಾಯವಾಗಿತ್ತು. ಇದೀಗ ಹೈದರಾಬಾದ್‌ನಲ್ಲಿ ಪ್ರಭಾಸ್ ಅಭಿನಯದ ಪ್ರಾಜೆಕ್ಟ್ ಕೆ ಚಿತ್ರೀಕರಣದ ವೇಳೆ ಬಿದ್ದು ಗಾಯಗೊಂಡಿದ್ದಾರೆ. ಆಯಕ್ಷನ್ ದೃಶ್ಯದ ಚಿತ್ರೀಕರಣದ ಸಮಯದಲ್ಲಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪಕ್ಕೆಲುಬಿನ ಕಾರ್ಟಿಲೆಜ್ ಮುರಿದಿದೆ
ಘಟನೆಯಿಂದ ಅಮಿತಾಭ್ ಅವರ ಪಕ್ಕೆಲುಬಿನ ಕಾರ್ಟಿಲೆಜ್ ಮುರಿದಿದೆ. ಬಲ ಪಕ್ಕೆಲುಬಿನ ಸ್ನಾಯುಗಳಿಗೂ ಗಾಯವಾಗಿದೆ. ಸದ್ಯ ಹೈದರಾಬಾದ್‌ನ AIG ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗಿದ್ದು, ವೈದ್ಯರ ಸಲಹೆ ಮೇರೆಗೆ ಸ್ಕ್ಯಾನ್ ಮಾಡಲಾಗಿದೆ. ಇನ್ನು ಈ ಘಟನೆ ಬಗ್ಗೆ ಅಮಿತಾಭ್ ಬಚ್ಚನ್, ಅತ್ಯಂತ ನೋವಿನ ಸಮಯದಲ್ಲಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.