ಸಾಂದರ್ಭಿಕ ಚಿತ್ರ
ತಾಲ್ಲೂಕಿನ ಕೋರ ಹೋಬಳಿ ಲಿಂಗಾಪುರ ಶ್ರೀ ಕೊಳಗ ಮಹಾಲಕ್ಷಿö್ಮ ದೇವಸ್ಥಾನ ವತಿಯಿಂದ ಏಪ್ರಿಲ್ 14ರಂದು ನೂತನವಾಗಿ ನಿರ್ಮಾಣವಾಗಿರುವ ಸಮುದಾಯ ಭವನ ಉದ್ಘಾಟನೆ ಹಾಗೂ ಉಚಿತ ಸಾಮೂಹಿಕ ವಿವಾಹವನ್ನು ಏರ್ಪಡಿಸಲಾಗಿದೆ.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಮ.ನಿ.ಪ್ರ.ಸ್ವ.ಶ್ರೀಶ್ರೀಶ್ರೀ ಡಾ: ನಿರ್ಮಲಾನಂದ ಮಹಾಸ್ವಾಮೀಜಿ, ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಶ್ರೀಶ್ರೀಶ್ರೀ ನಂಜಾವಧೂತ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಾಮೂಹಿಕ ವಿವಾಹ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ವಿವಾಹವಾಗಲಿಚ್ಛಿಸುವ ವಧು-ವರರು ತಮ್ಮ ವೈಯಕ್ತಿಕ ಮಾಹಿತಿಯನ್ನು ಶ್ರೀ ಕೊಳಗ ಮಹಾಲಕ್ಷ್ಮೀ ದೇವಸ್ಥಾನ ಟ್ರಸ್ಟ್ ಲಿಂಗಾಪುರ, ಕೋರಾ ಹೋಬಳಿ, ತುಮಕೂರು ಇವರಿಗೆ ಸಲ್ಲಿಸಬಹುದಾಗಿದೆ. ವಿವಾಹವಾಗ ಬಯಸುವ 18 ವರ್ಷ ತುಂಬಿದ ವಧುವಿಗೆ ಮಾಂಗಲ್ಯ, ಸೀರೆ ಹಾಗೂ 21 ವರ್ಷ ವಯೋಮಾನದ ವರನಿಗೆ ಒಂದು ಜೊತೆ ವಸ್ತ್ರ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಜಿ.ಎಂ. ನರಸಿಂಹರಾಜು(ಮೊ.ಸಂ.9538671087) ಅಥವಾ ಮುದ್ದರಂಗಯ್ಯ(ಮೊ.ಸಂ.8105039264), ಡಿ.ಇ.ಮಲ್ಲಯ್ಯ(ಮೊ.ಸಂ.9482433025) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.