ಕ್ರೀಡಾ ಶಾಲೆ/ವಸತಿ ನಿಲಯ ಪ್ರವೇಶ: ನಾಳೆ ಆಯ್ಕೆ ಪ್ರಕ್ರಿಯೆ

ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ೨೦೨೩-೨೪ನೇ ಸಾಲಿನ ಜಿಲ್ಲಾ ಕ್ರೀಡಾ ವಸತಿ ನಿಲಯ ಪ್ರವೇಶಕ್ಕಾಗಿ ಮಾರ್ಚ್ ೮ರಂದು ಪ್ರಸ್ತುತ ೪ನೇ ತರಗತಿ ವ್ಯಾಸಂಗ (ಜೂನ್ ೨೦೨೩ಕ್ಕೆ ೫ನೇ ತರಗತಿ ಸೇರಲು ಅರ್ಹರಿರುವ) ಮಾಡುತ್ತಿರುವ ವಿದ್ಯಾರ್ಥಿಗಳ ಆಯ್ಕೆ ನಡೆಯಲಿದೆ.
ಆಯ್ಕೆ ಪ್ರಕ್ರಿಯೆಯಲ್ಲಿ ಜಿಮ್ನಾಸ್ಟಿಕ್, ಅಥ್ಲೆಟಿಕ್ಸ್ ಮತ್ತು ವಾಲಿಬಾಲ್ ಕ್ರೀಡಾಪಟುಗಳು ಭಾಗವಹಿಸಬಹುದು. ಆಸಕ್ತರು ಮಾರ್ಚ್ ೮ರ ಬೆಳಿಗ್ಗೆ ೮.೩೦ ಗಂಟೆಗೆ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಹಾಜರಿರಬೇಕು.
ಹೆಚ್ಚಿನ ಮಾಹಿತಿಗಾಗಿ ೦೮೧೬-೨೨೭೮೧೨೪ನ್ನು ಸಂಪರ್ಕಿಸಬಹುದಾಗಿದೆ. ದೈಹಿಕ ಪರೀಕ್ಷೆ ನಡೆಯುವುದರಿಂದ ಅಭ್ಯರ್ಥಿಗಳು ಕ್ರೀಡಾ ಸಮವಸ್ತçದಲ್ಲಿ ಹಾಜರಾಗತಕ್ಕದ್ದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜು ತಿಳಿಸಿದ್ದಾರೆ.

You May Also Like