ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ) ತುಮಕೂರು ವತಿಯಿಂದ ಮಾರ್ಚ್ 09ರ ಗುರುವಾರ ಸಂಜೆ 6:30ಕ್ಕೆ ತುಮಕೂರು ತಾಲೂಕಿನ ಮೆಳೇಹಳ್ಳಿಯ ವಿ.ರಾಮಮೂರ್ತಿ ರಂಗಸ್ಥಳದಲ್ಲಿ ಡಾ.ಗಿರೀಶ್ ಕಾರ್ನಾಡ್ ಅವರ ಯಾಯಾತಿ ನಾಟಕದ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಹಿರಿಯ ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಬರೆದಿರುವ ಯಾಯತಿ ನಾಟಕವನ್ನು ಅನುರಾಗ್ ಭೀಮಸಂದ್ರ ಅವರ ನಿರ್ದೇಶನದಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಕಲಾವಿದರು ಅಭಿನಯಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಯುವ ಈ ನಾಟಕ ಪ್ರದರ್ಶನಕ್ಕೆ ಉಚಿತ ಪ್ರವೇಶವಿದೆ.
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ರಂಗಕಲೆಯನ್ನು ಉಳಿಸಿ ಬೆಳೆಸಲು ನಿರಂತರ ಶ್ರಮಿಸುತ್ತಿರುವ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ) ತುಮಕೂರು ಇವರು ಮಾರ್ಚ್ 09ರಂದು ಗುರುವಾರ ಸಂಜೆ 6:30ಕ್ಕೆ ನಡೆಯುವ ಯಾಯತಿ ನಾಟಕ ಪ್ರಯೋಗಕ್ಕೆ ಕೋರಾ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ನಾಗರತ್ನಮ್ಮ ಎಲ್, ಮೆಳೇಹಳ್ಳಿಯ ಹಾರ್ಮೋನಿಯಂ ಮಾಸ್ಟರ್ ಅಡವೀಶಯ್ಯ, ಭಾರತೀಯ ಜೀವವಿಮಾ ನಿಗಮದ ಭರತ್ ಕುಮಾರ್ ಜೈನ್, ಮಕ್ಕಳ ತಜ್ಞರು ಹಾಗೂ ಬಿಜೆಪಿ ಮುಖಂಡರಾದ ಡಾ. ಲಕ್ಷ್ಮಿಕಾಂತ್, ಸಾಮಾಜಿಕ ಚಿಂತಕರಾದ ಡಮರುಗ ಉಮೇಶ್ ಅವರುಗಳು ಚಾಲನೆ ನೀಡಲಿದ್ದಾರೆ.
ಈ ರಂಗಪ್ರಯೋಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿ, ಯಶಸ್ವಿಗೊಳಿಸುವಂತೆ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಶಿವಕುಮಾರ್ ತಿಮ್ಮಲಾಪುರ ಮನವಿ ಮಾಡಿದ್ದಾರೆ.