ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ

ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಸ್/ಭಿತ್ತಿಪತ್ರ/ತೋರಣ/ಫ್ಲೆಕ್ಸ್/ಬಾವುಟ/ತಟ್ಟೆ/ಲೋಟ/ಚಮಚ/ಊಟದ ಮೇಜಿನ ಮೇಲೆ ಹರಡುವ ಹಾಳೆ/ಕ್ಲಿಂಗ್‌ಫಿಲ್ಮ್ಸ್ ಹಾಗೂ ಥರ್ಮಾಕೋಲ್ , ಪಾಲಿ ಪ್ರೊಪೈಲಿನ್ ಬ್ಯಾಗ್, ಪ್ಲಾಸ್ಟಿಕ್ ಮೈಕ್ರೋಬೀಡ್ಸ್ನಿಂದ ತಯಾರಾದ ವಸ್ತುಗಳ ಸಂಗ್ರಹಣೆ/ಮಾರಾಟ/ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯ ಯಾವುದೇ ವ್ಯಕ್ತಿ, ಅಂಗಡಿ ಮಾಲೀಕ, ಮಾರಾಟಗಾರ, ಸಗಟು ಮಾರಾಟಗಾರ, ಚಿಲ್ಲರೆ ವ್ಯಾಪಾರಿ, ಉದ್ದಿಮೆದಾರರು ಪ್ಲಾಸ್ಟಿಕ್‌ನಿಂದ ತಯಾರಾದ ವಸ್ತುಗಳ ಸಂಗ್ರಹಣೆ/ಮಾರಾಟ/ಬಳಕೆ ಮಾಡುವ ಮೂಲಕ ನಿಷೇಧಾದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು.
ಯಾವುದೇ ದಂಡ ಹಾಗೂ ಮೊಕದ್ದಮೆ ಹೂಡಲು ಪಾಲಿಕೆಗೆ ಅವಕಾಶ ನೀಡದೆ ಪ್ಲಾಸ್ಟಿಕ್ ನಿಷೇಧ ಮಾಡುವ ಮೂಲಕ ಸಾರ್ವಜನಿಕರು ‘ಸ್ವಚ್ಛ ತುಮಕೂರು ನಗರ’ವನ್ನಾಗಿ ನಿರ್ಮಾಣ ಮಾಡಲು ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

You May Also Like