ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: ಇತಿಹಾಸ, ಬಣ್ಣ, ಈ ದಿನದ ವಿಶೇಷತೆಯೇನು?

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು

ಅಂತರರಾಷ್ಟ್ರೀಯ ಮಹಿಳಾ ದಿನ (IWD) ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಮಹಿಳೆಯರ ಕೊಡುಗೆಯನ್ನು ನೆನಪಿಸುವ ದಿನವಾಗಿದೆ. ಪ್ರತಿವರ್ಷ ಮಾರ್ಚ್ 8 ರಂದು ಆಚರಿಸುವ ಈ ದಿನವನ್ನು ಮೊದಲು 1911 ರಲ್ಲಿ ಜಾರಿಗೆ ತರಲಾಯಿತು.

ಸುಮಾರು ಒಂದು ಶತಮಾನದಿಂದ ಈ ದಿನವನ್ನು ವಿಶೇಷವೆಂದು ಪರಿಗಣಿಸಲಾಗಿದೆ. ವಿಶ್ವಾದ್ಯಂತ ಲಿಂಗ ಸಮಾನತೆಯನ್ನು ಸಾಧಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.

ಮಹಿಳಾ ದಿನಾಚರಣೆಯ ಥೀಮ್: ಈ ವರ್ಷದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಶ್ವಸಂಸ್ಥೆ ಥೀಮ್ “ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ” ಎಂದು ಘೋಷಿಸಿದೆ.

ಬಣ್ಣದ ವಿಶಿಷ್ಟತೆ
ಅಂತರಾಷ್ಟ್ರೀಯ ಮಹಿಳಾ ದಿನವನ್ನು ನೇರಳೆ, ಹಸಿರು ಮತ್ತು ಬಿಳಿ ಬಣ್ಣಗಳಲ್ಲಿ ಪ್ರತಿನಿಧಿಸಲಾಗುತ್ತದೆ. ನೇರಳೆ ಬಣ್ಣವು ನ್ಯಾಯ ಮತ್ತು ಸಮಚಿತ್ತತೆಯ ಸಂಕೇತವಾಗಿದ್ದರೆ ಹಸಿರು ಆಶಾವಾದದ ಸಂಕೇತವಾಗಿದೆ ಮತ್ತು ಬಿಳಿ ಬಣ್ಣವು ಶುದ್ಧತೆಯ ಸಂಕೇತವಾಗಿದೆ. ಮಹಿಳೆಯರ ಸಾಮಾಜಿಕ ಮತ್ತು ರಾಜಕೀಯ ಒಕ್ಕೂಟದ ಪ್ರಸ್ತಾವನೆಯ ಮೇರೆಗೆ 1908 ರಲ್ಲಿ ಯುನೈಟೆಡ್ ಕಿಂಗ್‌ಡಮ್ ಈ ಬಣ್ಣಗಳನ್ನು ನಿಯೋಜಿಸಿತು.

ಇತಿಹಾಸ

ಮಹಿಳಾ ದಿನವು 19 ನೇ ಶತಮಾನದ ಆರಂಭದಲ್ಲಿ ಆಮೂಲಾಗ್ರ ಸಿದ್ಧಾಂತಗಳು ಬೆಳೆದ ಪ್ರಕ್ಷುಬ್ಧ ಕಾಲದಲ್ಲಿ ಪ್ರಾರಂಭವಾಯಿತು. ಮಹಿಳೆಯರು 1908 ರಲ್ಲಿ ಸುಧಾರಣೆಗಾಗಿ ಚಳುವಳಿಯಲ್ಲಿ ಭಾಗವಹಿಸಿದರು ಮತ್ತು ಮಹಿಳೆಯರ ವಿರುದ್ಧದ ಕಿರುಕುಳ ಮತ್ತು ಅಸಮಾನತೆಯ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಿದರು. ಅದೇ ಸಮಯದಲ್ಲಿ, 15,000 ಮಹಿಳೆಯರು ವೇತನ, ಕೆಲಸದ ಸಮಯ ಮತ್ತು ಮತದಾನದ ಹಕ್ಕುಗಳ ವಿಷಯಗಳ ಮೇಲೆ ನ್ಯೂಯಾರ್ಕ್‌ನಿಂದ ಮೆರವಣಿಗೆ ನಡೆಸಿದರು.

1910 ರಲ್ಲಿ ಕೋಪನ್ ಹ್ಯಾಗನ್, ಡೆನ್ಮಾರ್ಕ್ ದುಡಿಯುವ ಮಹಿಳೆಯರ ಎರಡನೇ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿತು. ಜರ್ಮನಿಯ ಮಾರ್ಕ್ಸ್‌ವಾದಿ ಸಿದ್ಧಾಂತಿ ಕ್ಲಾರಾ ಝೆಟ್ಕಿನ್, ಪ್ರತಿ ದೇಶಗಳಲ್ಲಿ ವಾರ್ಷಿಕವಾಗಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಬೇಕು ಎಂದು ಸಲಹೆ ನೀಡಿದರು, 17 ದೇಶಗಳ 100 ಮಹಿಳೆಯರು, ಒಕ್ಕೂಟಗಳು, ಸಮಾಜವಾದಿ ಪಕ್ಷಗಳು, ಕೆಲಸ ಮಾಡುವ ಮಹಿಳಾ ಸಂಘಟನೆಗಳು ಮತ್ತು ಫಿನ್ನಿಷ್ ಸಂಸತ್ತಿಗೆ ಚುನಾಯಿತರಾದ ಮೂವರು ಮಹಿಳೆಯರು ಈ ಪ್ರಸ್ತಾಪವನ್ನು ಸರ್ವಾನುಮತದಿಂದ ಅನುಮೋದಿಸಿದಾಗ ಅಂತರರಾಷ್ಟ್ರೀಯ ಮಹಿಳಾ ದಿನ ಜಾರಿಯಾಯಿತು, 1911 ರಲ್ಲಿ, ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್ನಲ್ಲಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ನಂತರ ಮಾರ್ಚ್ 8 ಅನ್ನು ಅಂತರರಾಷ್ಟ್ರೀಯ ಮಹಿಳಾ ದಿನವಾಗಿ ಆಚರಿಸಲು ಪ್ರಾರಂಭಿಸಿತು. 1975 ರಲ್ಲಿ, ವಿಶ್ವಸಂಸ್ಥೆಯು ಇದನ್ನು ಮೊದಲ ಬಾರಿಗೆ ಗುರುತಿಸಿದ ಬಳಿಕ ವಿಶ್ವದಾದ್ಯಂತ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

You May Also Like