ನಗರದ ಗಾಂಧಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರು, ಉಪವಿಭಾಗ-1ರ ನಿರೀಕ್ಷಕರು ಹಾಗೂ ಉಪವಿಭಾಗ-2ರ ನಿರೀಕ್ಷಕರ ಕಚೇರಿಗಳನ್ನು ರಿಂಗ್ ರಸ್ತೆ ಬಡ್ಡಿಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಮಾಪನ ಸೌಧ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
ಮೇಲ್ಕಂಡ ಕಾನೂನು ಮಾಪನ ಶಾಸ್ತç ಇಲಾಖಾ ಕಚೇರಿಗಳನ್ನು ಸಂಪರ್ಕಿಸಲಿಚ್ಛಿಸುವ ಜಿಲ್ಲೆಯ ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳು ತೂಕ ಮತ್ತು ಅಳತೆಯ ಉತ್ಪಾದಕರು, ಮಾರಾಟಗಾರರು, ದುರಸ್ಥಿದಾರರು ಹಾಗೂ ಗ್ರಾಹಕರು ಇನ್ನು ಮುಂದೆ ರಿಂಗ್‌ರಸ್ತೆ ಬಡ್ಡಿಹಳ್ಳಿಯಲ್ಲಿರುವ ಮಾಪನ ಸೌಧ ಕಟ್ಟಡಕ್ಕೆ ಭೇಟಿ ನೀಡಿ ಪ್ರಯೋಜನ ಪಡೆಯಬಹುದಾಗಿದೆ ಎಂದು ಕಾನೂನು ಮಾಪನಶಾಸ್ತç ಸಹಾಯಕ ನಿಯಂತ್ರಕರು ತಿಳಿಸಿದ್ದಾರೆ.