ಕುಣಿಗಲ್ ತಾಲ್ಲೂಕು ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯ ಅಂಗನವಾಡಿ/ ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 8 ಕಾರ್ಯಕರ್ತೆ ಹಾಗೂ 20 ಸಹಾಯಕಿಯರ ಹುದ್ದೆಗಳನ್ನು ಗೌರವಧನ ಆಧಾರದನ್ವಯ ಭರ್ತಿ ಮಾಡಲು ಅರ್ಹ ಮಹಿಳಾ ಆಭ್ಯರ್ಥಿಗಳಿಂದ ಆಫ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಯಲಿಯೂರು, ಜಾಣಗೆರೆ, ಬಸವನಮತ್ತೀಕೆರೆ, ಹಾಲಗೆರೆ, ಎಳವರಹಟ್ಟಿ, ಗುನ್ನಾಗರೆಕಾಲೋನಿ, ಕಟ್ಟೆಪಾಳ್ಯ(ಮಿನಿ) ಹಾಗೂ ಬೆಟ್ಟಹಳ್ಳಿ(ಮಿನಿ) ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆ ಹುದ್ದೆಯು ಖಾಲಿ ಇದ್ದು, ಎಲ್ಲಾ ಹುದ್ದೆಗಳು ಇತರೆ ವರ್ಗದವರಿಗೆ ಮೀಸಲಿಡಲಾಗಿದೆ.
ಬಾಗೇನಹಳ್ಳಿ, ಶೆಟ್ಟಿಗೆರೆ, ಕೀಲಾರ, ಭೈರನಾಯಕನಹಳ್ಳಿ, ತಂಗಚ್ಚಹಳ್ಳಿ, ಚಿಕ್ಕಮಾವತ್ತೂರು, ಎ.ಹೊಸಹಳ್ಳಿ, ರಾಘವನ ಹೊಸೂರು, ಮಲ್ಲಘಟ್ಟ, ಚೆನ್ನತಿಮ್ಮನಪಾಳ್ಯ, ಸೂಳೆಕುಪ್ಪೆ, ಕೋಘಟ್ಟ, ಬೋರಲಿಂಗನಪಾಳ್ಯ-2, ಕೊತ್ತಗೆರೆ-2, ಕೋಟೆ-4, ಕೆಹೆಚ್‌ಬಿ ಕಾಲೋನಿ/ಕರೆಕಲ್ಲುಪ್ರದೇಶ, ಅಗ್ರಹಾರ-2, ಜನತಾ ಕಾಲೋನಿ-2, ಎಳವರಹಟ್ಟಿ ಹಾಗೂ ಗುನ್ನಾಗರೆ ಕಾಲೋನಿಯಲ್ಲಿ ಅಂಗನವಾಡಿ ಸಹಾಯಕಿ ಹುದ್ದೆಗಳು ಖಾಲಿಯಿವೆ. ರಾಘವನ ಹೊಸೂರು ಕೇಂದ್ರದ ಹುದ್ದೆಯು ಪ.ಜಾತಿಗೆ ಮೀಸಲಿಡಲಾಗಿದೆ. ಮಲ್ಲಘಟ್ಟ, ಕೊತ್ತಗೆರೆ-2, ಕೋಟೆ-4 ಹಾಗೂ ಜನತಾ ಕಾಲೋನಿ-2 ಕೇಂದ್ರದ ಹುದ್ದೆಗಳು ಅಲ್ಪಸಂಖ್ಯಾತ (ಇತರೆ)ರ ವರ್ಗಕ್ಕೆ ಮೀಸಲಿಡಲಾಗಿದ್ದು, ಉಳಿದ ಕೇಂದ್ರದ ಸಹಾಯಕಿ ಹುದ್ದೆಗಳು ಇತರೆ ವರ್ಗಗಳಿಗೆ ಮೀಸಲಿಡಲಾಗಿದೆ.
ಆಸಕ್ತರು ಭರ್ತಿ ಮಾಡಿದ ಅರ್ಜಿಯನ್ನು ಏಪ್ರಿಲ್ 5ರೊಳಗಾಗಿ ಕುಣಿಗಲ್ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.