ತಿಪಟೂರು: ಸಹಾಯಧನದಡಿ ಕೃಷಿ ಉಪಕರಣಗಳ ವಿತರಣೆಗಾಗಿ ಅರ್ಜಿ ಆಹ್ವಾನ

ತಿಪಟೂರು ತಾಲೂಕಿನಲ್ಲಿ ಸಹಾಯಧನದಡಿ ವಿವಿಧ ಕೃಷಿ ಉಪಕರಣಗಳನ್ನು ವಿತರಿಸಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ರೈತರಿಗೆ ಪವರ್ ಟಿಲ್ಲರ್, ಪವರ್ ವೀಡರ್, ರೋಟರಿ ಟಿಲ್ಲರ್, ಕಳೆ ಕೊಚ್ಚುವ ಮಿಶಿನ್, ಡೀಸೆಲ್ ಮೊಟಾರ್, 5 ಹಲ್ಲಿನ ನೇಗಿಲು, 9 ಹಲ್ಲಿನ ನೇಗಿಲು, ಕಲ್ಟಿವೇಟರ್, ಲೆವೆಲ್ಲರ್ ಹಾಗೂ ಇತರೆ ಯಂತ್ರೋಪಕರಣಗಳನ್ನು ಸಹಾಯಧನದಡಿ ವಿತರಣೆ ಮಾಡಲಾಗುವುದು.
ಸಾಮಾನ್ಯ ವರ್ಗದ ರೈತರಿಗೆ ಶೇ.50ರಷ್ಟು ಸಹಾಯಧನ ಸೌಲಭ್ಯದಡಿ ಉಪಕರಣಗಳನ್ನು ವಿತರಿಸಲಾಗುವುದು. ಆಸಕ್ತ ರೈತರು ತಮ್ಮ ಅರ್ಜಿಯನ್ನು ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಸಲ್ಲಿಸಬಹುದು. ಅರ್ಜಿಯೊಂದಿಗೆ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್, ಒಂದು ಭಾವಚಿತ್ರ, 20 ರೂ.ಗಳ ಛಾಪಾಕಾಗದ ಲಗತ್ತಿಸಬೇಕು. ಟ್ರಾಕ್ಟರ್ ಚಾಲಿತ ಉಪಕರಣಗಳಿಗಾಗಿ ಟ್ರಾಕ್ಟರ್ ಆರ್.ಸಿ. ಪ್ರತಿಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬೇಕೆAದು ತಿಪಟೂರು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You May Also Like