15,000 ಶಾಲಾ ಶಿಕ್ಷಕರ ನೇಮಕಾತಿ: ಇಂದು 4 ಗಂಟೆಗೆ 1:1 ಮುಖ್ಯ ಆಯ್ಕೆ ಪಟ್ಟಿ ಪ್ರಕಟ – ಸಚಿವ ಬಿ.ಸಿ ನಾಗೇಶ್ ಘೋಷಣೆ

Karnataka Teacher Recruitment: 15,000 ಶಾಲಾ ಶಿಕ್ಷಕರ ನೇಮಕಾತಿ: ಇಂದು 4 ಗಂಟೆಗೆ 1:1 ಮುಖ್ಯ ಆಯ್ಕೆ ಪಟ್ಟಿ ಪ್ರಕಟ - ಸಚಿವ ಬಿ.ಸಿ ನಾಗೇಶ್ ಘೋಷಣೆ

ಬೆಂಗಳೂರು: ಹೈಕೋರ್ಟ್ ಸೂಚನೆಯ ಬಳಿಕ 15,000 ಶಾಲಾ ಶಿಕ್ಷಕರ ನೇಮಕಾತಿಯ ( Karnataka Teacher Recruitment ) ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಈಗಾಗಲೇ ಶಿಕ್ಷಣ ಇಲಾಖೆ ( Education Department ) ಪ್ರಕಟಿಸಿತ್ತು. ಈ ಪಟ್ಟಿಗೆ ಆಕ್ಷೇಪಣೆ ಸಲ್ಲಿಕೆಯ ನಂತ್ರ, ಇಂದು ಸಂಜೆ 4 ಗಂಟೆಗೆ 1:1 ಮುಖ್ಯ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತಿದೆ.

ಈ ಕುರಿತಂತೆ ಟ್ವಿಟ್ ಮಾಡಿ ಮಾಹಿತಿ ನೀಡಿರುವಂತ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ( Minister BC Nagesh ) ಅವರು, 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8) ನೇಮಕಾತಿ ಸಂಬಂಧಿಸಿದಂತೆ 1:1 ಮುಖ್ಯ ಆಯ್ಕೆ ಪಟ್ಟಿಯನ್ನು ( Finale Selection List ) ಇಂದು 4 ಗಂಟೆ ನಂತರ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

15 ಸಾವಿರ ಶಾಲಾ ಶಿಕ್ಷಕರ ನೇಮಕಾತಿ ( School Teacher Recruitment ) ಸಂಬಂಧ ತಂದೆಯ ಆದಾಯವನ್ನು ಪರಿಗಣಿಸುವಂತೆ ಅನೇಕ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಅರ್ಜಿಯನ್ನು ಪರಿಶೀಲನೆ ನಡೆಸಿ, ಪಟ್ಟಿಯನ್ನು ರದ್ದುಗೊಳಿಸಿ, ಹೊಸದಾಗಿ ಅಭ್ಯರ್ಥಿಗಳ ತಂದೆಯ ಆದಾಯ, ಜಾತಿಯನ್ನು ಪರಿಗಣಿಸುವಂತೆ ಸೂಚಿಸಿತ್ತು.

ಈ ಸೂಚನೆಯ ಬಳಿಕ ಶಿಕ್ಷಣ ಇಲಾಖೆಯಿಂದ ಕೆಲ ದಿನಗಳ ಹಿಂದೆ 15,000 ಶಾಲಾ ಶಿಕ್ಷಕರ ನೇಮಕಾತಿ ಸಂಬಂಧ 1:1 ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿತ್ತು. ಅಲ್ಲದೇ ಆಕ್ಷೇಪಣೆಗಳಿದ್ದರೇ ಸಲ್ಲಿಸುವಂತೆಯೂ ತಿಳಿಸಿತ್ತು. ಈ ಬಳಿಕ ಇಂದು ಪರಿಷ್ಕರಿಸಿ, ಅಂತಿಮ ಆಯ್ಕೆ ಪಟ್ಟಿಯನ್ನು 4 ಗಂಟೆಗೆ ಆಯೋಗದ ಜಾಲತಾಣ https://www.schooleducation.kar.nic.in/ ದಲ್ಲಿ ಪ್ರಕಟಿಸಲಿದೆ.

You May Also Like