ಇಂದು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ಫೋನ್ ಇನ್ ಕಾರ್ಯಕ್ರಮ

ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಸಂಬಂಧಿಸಿದಂತೆ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ಮಾರ್ಚ್ 9ರಂದು ಫೋನ್ ಇನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು.
ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಿ ಆತ್ಮ ವಿಶ್ವಾಸ ತುಂಬಲು ವಿವಿಧ ವಿಷಯಗಳಲ್ಲಿನ ಕ್ಲಿಷ್ಟ ಕಲಿಕಾಂಶ, ಪರೀಕ್ಷೆಗೆ ಸಂಬಂಧಿಸಿದ  ಗೊಂದಲ/ ಸಂಶಯಗಳನ್ನು ನಿವಾರಿಸುವ ದೃಷ್ಟಿಯಿಂದ ಈ ಫೋನ್ ಇನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ವಿದ್ಯಾರ್ಥಿಗಳು ಬೆಳಿಗ್ಗೆ 10.30 ರಿಂದ 1.30 ಗಂಟೆ ಅವಧಿಯಲ್ಲಿ ಈ ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವ ಮೂಲಕ ವಿವಿಧ ವಿಷಯಗಳಲ್ಲಿನ ತಮಗಿರುವ ಸಂಶಯಗಳನ್ನು ನಿವಾರಿಸಿಕೊಳ್ಳಬಹುದಾಗಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ.
ಪ್ರಥಮ ಭಾಷೆ ಕನ್ನಡ (9740209569, 9964616515), ದ್ವಿತೀಯ ಭಾಷೆ ಇಂಗ್ಲೀಷ್ (9964113546, 9741857210), ತೃತೀಯ ಭಾಷೆ ಹಿಂದಿ(8904641361, 9481667769), ಗಣಿತ (8310804554, 9844588941), ಸಮಾಜ ವಿಜ್ಞಾನ (9741857210, 9535091561), ವಿಜ್ಞಾನ (7760844515, 9901080705).

You May Also Like