ಶಿರಾ: ಅಂಗನವಾಡಿ ಕೇಂದ್ರದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಶಿರಾ ತಾಲ್ಲೂಕು ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯ ಅಂಗನವಾಡಿ/ ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 9 ಕಾರ್ಯಕರ್ತೆ, 1 ಮಿನಿ ಅಂಗನವಾಡಿ ಕಾರ್ಯಕರ್ತೆ ಹಾಗೂ 46 ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮಹಿಳಾ/ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವವರು 19 ರಿಂದ 35 ವರ್ಷ ವಯೋಮಾನದೊಳಗಿರಬೇಕು. ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ತಮ್ಮ ಅರ್ಜಿಯನ್ನು ಏಪ್ರಿಲ್ 6 ರೊಳಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಸ್ತ್ರೀ ಶಕ್ತಿ ಭವನ, ಹಳೆ ಆಸ್ಪತ್ರೆ ಹಿಂಭಾಗ, ಶಿರಾ ಇವರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ವಾ.ಸಂ. 08135-277578 ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕೆ.ರಂಗನಹಳ್ಳಿ, ಬೇವಿನಹಳ್ಳಿ-1, ಚೆನ್ನನಕುಂಟೆ-1, ಯಾದಲಡಕುಗೊಲ್ಲರಹಟ್ಟಿ, ಅಪ್ಪಿಹಳ್ಳಿ, ಜ್ಯೋತಿನಗರ-2, ಜಾನ್‌ಕಲ್(ಬಸವನಹಳ್ಳಿ) ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹುದ್ದೆಗಳು ಸಾಮಾನ್ಯವರ್ಗಕ್ಕೆ ಮೀಸಲಿಡಲಾಗಿದ್ದು; ತಿಪ್ಪನಹಳ್ಳಿ-2(ಅಂಬೇಡ್ಕರ್ ನಗರ), ಗುಂಗರಪೇಂಟೆ ಕೇಂದ್ರದ ಕಾರ್ಯಕರ್ತೆ ಹುದ್ದೆಗಳು ಪ.ಜಾತಿಗೆ ಹಾಗೂ ಮೂಡ್ಲೇನಹಳ್ಳಿ ಕೇಂದ್ರದ ಮಿನಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಯು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.
ಮುಸುಕಲೋಟಿ, ಪೂಜಾರ್ ಮುದ್ದೇನಹಳ್ಳಿ ಗೇಟ್, ಪದ್ಮಾಪುರ ತಗ್ಗಿಹಳ್ಳಿ, ಕರೆಕಲ್ಲಹಟ್ಟಿ, ತಿಪ್ಪನಹಳ್ಳಿ-2(ಅಂಬೆಡ್ಕರ್ ನಗರ), ಗುಂಗರಪೇಂಟೆ  ಹಾಗೂ ಬಾಲೇನಹಳ್ಳಿ ತಾಂಡ ಅಂಗನವಾಡಿ ಕೇಂದ್ರದ ಹುದ್ದೆಗಳು ಪ.ಜಾತಿಗೆ; ಕರಾದಿ ಮೊಹಲ್ಲಾ ಹಾಗೂ ಗಂಡಿಹಳ್ಳಿ ಮಠ ಕೇಂದ್ರದ ಹುದ್ದೆಗಳು ಸಾಮಾನ್ಯ(ಅಲ್ಪಸಂಖ್ಯಾತ) ವರ್ಗಕ್ಕೆ; ಗಾಣದಹುಣಸೆ, ಜಾನಕಲ್(ಬಸವನಹಳ್ಳಿ) ಹಾಗೂ ಹೊಸಬುರ್ಜು ಕೇಂದ್ರದ ಸಹಾಯಕಿ ಹುದ್ದೆಗಳು ಪ.ಪಂಗಡಕ್ಕೆ ಮೀಸಲಿಡಲಾಗಿದೆ.ಅದೇ ರೀತಿ, ಗೋಣಿಹಳ್ಳಿ, ಚಿಕ್ಕ ಬಾಣಗೆರೆ, ಹುಂಜನಾಳು, ದೊಡ್ಡನಹಳ್ಳಿ, ಕೊಟ್ಟ-1, ಹೇರೂರು, ಮಾರನಗೆರೆ, ಮೇಕೆರೆಹಳ್ಳಿ, ದೇವರಹಟ್ಟಿ, ಬಂದಕುಂಟೆ ಗೊಲ್ಲರಹಟ್ಟಿ, ಯರಗುಂಟೆ, ಪುರ, ನಾಯಕರಹಟ್ಟಿ, ಸಂತೆಪೇಟೆ-2, ಚಿಕ್ಕದಾಸರಹಳ್ಳಿ, ಕರಿರಾಮನಹಳ್ಳಿ, ದೇವರಹಳ್ಳಿ, ಶಾಗದಡು-2, ರಾಮನಹಳ್ಳಿ, ಮಂಗನಹಳ್ಳಿ, ತಾಳಗುಂದ-1, ಹೊನ್ನೇನಹಳ್ಳಿ, ಕ್ಯಾದಿಗುಂಟೆ-1, ಹೊಸಬಿಜ್ಜನಬೆಳ್ಳ, ಯಾದಲಡಕುಗೊಲ್ಲರಹಟ್ಟಿ, ಅಪ್ಪಿಹಳ್ಳಿ, ಕೆ. ರಂಗನಹಳ್ಳಿ ಗೊಲ್ಲರಹಟ್ಟಿ, ಹೆಗ್ಗನಹಳ್ಳಿ ಗೊಲ್ಲರಹಟ್ಟಿ, ಜ್ಯೋತಿನಗರ-2, ವಿದ್ಯಾನಗರ, ಉದಾನಪಾಳ್ಯ(ಕಡವಿಗೆರೆ), ಕಾಳಜ್ಜಿಹಟ್ಟಿ, ಕೆಂಪನಹಳ್ಳಿ ಗೊಲ್ಲರಹಟ್ಟಿ ಹಾಗೂ ಮಾರುತಿ ನಗರ ಅಂಗನವಾಡಿ ಕೇಂದ್ರದ ಸಹಾಯಕಿ ಹುದ್ದೆಗಳು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.

You May Also Like