ಇಂದು ರೇಣುಕಾ ಯಲ್ಲಮ್ಮ ದೇವಿಯವರ ಜಾತ್ರಾ ಮಹೋತ್ಸವ

ಗುಬ್ಬಿ: ಇಂದು ತಾಲ್ಲೂಕಿನ ಸಿ. ನಂದಿಹಳ್ಳಿಯಲ್ಲಿ ಇಂದು ರೇಣುಕಾ ಯಲ್ಲಮ್ಮ ದೇವಿಯವರ ಜಾತ್ರಾ ಮಹೋತ್ಸವ ನಡೆಯಲಿದೆ. ಬೆಳಗ್ಗೆ 9.30 ರಿಂದ 10-30 ಗ್ರಾಮದ ಶ್ರೀ ಆಂಜನೇಯ ಸ್ವಾಮಿಯವರ ಮೆರವಣಿಗೆಯೊಂದಿಗೆ ಶ್ರೀ ರೇಣುಕಾ ಯಲ್ಲಮ್ಮ ದೇವಿಯವರ ಸನ್ನಿಧಿಗೆ ಕರೆತರುವುದು. 10.30 ರಿಂದ 11.30 ರವರೆಗೆ ಸ್ವಾಮೀಜಿಗಳವರ ಪಾದಪೂಜೆ ನಂತರ ಶ್ರೀ ದೇವಿಗೆ ಮಹಾ ಮಂಗಳಾರತಿ. 1.30 ರಿಂದ ಅನ್ನ ದಾಸೋಹ. ಸಂಜೆ 4.30 ಕ್ಕೆ ಊರಿನ ಅರಳಿಕಟ್ಟೆ ಹತ್ತಿರ ಎಲ್ಲರೂ ಆರತಿಯೊಂದಿಗೆ ಆಗಮಿಸುವುದು. ಪೀಠಾಧ್ಯಕ್ಷರು, ಆರ್ಯ ಈಡಿಗ ಮಹಾಸಂಸ್ಥಾನ,
ಶ್ರೀ ಪರಮಪೂಜ್ಯ ವಿಖ್ಯಾತಾನಂದ ಮಹಾ ಸ್ವಾಮೀಜಿ, ಶ್ರೀ ಅಟವಿ ಶಿವಲಿಂಗ ಮಹಾಸ್ವಾಮೀಜಿಗಳು, ಶ್ರೀ ಕಾರದ ವೀರಬಸವ ಮಹಾಸ್ವಾಮೀಜಿಗಳು ಸಾನಿಧ್ಯ ವಹಿಸುವರು. ಎನ್.ವಿ. ರಾಮಚಂದ್ರಯ್ಯರವರು, ಕೊರಟಗೆರೆ ಹೆಚ್.ಮಹದೇವ್‌ರವರು, ಶಿವಣ್ಣ (ಮಲ್ಲಸಂದ್ರ) ವೇದಮೂರ್ತಿ ಸಿ.ಎನ್. ವೆಂಕಟೇಶ್, ರೇಣುಕಾವೈನ್ಸ್ ಮುಂತಾದ ಗಣ್ಯರು ಭಾಗವಹಿಸುವರು.

You May Also Like