ಮೊಬೈಲ್​ ಕಳೆದು ಹೋದಾಗ ಮೊದಲು ಮಾಡಬೇಕಾದ ಕೆಲಸ ಏನು? ತಕ್ಷಣ ಈ ಟ್ರಿಕ್​ ಅನ್ನು ಫಾಲೋ ಮಾಡಿ

Trending news: Phone gets stolen? So keep such bank and mobile details  safe, otherwise you will have to bear the loss. - Hindustan News Hub
ಸಾಂದರ್ಭಿಕ ಚಿತ್ರ
ಸ್ಮಾರ್ಟ್​​ಫೋನ್​ಗಳೆಂದರೆ (Smartphones) ಯಾರಿಗೆ ಇಷ್ಟ ಇಲ್ಲ ಹೇಳಿ. ಇಷ್ಟ ಅನ್ನುವುದಕ್ಕಿಂತಲೂ ಎಲ್ಲರ ಅಗತ್ಯ ಸಾಧನವಾಗಿದೆ ಎನ್ನಬಹುದು. ಎಷ್ಟೋ ಜನರು ಸ್ಮಾರ್ಟ್​​ಫೋನ್​ಗಳನ್ನು ಕಳೆದುಬಿಡುತ್ತಾರೆ. ಇನ್ನೂ ಕೆಲವರ ಸ್ಮಾರ್ಟ್​​ಫೋನ್​ಗಳು ಕಳ್ಳತನವಾಗುತ್ತದೆ (Mobile Theift).
ಈ ಸಂದರ್ಭದಲ್ಲಿ ತಕ್ಷಣ ಏನು ಮಾಡುವುದೆಂದು ಗೊತ್ತೇ ಆಗಲ್ಲ. ಆದರೆ ಇದೀಗ ಈ ಕಳ್ಳತನವಾದ, ಕಳೆದು ಹೋದ ಮೊಬೈಲ್​ಗಳನ್ನು ಪತ್ತೆಹಚ್ಚಲು ಹೊಸ ಆನ್​ಲೈನ್ ಪೋರ್ಟಲ್ (Online Portal)​ ಅನ್ನು ಪೊಲೀಸ್​ ಇಲಾಖೆ ಪರಿಚಯಿಸಿದೆ. ಕಳೆದು ಹೋದ ಫೋನ್​ ಮತ್ತೆ ಸಿಗುತ್ತೆ ಎಂಬುದು ಭರ್ವಸೆಯೇ ಇರುವುದಿಲ್ಲ. ಆದರೆ ಈ ಟ್ರಿಕ್ ಮೂಲಕ ಕಳೆದ ಹೋದ ಮೊಬೈಲ್​ ಅನ್ನು ಮತ್ತೆ ಮರು ಪಡೆಯಬಹುದು.

ಒಂದು ವೇಳೆ ಮೊಬೈಲ್‌ ಕಳ್ಳತನವಾದರೆ ಅಥವಾ ಕಳೆದುಹೋದರೆ ಪೊಲೀಸ್‌ ಇಲಾಖೆ ಜಾರಿಗೆ ತಂದಿರುವ ಇ – ಪೋರ್ಟಲ್‌ನಲ್ಲಿ ಮನೆಯಲ್ಲಿಯೇ ಕುಳಿತು ಸುಲಭವಾಗಿ ದೂರು ದಾಖಲಿಸಬಹುದಾಗಿದೆ. ದೂರು ನೀಡಿದ ಕೆಲವೇ ದಿನಗಳಲ್ಲಿ ಫೋನ್‌ ಪತ್ತೆ ಮಾಡಲಾಗುತ್ತದೆ. ಆದರೆ ಇದಕ್ಕೆ ಕೆಲವು ಕ್ರಮಗಳಿವೆ. ಅದರ ಕಂಪ್ಲೀಟ್ ಮಾಹಿತಿ ಈ ಲೇಖನದಲ್ಲಿದೆ.

ಇ-ಪೋರ್ಟಲ್ ಯಶಸ್ಸು

ಇತ್ತೀಚಿಗೆ ಹುಬ್ಬಳ್ಳಿ – ಧಾರವಾಡ ಪೊಲೀಸ್‌ ಕಮಿಷನರೇಟ್‌ ವತಿಯಿಂದ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಈ ಮೂಲಕ ಸುಮಾರು 30 ಫೋನ್‌ಗಳನ್ನು ಪೊಲೀಸ್‌ರು ಪತ್ತೆ ಮಾಡಿದ್ದಾರೆ ಎಂದು ಪೊಲೀಸ್‌ ಆಯುಕ್ತ ರಮಣ್‌ಗುಪ್ತಾ ಅವರು ತಿಳಿಸಿದ್ದಾರೆ. ಇ – ಪೋರ್ಟಲ್‌ನಲ್ಲಿ ಫೋನ್‌ ಕಳೆದುಹೋಗಿರುವ ಬಗ್ಗೆ ದೂರು ದಾಖಲಿಸಿದ್ದ ವಾರಸುದಾರರಿಗೆ ಅವರ ಫೋನ್‌ಗಳನ್ನು ವಾಪಸ್‌ ಹಸ್ತಾಂತರಿಸಿದ್ದಾರೆ.

ಇದೊಂದು ಗೊಂಬೆ ಮನೆಯಲ್ಲಿದ್ರೆ ಮಕ್ಕಳು ಗಲಾಟೆ ಮಾಡೋದೇ ಇಲ್ವಂತೆ, ಬೆಲೆಯೂ ಕಡಿಮೆ!

ಮೊಬೈಲ್​ ಕಳೆದು ಹೋದಾಗ ತಕ್ಷಣ ಈ ಕ್ರಮ ಅನುಸರಿಸಿ

    • ಮೊದಲಿಗೆ ನಿಮ್ಮ ಅಕ್ಕಪಕ್ಕದಲ್ಲಿರುವ ಯಾರದ್ದಾದರೂ ಅಥವಾ ಮನೆಗೆ ಹೋಗಿ 8277952828 ಈ ನಂಬರ್‌ಗೆ ವಾಟ್ಸಾಪ್‌ನಲ್ಲಿ Hi ಎಂದು ಮೆಸೇಜ್‌ ಮಾಡಿ.
    • ನೀವು ಮೆಸೇಜ್‌ ಕಳುಹಿಸಿದ ವಾಟ್ಸಾಪ್‌ ನಂಬರ್‌ಗೆ ಒಂದು ಲಿಂಕ್‌ ಬರುತ್ತದೆ.
    • ಇಲ್ಲಿ ನಿಮಗೆ ಕೇಳಲಾಗುವ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಮತ್ತು ಸಬ್ಮಿಟ್​ ಎಂಬ ಆಯ್ಕೆಯನ್ನು ಸೆಲೆಕ್ಟ್​ ಮಾಡಿ.
    • ನೀವು ಈ ಎಲ್ಲಾ ವಿಷಯಗಳನ್ನು ಭರ್ತಿ ಮಾಡಿದ ನಂತರ ಕಳೆದುಹೋದ ಫೋನ್‌ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು.  ಇನ್ನು ಪತ್ತೆಯಾಗದ ಫೋನ್‌ಗಳನ್ನು ಬ್ಲಾಕ್‌ ಮಾಡಲು ಸಹ ಕ್ರಮ ಕೈಗೊಳ್ಳಲಾಗುವುದು.
  • ಸಿಮ್​ ಕಾರ್ಡ್​ ಬ್ಲಾಕ್ ಮಾಡಿಸಿಮ್ ಕಾರ್ಡ್ ಅನ್ನು ತಕ್ಷಣವೇ ಸೈಬರ್​ಗಳಿಗೆ ಹೋಗಿ ಬ್ಲಾಕ್​ ಮಾಡಿ. ಇದರಿಂದ ಕಳ್ಳರು ಹಣಕಾಸು ಸೇವೆಗಳ ಓಟಿಪಿಗಳಿಗೆ ಅಥವಾ ಇತರ ವೈಯಕ್ತಿಕ ಸಂದೇಶಗಳನ್ನು ಓದಲು ಸಾಧ್ಯವಾಗುವುದಿಲ್ಲ. ಇನ್ನು ನಿಮಗೆ ಅದೇ ಫೋನ್ ಬೇಕೆಂದರೆ ಮತ್ತೆ ಹೊಸ ಸಿಮ್ ಖರೀದಿ ಮಾಡುವ ಮೂಲಕ ನೀವು ಅದೇ ನಂಬರ್ ಅನ್ನು ಮುಂದುವರೆಸಬಹುದು. ಆದರೆ ಇದು ಕಾರ್ಯನಿರ್ವಹಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.

    ಯುಪಿಐ ಸೇವೆಗಳನ್ನು ಬ್ಲಾಕ್ ಮಾಡಿ

    ನಿಮ್ಮ ಕಳೆದು ಹೋದ ಮೊಬೈಲ್​ ಸಂಖ್ಯೆಯೊಂದಿಗೆ ಲಿಂಕ್ ಆದ ಯುಪಿಐ ಪಾವತಿಯನ್ನು ನಿಷ್ಕ್ರಿಯಗೊಳಿಸಿ. ನಂತರ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳನ್ನು ನಿರ್ಬಂಧಿಸಿ. ನಿರ್ದಿಷ್ಟ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಲಾದ ಯುಪಿಐ ಮತ್ತು ಇತರ ಮೊಬೈಲ್ ವ್ಯಾಲೆಟ್‌ಗಳನ್ನು ನಿಷ್ಕ್ರಿಯಗೊಳಿಸಲು ಮರೆಯಬೇಡಿ.

  • ರೈಲಿನಲ್ಲಿ ಫೋನ್​ ಕೆಳಗೆ ಬಿದ್ದಾಗ ಏನು ಮಾಡ್ಬೇಕು?ಫೋನ್‌ ಕೆಳಗೆ ಬಿದ್ದರೆ ರೈಲು ಪ್ರಯಾಣಿಕರು ಆ ಸಮದರ್ಭದಲ್ಲಿ ಏನೆಲ್ಲಾ ಮಾಡ್ಬಹುದು ಎಂದು ಹೆಚ್ಚಿನ ಜನರಿಗೆ ಗೊತ್ತಿಲ್ಲ. ಆದರೆ ಈ ಸಂದರ್ಭದಲ್ಲಿ ಫೋನ್‌ ಬಿದ್ದ ಸ್ಥಳವನ್ನು ಮೊದಲಿಗೆ ಸರಿಯಾಗಿ ನೋಡಿಕೊಳ್ಳಬೇಕು. ಇದಕ್ಕಾಗಿ ಹಲವಾರು ಸುಲಭ ಮಾರ್ಗಗಳಿವೆ. ಅಂದರೆ, ರೈಲ್ವೇ ಕಂಬದ ಮೇಲೆ ಬರೆಯಲಾದ ನಂಬರ್, ಸೈಡ್‌ ಟ್ರ್ಯಾಕ್‌ ನಂಬರ್‌ ಅನ್ನು ನೋಟ್‌ ಮಾಡಿಕೊಳ್ಳಬೇಕು.ನಂತರ ನಿಮ್ಮ ಸಹ ಪ್ರಯಾಣಿಕರ ಬಳಿ ಹೋಗಿ ಅವರ ಫೋನ್‌ ಪಡೆದು ರೈಲ್ವೆ ರಕ್ಷಣಾ ಪಡೆಯ ಸಂಖ್ಯೆಯಾದ 182 ಗೆ ಕರೆ ಮಾಡಿ ಮಾಹಿತಿ ನೀಡಿ. ಈ ವೇಳೆ ಯಾವ ಕಂಬದ ಅಥವಾ ಟ್ರ್ಯಾಕ್ ಸಂಖ್ಯೆಯ ಸ್ಥಳದಲ್ಲಿ ಮೊಬೈಲ್‌ ಬಿದ್ದಿದೆ ಎಂಬುದನ್ನು ಅವರಿಗೆ ತಿಳಿಸಬೇಕು. ಈ ವೇಳೆ ನೀವು ನಿಮ್ಮ ಫೋನ್‌ನ ಮಾದರಿ, ಬ್ರ್ಯಾಂಡ್, ಸ್ಥಳ, ಸಂಖ್ಯೆ, ಫೋನ್ ಬಿದ್ದ ಸಮಯ ಮತ್ತು ಹತ್ತಿರದ ರೈಲ್ವೇ ನಿಲ್ದಾಣದಂತಹ ಇತರ ವಿವರಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದರೆ ಫೋನ್‌ ಸುಲಭವಾಗಿ ಮರುಪಡೆಯಬಹುದು.

You May Also Like