ಕ್ಯಾನ್ಸರ್ ತಪಾಸಣಾ ಶಿಬಿರ

Childhood cancer in India: From symptoms to role of nutrition, all you need  to know | Lifestyle News,The Indian Express

ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ಬೆಂಗಳೂರಿನ ಹೆಸರಾಂತ ಸಂಸ್ಥೆಯಾದ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಕರ್ನಾಟಕ ಕ್ಯಾನ್ಸರ್ ಸೊಸೈಟಿ ಇವರ ಸಹಯೋಗದಲ್ಲಿ ದಿನಾಂಕ:13-3-023ನೇ ಸೋಮವಾರ ಬೆಳಿಗ್ಗೆ 10 ರಿಂದ ಮಧ್ಯಾನ 3 ರವರೆಗೆ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ  ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಪಾವಗಡ – 561 202

Galleri cancer test: What is it and who can get it? - BBC News

ಸಾಂದರ್ಭಿಕ ಚಿತ್ರ

ಇಲ್ಲಿ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ  ಮತ್ತು ಪ್ರತೀ ತಿಂಗಳ ಮೊದಲನೆಯ ಸೋಮವಾರ ನಿರಂತರವಾಗಿ ಆಯೋಜಿಸಲಾಗುತ್ತದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಸ್ವಾಮಿ ಜಪಾನಂದಜಿ ರವರು ತಿಳಿಸಿರುತ್ತಾರೆ. ಈ ಶಿಬಿರದಲ್ಲಿ ನುರಿತ ತಜ್ಞ ವೈದ್ಯರುಗಳು ಭಾಗವಹಿಸಿ ಸೂಕ್ತ ಸಲಹೆ ಮತ್ತು ಚಿಕಿತ್ಸೆಯನ್ನು ನೀಡುವರು.
ಈ ಕೆಳಕಂಡ ಗುಣಲಕ್ಷಣಗಳು ಕಂಡು ಬಂದಿದ್ದರೆ ಅಂತಹವರು ತಪ್ಪದೇ ಶಿಬಿರದಲ್ಲಿ ಪಾಲ್ಗೊಂಡು ಚಿಕಿತ್ಸೆಯನ್ನು ಪಡೆಯಬೇಕಾಗಿ ಕೋರಲಾಗಿದೆ.
• ಬಾಯಿ ಕ್ಯಾನ್ಸರ್ : ಬಾಯಿಯಲ್ಲಿ ಬಿಳಿ ಮಚ್ಚೆಗಳು ಕಾಣಿಸಿಕೊಳ್ಳುವುದು, ಕೆಂಪು ಮಚ್ಚೆ ಕಾಣಿಸಿಕೊಳ್ಳುವುದು, ಕೆಂಪು ಮತ್ತು ಬಿಳಿ ಮಚ್ಚೆಗಳು ಒಟ್ಟಾಗಿ ಕಾಣಿಸಿಕೊಳ್ಳುವುದು, ಬಾಯಿ ತೆರೆಯಲು ತೊಂದರೆಯಾಗುವುದು, ವಾಸಿಯಾಗದಿರುವ ಹುಣ್ಣು ಮತ್ತು ಬಾಯಿಯಿಂದ ದುರ‍್ವಾಸನೆ ಬರುತ್ತಿರುವುದು.
• ಸ್ತನ ಕ್ಯಾನ್ಸರ್ : ಸ್ತನದಲ್ಲಿ ಗಡ್ಡೆ/ಬಾವು, ಚರ್ಮ ಒಳಗೆ  ಹೋಗಿರುವುದು, ಚರ್ಮದ  ಬಣ್ಣ ಮತ್ತು ವಿನ್ಯಾಸದಲ್ಲಿ ಬದಲಾವಣೆ, ತೊಟ್ಟು ಹಿಂದಕ್ಕೆ ಅಂಟಿಕೊಂಡಿರುವುದು ಮತ್ತು ತೊಟ್ಟಿನಿಂದ ಸ್ರಾವವಾಗುವುದು.
•  ಗರ್ಭಕೋಶದ ಕಂಠ  ಕ್ಯಾನ್ಸರ್ : ಲೈಂಗಿಕ  ಸಂಪರ್ಕದ ನಂತರ  ರಕ್ತಸ್ರಾವ, ಋತುಚಕ್ರದ ನಡುವೆ ಅಸಹಜ ರಕ್ತಸ್ರಾವ, ಕೆಟ್ಟ ವಾಸನೆಯಿಂದ ಕೂಡಿದ ಅತಿ ಹೆಚ್ಚು ಬಿಳಿ ಸ್ರಾವ, ಸಂಪರ‍್ಣವಾಗಿ ಮುಟ್ಟು ನಿಂತ ಮೇಲೂ ರಕ್ತಸ್ರಾವ.
• ರಕ್ತ ಕ್ಯಾನ್ಸರ್ : ಕತ್ತಿನಲ್ಲಿ, ಕಂಕಳಲ್ಲಿ ಗ್ರಂಥಿಗಳು, ಹೊಟ್ಟೆ ನೋವು, ಕೀಲು ನೋವು, ರಕ್ತ ಸ್ರಾವ
• ಗಂಟಲು ಕ್ಯಾನ್ಸರ್ : ಧ್ವನಿಯಲ್ಲಿ ಬದಲಾವಣೆ, ಆಹಾರ ಸೇವನೆಯಲ್ಲಿ ತೊಂದರೆ, ಕೆಮ್ಮು, ಕತ್ತಿನಲ್ಲಿ ಗ್ರಂಥಿಗಳು, ಕಿವಿ ನೋವು, ಆಯಾಸ, ಉಸಿರಾಟದ ತೊಂದರೆ
• ಶ್ವಾಸಕೋಶದ ಕ್ಯಾನ್ಸರ್ : ಸತತವಾದ ಕೆಮ್ಮು, ಕೆಮ್ಮಿದಾಗ ರಕ್ತ ಬೀಳುವುದು, ಉಸಿರಾಟದ ತೊಂದರೆ, ಎದೆ ನೋವು.
• ಕರುಳಿನ ಕ್ಯಾನ್ಸರ್ : ಅಜೀರ್ಣ, ಅತೀವ ಭೇದಿ, ಹೊಟ್ಟೆ ನೋವು, ಮಲ ವಿಸರ್ಜನೆಯೊಂದಿಗೆ  ರಕ್ತ ಬೀಳುವುದು.
• ಗಮನಿಸಬೇಕಾದ ಸಾಮಾನ್ಯವಾದ ಅಂಶಗಳು : ಹಸಿವಾಗದಿರುವುದು, ತೂಕ ಕಡಿಮೆಯಾಗುವುದು, ಸುಸ್ತು, ಬಳಲಿಕೆ
ಈ ಹಿಂದೆ ಕ್ಯಾನ್ಸರ್ ಖಾಯಿಲೆ ತಪಾಸಣೆಗೆ ಒಳಗಾಗಿದ್ದು ಮತ್ತೆ ತಜ್ಞ ವೈದ್ಯರ ಸಲಹೆ ಪಡೆಯಬಹುದು. ಅಂತಹವರು ಬರುವಾಗ ಹಿಂದಿನ ತಪಾಸಣಾ ವರದಿಗಳನ್ನು ತರುವುದು ಬಹಳ ಮುಖ್ಯ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿರುತ್ತಾರೆ.

You May Also Like