ನಗರ ಕೇಂದ್ರ ಗ್ರಂಥಾಲಯ: ಪ್ರಯೋಜನ ಪಡೆಯಲು ಮನವಿ

  • Photoತುಮಕೂರು: ನಗರದಲ್ಲಿ ನೂತನವಾಗಿ ನಿರ್ಮಿಸಿರುವ ನಗರ ಕೇಂದ್ರ ಗ್ರಂಥಾಲಯದಲ್ಲಿ ಸಾರ್ವಜನಿಕರಿಗಾಗಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಗ್ರಂಥಾಲಯದ ಪ್ರಯೋಜನ ಪಡೆಯಬೇಕೆಂದು ಉಪನಿರ್ದೇಶಕಿ ಎಂ. ಸರೋಜಮ್ಮ ಮನವಿ ಮಾಡಿದ್ದಾರೆ.

ನಗರದ ಕೇಂದ್ರ ಭಾಗದಲ್ಲಿ 7084 ಚ.ಮೀ. ವಿಸ್ತೀರ್ಣದಲ್ಲಿ 29.94 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಗ್ರಂಥಾಲಯದಲ್ಲಿ ಆಡಿಟೋರಿಯಂ ವಿಭಾಗ, ಉಪಹಾರ ವಿಭಾಗ, ನಿಯತಕಾಲಿಕೆಗಳ ವಿಭಾಗ, ಮಹಿಳಾ ವಿಭಾಗ, ಮಕ್ಕಳ ವಿಭಾಗ, ಸ್ಪರ್ಧಾತ್ಮಕ ವಿಭಾಗ, ದಿನಪತ್ರಿಕೆ ವಿಭಾಗ, ಡಿಜಿಟಲ್ ಲೈಬ್ರರಿ, ಎರವಲು ವಿಭಾಗ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಒಳಗೊಂಡಿದ್ದು, ಮಾರ್ಚ್ 5ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದ್ದಾರೆ. ಓದುಗರು ಗ್ರಂಥಾಲಯದ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

 

You May Also Like