ಬಿಜೆಪಿಯ 20ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಟಿಕೆಟ್‌ ಡೌಟ್‌! ‘ಕೊಕ್‌ʼ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ?

ಬಿಜೆಪಿಯ 20ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಟಿಕೆಟ್‌ ಡೌಟ್‌! 'ಕೊಕ್‌ʼ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ?

ಮಾರ್ಚ್‌ 13: ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೇ ರಾಜ್ಯ ಬಿಜೆಪಿ ಹಲವು ರೀತಿಯ ತಂತ್ರಗಾರಿಕೆಯನ್ನ ನಡೆಸುತ್ತಿದೆ. ಚುನಾವಣೆಯಲ್ಲಿ ಮಿಷನ್‌ 150 ಟಾರ್ಗೆಟ್‌ ಹಾಕಿಕೊಂಡಿರುವ ಬಿಜೆಪಿ ಹಲವು ಸಮರಾಭ್ಯಾಸವನ್ನ ನಡೆಸುತ್ತಿದೆ.

ಇತ್ತ ಹಲವು ಹಲವು ಸಮೀಕ್ಷೆಗಳನ್ನ ನಡೆಸಿರುವ ಬಿಜೆಪಿಗೆ ಸರ್ವೆಯಿಂದ ದೊಡ್ಡ ಅಘಾತ ಉಂಟಾಗಿದೆ.

ಹೀಗಾಗಿ ಪ್ರತಿ ಕ್ಷೇತ್ರದಲ್ಲಿಯೂ ಗೆಲ್ಲುವ ಕುದುವೆ ಹುಡುಕಾಟವನ್ನ ಬಿಜೆಪಿ ನಡೆಸುತ್ತಿದ್ದು, ಪ್ರತಿ ಕ್ಷೇತ್ರಕ್ಕೂ ಅಳೆದು ತೂಗಿ ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಟಿಕೆಟ್ ಹಂಚಿಕೆ ಮಾಡಬೇಕು ಎನ್ನುವ ಲೆಕ್ಕಾಚಾರವನ್ನ ಬಿಜೆಪಿ ಹೈಕಮಾಂಡ್‌ ಹಾಕಿಕೊಂಡಿದೆ.

ಒಂದು ಕಡೆ ರಾಜ್ಯದಲ್ಲೂ ಗುಜರಾತ್‌ ಮಾಡೆಲ್‌ ಜಾರಿಗೊಳಿಸಬೇಕು ಬೇಕು ಎನ್ನುವ ಚಿಂತನೆ ಕಳೆದ ಒಂದು ವರ್ಷಗಳಿಂದಲೂ ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿದೆ. ಈ ಬಾರಿ ಗುಜರಾತ್‌ ಮಾದರಿ ಅನುಷ್ಠಾನಕ್ಕೆ ಬರುತ್ತೋ ಇಲ್ವೋ ಗೊತ್ತಿಲ್ಲಆದರೆ, ಬರೋಬ್ಬರಿ 20 ಕ್ಕೂ ಹೆಚ್ಚು ಹಾಲಿ ಬಿಜೆಪಿ ಶಾಸಕರಿಗೆ ಟಿಕೆಟ್‌ ಕೈ ತಪ್ಪಲಿದೆ ಎಂದು ಹೇಳಲಾಗಿದೆ.

ಹಾಲಿ ಶಾಸಕರಿಗೆ ಶಾಕ್;‌ ಬಿ.ಎಸ್‌ ಯಡಿಯೂರಪ್ಪ ಹೇಳಿದ್ದೇನು?ವಿಧಾನಸಭಾ ಚುನಾವಣೆಗೆ ಮಿಷನ್ 150 ಹೊತ್ತಿರುವ ಬಿಜೆಪಿ, ತನ್ನ ಟಾರ್ಗೆಟ್ ರೀಚ್‌ಗಾಗಿ ಸಮರಾಭ್ಯಾಸ ನಡೆಸ್ತಿದೆ. ಈ ಹೊತ್ತಲ್ಲೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಿಡಿಸಿದ ಟಿಕೆಟ್ ಬಾಂಬ್‌ನಿಂದ ಬಿಜೆಪಿಯಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ಅಲ್ಲದೆ, ಮತ್ತೊಮ್ಮೆ ಶಾಸನರಾಗಬುದು ಎಂಬ ಕನಸು ಕಾಣುತ್ತಿದ್ದ ಕೆಲ ಕೇಸರಿ ಕಲಿಗಳನ್ನ ಟಿಕೆಟ್‌ ಕೈ ತಪ್ಪುವ ಆತಂಕ ಎದುರಾಗಿದೆ.

ಟಿಕೆಟ್‌ ಕುರಿತು ಸಂಸದೀಯ ಸದಸ್ಯರು ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ನವರು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕಾರು ಜನ ಹಾಲಿ ಶಾಸಕರಿಗೆ ಟಿಕೆಟ್‌ ಸಿಗುವುದಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಶಾಸಕರಿಗೆ ಶಾಕ್‌ ನೀಡಿದ್ದಾರೆ.

ಯಾವ ಮಾನದಂಡದ ಮೇಲೆ ಟಿಕೆಟ್‌ ನೀಡುತ್ತೇ ಬಿಜೆಪಿ?

ಈ ಬಾರಿ ವಿಧಾನಸಭಾ ಚುನಾವಣೆಯ ಮೂಲಕ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬ ಕನಸು ಕಂಡಿರುವ ಬಿಜೆಪಿ ಅಳೆದು ತೂಗಿ ಟಿಕೆಟ್‌ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ. ಒಂದು ಕಡೆ ಟಿಕೆಟ್ ನೀಡುವ ಮಾನತಂಡದ ಕುರಿತು ಸಾಕಷ್ಟು ಊಹಪೋಹಗಳು ಸೃಷ್ಟಿಯಾಗಿದ್ದು, ಈ ಬಾರಿ ಟಿಕೆಟ್‌ ನೀಡುವ ಕುರಿತು ಕೆಲವು ಮಾನದಂಡಗಳನ್ನ ಬಿಜೆಪಿ ಹಾಕಿಕೊಂಡಿದೆ.

ಈಗಾಗಾಲೇ ಭ್ರಷ್ಟಾಚಾರ ಆರೋಪ ಎದರಿಸುತ್ತಿರುವ ರಾಜ್ಯ ಬಿಜೆಪಿ ಶಾಸಕರು ಯಾವುದೇ ಕಳಂಕಗಳು, ಆರೋಪಗಳು, ಕ್ಷೇತ್ರದಲ್ಲಿನ ಆಡಳಿತ ವಿರೋಧಿ ಅಲೆ, ವಯಸ್ಸು ಹಾಗೂ ಕುಟುಂಬ ರಾಜಕಾರಣಕ್ಕೆ ಬ್ರೇಕ್‌ ಹಾಕುವ ನಿಟ್ಟಿನಲ್ಲಿ ಟಿಕೆಟ್‌ ನೀಡುವ ಮಾನದಂಡಗಳನ್ನ ಹೈಕಮಾಂಡ್‌ ಹಾಕಿಕೊಂಡಿದೆ.

ಈ ನಾಯಕರಿಗೆ ಚುನಾವಣೆಗೆ ಟಿಕೆಟ್‌ ಡೌಟ್‌ ?

ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದ ಸಚಿವರು ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲು ದೆಹಲಿ ಬಿಜೆಪಿ ವರಿಷ್ಠರು ಯೋಚಿಸಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ಲಭ್ಯವಾಗಿದೆ. ಈಗಾಗಲೇ ಲಂಚ ಪ್ರಕರಣದ ಆರೋಪ ಕೇಳಿ ಬಂದಿರುವ ಮಾಡಾಳ್‌ ವಿರೂಪಾಕ್ಷಪ್ಪ ಅವರಿಗೆ ಟಿಕೆಟ್‌ ಕೈತಪ್ಪಿದೆ. ಇನ್ನೂ ಮೂಡಿಗೆರೆ ಶಾಸಕರಾದ ಎಂ.ಪಿ ಕುಮಾರಸ್ವಾಮಿ ಅವರಿಗೆ ಕ್ಷೇತ್ರದಲ್ಲಿ ವರ್ಚಸ್ಸು ಕಡಿಮೆಯಾಗಿದ್ದು ಈ ಕಾರಣಕ್ಕೆ ಟಿಕೆಟ್‌ ನೀಡುವುದಿಲ್ಲ ಎಂದು ಹೇಳಲಾಗಿದೆ.

ಮಹಿಳಾ ದೌರ್ಜನ್ಯ ಆರೋಪ ಹೊತ್ತಿರುವ ಕನಕಗಿರಿ ಶಾಸಕ ಬಸವರಾಜ ದಡೇಸುಗೂರು ಅವರಿಗೆ ಟಿಕೆಟ್‌ ಡೌಟ್‌ ಎಂದು ಹೇಳಲಾಗಿದೆ. ಇನ್ನೂ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಅವರಿಗೂ ಟಿಕೆಟ್‌ ಕೈ ತಪ್ಪಲಿದೆ. ಇನ್ನೂ ನೆಹರೂ ಓಲೇಕಾರ್, ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ಹಾಗೂ ಸಚಿವ ಗೋವಿಂದ ಕಾರಜೋಳ ಅವರಿಗೆ ವಯಸ್ಸಿನ ಕಾರಣಕ್ಕೆ ಟಿಕೆಟ್‌ ಕೈ ತಪ್ಪಲಿದೆ ಎನ್ನಲಾಗಿದೆ.

ಇನ್ನೂ ವಯಸ್ಸಿನ ಕಾರಣಕ್ಕೆ ತಿಪ್ಪಾರೆಡ್ಡಿ ಟಿಕೆಟ್‌ ನಿರಾಕರಿಸಲಿದ್ದು, ಸುರೇಶ್‌ ಕುಮಾರ್‌, ಬಸವನಗೌಡ ಪಾಟೀಲ್‌ ಯತ್ನಾಳ್‌, ಕೆ.ಜಿ ಬೋಪಯ್ಯ, ಸೇರಿದಂತೆ ವಲಸೆಚ ಬಂದ ಶಾಸಕರಲ್ಲಿ ಮೂರ್ನಾಲ್ಕು ಜನರಿಗೆ ಟಿಕೆಟ್‌ ಕೊಡುವುದು ಅನುಮಾನವಾಗಿದೆ. ಒಟ್ಟು ಈ ಬಾರಿ 20 ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಟಿಕೆಟ್‌ ನೀಡದಿರಲು ಬಿಜೆಪಿ ಹೈಕಮಾಂಡ್‌ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹೊಸ ಮುಖಗಳಿಗೆ ಟಿಕೆಟ್‌ ಕೊಡಲು ನಿರ್ಧಾರ?

2023ರಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಬಿಜೆಪಿ ಯತ್ನಿಸ್ತಿದೆ. ಟಿಕೆಟ್ ಯಾರಿಗೆ ಕೊಡಬೇಕು ಅನ್ನೋ ಬಗ್ಗೆಯೂ ಚರ್ಚೆ ಆಗ್ತಿದೆ. ವಿಧಾನಸಭಾ ಚುನಾವಣೆಯ ಹೊತ್ತಲ್ಲೆ ಟಿಕೆಟ್ ನೀಡುವ ಮಾನದಂಡದ ಕುರಿತು ಊಹಪೋಹಗಳಿಗೆ ರೆಕ್ಕೆಪುಕ್ಕ ಬಂದಿದೆ. ಸದ್ಯ ಯಾರಿಗೆ ಯಾವ ಕ್ಷೇತ್ರದಿಂದ ಟಿಕೆಟ್ ಅನ್ನೋದು ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ. ಗೆಲುವೊಂದೆ ಮಾನದಂಡ ಅಂತ ಹೈಕಮಾಂಡ್ ಈಗಾಗಲೇ ಕಡ್ಡಿಮುರಿದಂತೆ ಹೇಳಿದ್ದು, ಹೊಸ ಮುಖಗಳಿಗೆ ಟಿಕೆಟ್‌ ನೀಡುವ ಚಿಂತನೆಯನ್ನ ಹೈಕಮಾಂಡ್‌ ಹಾಕಿಕೊಂಡಿದೆ.

ಈಗಾಗಲೇ ಎಲ್ಲಾ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿದ್ದು, ಯಾವ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಬಿಜೆಪಿ ಹಾಲಿ ಶಾಸಕರ ಬದಲಿಗೆ ಹೊಸ ಹಾಗೂ ಯುವ ಮುಖಗಳಿಗೆ ಮಣೆ ಹಾಕುವ ನಿಇಟ್ಟಿನಲ್ಲಿ ಹೈಕಮಾಂಡ್‌ ಪ್ಲಾನ್‌ ನಡೆಸಿದ್ದು, ಈ ಬಾರಿ ಹೊಸ ಮುಖ್ಯಗಳನ್ನ ಹಾಗೂ ಆರ್‌ ಎಸ್‌ ಎಸ್‌ ಹಿನ್ನೆಲೆ ಉಳ್ಳವರಿಗೆ ಟಿಕೆಟ್‌ ಸಿಗುವ ಸಾಧ್ಯತೆ ಹೆಚ್ಚಾಗಿದೆ.

ಒಟ್ನಲಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ಹೇಳಿಕೆಯಿಂದ ಹಾಲಿ ಕೆಲ ಬಿಜೆಪಿ ಕಲಿಗಳಿಗೆ ಆತಂಕ ಎದುರಾಗಿದ್ದು, ಟಿಕೆಟ್‌ ಕೈ ತಪ್ಪುವ ಭೀತಿಯಲ್ಲೇ ಟಿಕೆಟ್‌ ಗಾಗಿ ಪ್ರಯತ್ನವನ್ನ ನಡೆಸುತ್ತಿದ್ದು, ಈ ಬಾರಿ ಚುನಾವಣೆ ಅಭ್ಯರ್ಥಿಗಳಲ್ಲಿ ಸಾಕಷ್ಟು ಬದಲಾವಣೆಯನ್ನ ತರುವನಿಟ್ಟಿನಲ್ಲಿ ಹೈಕಮಾಂಡ್‌ ನಿರ್ಧರಿಸಿದ್ದಾರೆ ಎಂದು ಹೇಳಲಾಗಿದ್ದದು. ಈ ಬಾರಿ 20ಕ್ಕೂ ಹೆಚ್ಚು ಮಂದಿ ಹಾಲಿ ಶಾಸಕರಿಗೆ ಕೈ ತಪ್ಪಲಿದ್ದು ಯಾರಿಗೆ, ಯಾವ ಮಾನದಂಡ ಮೇಲೆ ಹೊಸ ಮುಖಗಳಿಗೆ ಬಿಜೆಪಿ ಹೈಕಮಾಂಡ್‌ ಟಿಕೆಟ್‌ ನೀಡುತ್ತೇ ಅಂತ ಕಾದುನೋಡ್ಬೇಕಾಗಿದೆ.

You May Also Like