ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಒಟ್ಟಿಗೆ ಸಿನಿಮಾ ಮಾಡಬೇಕಿತ್ತು. ಆದರೆ, ಅದು ಸಾಧ್ಯವಾಗಲೇ ಇಲ್ಲ. ಈಗ ಉಪ್ಪಿಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಅಪ್ಪು ಹುಟ್ಟುಹಬ್ಬದಂದೇ ಬಿಡುಗಡೆಯಾಗುತ್ತಿದೆ.
ಉಪೇಂದ್ರ ಹಾಗೂ ಪುನೀತ್ ರಾಜ್‌ಕುಮಾರ್ ಇಬ್ಬರೂ ತುಂಬಾನೇ ಆತ್ಮೀಯರಾಗಿದ್ದರು.
ಒಟ್ಟಿಗೆ ಸಿನಿಮಾ ಮಾಡದಿದ್ದರೇನಂತೆ, ಉತ್ತಮ ಸ್ನೇಹಿತರಾಗಿದ್ದರು. ಇದು ಇಡೀ ಚಿತ್ರರಂಗಕ್ಕೂ ಗೊತ್ತಿದೆ. ಇಬ್ಬರೂ ಒಟ್ಟಿಗೆ ಸೇರುತ್ತಿದ್ದರು. ಸಿನಿಮಾ ಬಗ್ಗೆ ಚರ್ಚೆನೂ ಮಾಡುತ್ತಿದ್ದರು. ಹೀಗಾಗಿ ಅಪ್ಪು ಹುಟ್ಟುಹಬ್ಬದಂದೇ ‘ಕಬ್ಜ’ ರಿಲೀಸ್ ಕಾಕತಾಳೀಯವೆನಿಸಿದರೂ, ಇಬ್ಬರ ಸ್ನೇಹಕ್ಕೆ ಸಾಕ್ಷಿ ಎಂಬಂತೆ ಇದೆ.
ಥಿಯೇಟರ್‌ನಲ್ಲಿ ‘ಕಬ್ಜ’ ಕಟೌಟ್ ಎದ್ದು ನಿಲ್ಲಲಿದೆ. ಹೀಗಾಗಿ ಉಪೇಂದ್ರ, ಕಿಚ್ಚ ಸುದೀಪ್, ಶಿವಣ್ಣ ಕಟೌಟ್ ತಯಾರಾಗುತ್ತಿದೆ. ಇದೇ ವೇಳೆ ಕೆಲವೆಡೆ ಅಪ್ಪು ಕಟೌಟ್ ಕೂಡ ರೆಡಿಯಾಗುತ್ತಿದೆ. ಈ ಕಾರಣಕ್ಕೆ ನಮ್ಮ ಕಟೌಟ್ ಇಲ್ಲದೆ ಇದ್ದರೂ ಪರ್ವಾಗಿಲ್ಲ. ಅಪ್ಪು ಕಟೌಟ್ ಇರಬೇಕು ಎಂದು ಉಪೇಂದ್ರ ಅಭಿಪ್ರಾಯ ಪಟ್ಟಿದ್ದಾರೆ. ‘ಕಬ್ಜ’ ಪ್ರಿ-ರಿಲೀಸ್ ಪ್ರೆಸ್‌ಮೀಟ್‌ನಲ್ಲಿ ಅಪ್ಪು ಬಗ್ಗೆ ಉಪ್ಪಿಯ ಮಾತಿನ ಝಲಕ್ ಇಲ್ಲಿದೆ.
Kabzaa:ಬೆಂಗಳೂರಿನ ಲೂಲು ಮಾಲ್ನಲ್ಲಿ ‘ಕಬ್ಜ’ ಪ್ರಚಾರ ಮಾಡಿದ ಶ್ರಿಯಾ ಶರಣ್, ತಾನ್ಯ ಹೋಪ್
‘ಓಂ’ ಕಥೆ ಹೇಳಲು ಹೋದಾಗ ಡ್ಯಾನ್ಸ್ ನೋಡಿದ್ದೆ”
ಉಪೇಂದ್ರ ‘ಓಂ’ ಸಿನಿಮಾಗೆ ಕಥೆ ಹೇಳಲು ಹೋದಾಗಲೇ ಅಪ್ಪು ಬಗ್ಗೆ ಗೊತ್ತಿತ್ತು. ಅಲ್ಲಿಂದಲೇ ಅವರಿಗೆ ಪುನೀತ್ ರಾಜ್‌ಕುಮಾರ್ ಡ್ಯಾನ್ಸ್ ಬಗ್ಗೆ ಗೊತ್ತಿತ್ತು ಅಂತ ಹೇಳಿದ್ದಾರೆ. “ಚಿಕ್ಕ ವಯಸ್ಸಿನಲ್ಲೇ ಅಪ್ಪು ಸ್ಟಾರ್ ಬಿಡಿ. ಆಗಲೇ ಅವರು ನ್ಯಾಷನಲ್ ಅವಾರ್ಡ್ ತೆಗೆದುಕೊಂಡಿದ್ದರು. ಆ ಟೈಮ್‌ನಲ್ಲಿ ನಾನು ಅವರ ಮನೆಗೆ ಓಂ ಕಥೆ ಹೇಳಲು ಹೋದಾಗ, ಎನರ್ಜಿ ಬಾಲ್ ತರ ಓಡಾಡೋರು. ನೀವು ಯಾರೂ ನೋಡಿರಲ್ಲ. ಆ ಲೆವೆಲ್‌ಗೆ ಮೊದಲು ಡ್ಯಾನ್ಸ್ ನೋಡಿರೋದು ನಾನು. ಒಂದು ಬಾರಿ ಶಿವಣ್ಣ ತೋರಿಸಿದ್ರು. ಯೇ ನಾನು ಏನಮ್ಮ ಡ್ಯಾನ್ಸ್ ಮಾಡೋದು. ಅವನು ನೋಡಮ್ಮ ಹೇಗೆ ಡ್ಯಾನ್ಸ್ ಮಾಡುತ್ತಾನೆ ಅಂತ ತೋರಿಸಿದ್ರು. ಒಂದು ಸಾರಿ ಡ್ಯಾನ್ಸ್ ಮಾಡಿ ತೋರಿಸಿದ್ರು. ಏನಯ್ಯಾ ಈತರ ಡ್ಯಾನ್ಸ್ ಮಾಡುತ್ತಾರಾ ಅಂತ ಅನಿಸಿತ್ತು.” ಎಂದು ಆ ದಿನವನ್ನು ನೆನಪಿಸಿಕೊಂಡಿದ್ದಾರೆ.
“ನಮ್ಮ ಕಟೌಟ್ ಇಲ್ಲದೆ ಇದ್ದರೂ ಪರ್ವಾಗಿಲ್ಲ”
‘ಕಬ್ಜ’ ರಿಲೀಸ್ ಆಗುತ್ತಿರುವ ಕೆಲವು ಥಿಯೇಟರ್‌ಗಳಲ್ಲಿ ಅಪ್ಪು ಕಟೌಟ್ ಕೂಡ ನಿಲ್ಲಲಿದೆ. ಆ ಬಗ್ಗೆನೂ ಉಪ್ಪಿ ಪ್ರತಿಕ್ರಿಯಿಸಿದ್ದಾರೆ. “ಇವತ್ತು ಕರ್ನಾಟಕದಲ್ಲಿ ಅವರನ್ನು ದೇವರು ತರ ನೋಡುತ್ತಾರೆ. ಅವರೊಂದಿಗೆ ಬಹಳ ವರ್ಷಗಳ ಕಾಲ ಆತ್ಮೀಯವಾಗಿ ಪಳಗಿದ್ದೀವಿ. ಇವತ್ತು ಅವರ ಬರ್ತ್‌ಡೇ ದಿನ ಈ ಫಿಲ್ಮ್ ರಿಲೀಸ್ ಆಗುತ್ತಿರೋದು ಎಂತಹ ದೊಡ್ಡ ವಿಷಯ ಅಂದ್ರೆ, ಅವರ ಸ್ಟಾರ್ ದೊಡ್ಡದಿರಬೇಕು. ನಮ್ಮದು ಇಲ್ಲದೆ ಇದ್ದರೂ ಪರವಾಗಿಲ್ಲ. ಅವರ ಕಟೌಟ್ ದೊಡ್ಡದಿರಬೇಕು. ನಮ್ಮದು ಇಲ್ಲದೆ ಇದ್ದರೂ ಪರ್ವಾಗಿಲ್ಲ.” ಎನ್ನುತ್ತಾರೆ ಉಪ್ಪಿ.
“ಮಹಾತ್ಮನ ಕಟೌಟ್ ಪಕ್ಕದಲ್ಲಿ ಕೂರುವುದು ಅದೃಷ್ಟ”
“ಎಂತಹ ಅದೃಷ್ಟ ಅಲ್ವ ನಮಗೆ. ಆ ಮಹಾತ್ಮನ ಕಟೌಟ್ ಪಕ್ಕದಲ್ಲಿ ನಾವು ಕೂತುಕೊಳ್ಳೋದು. ಶಂಕರ್ ಗುರು ರಿಲೀಸ್ ಆಗಿದ್ದ ಸಮಯದಲ್ಲಿ ಅಪ್ಪು ಹುಟ್ಟಿದ್ರಂತೆ. ಅವರ ಮೊದಲ ಪ್ರೊಡಕ್ಷನ್ ಸೂಪರ್ ಡೂಪರ್ ಹಿಟ್. ಅದಕ್ಕೆ ಶಿವಣ್ಣ ಅವರು ಯಾವಾಗಲೂ ಹೇಳೋದು, ರಾಯಲ್ ಆಗಿ ಹುಟ್ಟಿದ ನನ್ನ ತಮ್ಮ. ರಾಯಲ್ ಆಗಿಯೇ ಇರುತ್ತಾನೆ. ರಾಯಲ್ ಆಗಿಯೇ ಬದುಕುತ್ತಿರುತ್ತಾನೆ ಅಂತ ಹೇಳುತ್ತಿರುತ್ತಾರೆ.” ಎಂದು ಶಿವಣ್ಣ ಮಾತನ್ನು ನೆನಪಿಸಿಕೊಂಡಿದ್ದಾರೆ.
ಉಪ್ಪಿ ಪವರ್‌ಸ್ಟಾರ್‌ಗೆ ಆಕ್ಷನ್ ಕಟ್ ಹೇಳದೆ ಹೋಗಿದ್ದಿರಬಹುದು. ಆದರೆ, ‘ಓಂ’ ಸಿನಿಮಾದಿಂದಲೇ ಅಪ್ಪು ಬಗ್ಗೆ ಗೊತ್ತಿತ್ತು. ಅದಕ್ಕೆ ಪುನೀತ್ ರಾಜ್‌ಕುಮಾರ್ ಹೀರೊ ಆಗಿ ಎಂಟ್ರಿ ಕೊಟ್ಟ ‘ಅಪ್ಪು’ ಸಿನಿಮಾಗೆ ಹಾಡೊಂದನ್ನು ಬರೆದಿದ್ದರು. ಆ ಹಾಡು ಸೂಪರ್ ಡೂಪರ್ ಹಿಟ್ ಆಗಿತ್ತು. ಇನ್ನು ಸಿನಿಮಾ ಬಂದಿದ್ದರೆ ಹೇಗಿರುತ್ತಿತ್ತು? ಅಂತ ನೆನಪಿಸಿಕೊಂಡರೆ ಫ್ಯಾನ್ಸ್ ಮತ್ತೆ ಭಾವುಕರಾಗುತ್ತಾರೆ.