ಕೃಷಿ ಇಲಾಖೆಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ

KSDA Recruitment 2023: ಕೃಷಿ ಇಲಾಖೆಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ- ತಿಂಗಳಿಗೆ 40 ಸಾವಿರ ಸಂಬಳ
KSDA Recruitment 2023: ರಾಜ್ಯ ಸರ್ಕಾರದ ಉದ್ಯೋಗ ಹುಡುಕುತ್ತಿದ್ದರೆ ಇಲ್ಲಿದೆ ಗುಡ್​ನ್ಯೂಸ್. ಜೊತೆಗೆ ನೀವು ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದರೆ ನಿಮಗೆ ಸರ್ಕಾರಿ
ನೌಕರಿ ಸಿಕ್ಕಂತೆ. ಹೌದು ಕರ್ನಾಟಕ ರಾಜ್ಯ ಕೃಷಿ ಇಲಾಖೆ (Karnataka State Department of Agriculture) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಒಟ್ಟು 3 ಟೆಕ್ನಿಕಲ್ ಅಸಿಸ್ಟೆಂಟ್ (Technical Assistant) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಮಾರ್ಚ್​ 20, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್​ಲೈನ್ ಮೂಲಕ ಅರ್ಜಿ ಹಾಕಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ (Bengaluru) ಪೋಸ್ಟಿಂಗ್ ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆ ಕರ್ನಾಟಕ ರಾಜ್ಯ ಕೃಷಿ ಇಲಾಖೆ
ಹುದ್ದೆ ಟೆಕ್ನಿಕಲ್ ಅಸಿಸ್ಟೆಂಟ್
ಒಟ್ಟು ಹುದ್ದೆ 3
ವಿದ್ಯಾರ್ಹತೆ ಸ್ನಾತಕೋತ್ತರ ಪದವಿ
ವೇತನ ಮಾಸಿಕ ₹ 40,000
ಉದ್ಯೋಗದ ಸ್ಥಳ ಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನ ಮಾರ್ಚ್ 20, 2023

ವಿದ್ಯಾರ್ಹತೆ:
ಕರ್ನಾಟಕ ರಾಜ್ಯ ಕೃಷಿ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.

ವೇತನ:
ಮಾಸಿಕ ₹ 40,000

ಉದ್ಯೋಗದ ಸ್ಥಳ:
ಬೆಂಗಳೂರು

KSDA- ನೋಟಿಫಿಕೇಶನ್ & ಅರ್ಜಿ

ಅನುಭವ:
ಕರ್ನಾಟಕ ರಾಜ್ಯ ಕೃಷಿ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಕನಿಷ್ಠ 5 ವರ್ಷ ಅನುಭವ ಹೊಂದಿರಬೇಕು.

You May Also Like