ತುಮಕೂರು: ಶ್ರೀ ಸಿದ್ಧಾರ್ಥ ಇನ್ಸಿ÷್ಟಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ವತಿಯಿಂದ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಎಸ್‌ಎಸ್‌ಐಟಿ ಕ್ಯಾಂಪಸ್‌ನ ಪಿ.ಜಿ. ಸೆಮಿನಾರ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವೈಜಿನಾಥ ಹಲಸೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರ ವಚನ ಕಾಯಕವೇ ಕೈಲಾಸ ಎಂಬAತೆ ಶಿಕ್ಷಕರ ಕಾಯಕ ವಿದ್ಯಾರ್ಥಿಗಳಿಗೆ ಚೆನ್ನಾಗಿ ಪಾಠ ಮಾಡುವುದು, ವಿದ್ಯಾರ್ಥಿಗಳ ಕಾಯಕವೇನೆಂದರೆ ಶ್ರಮ ಪಟ್ಟು ಓದುವುದು ಮತ್ತು ಉತ್ತಮ ಫಲಿತಾಂಶ ಪಡೆಯುವುದು. ಹಾಗೂ ಉತ್ತಮ ವೃತ್ತಿಯನ್ನು ಪಡೆದರೆ ಅದೇ ಕೈಲಾಸ ಎಂದರು.
ವಿದ್ಯಾರ್ಥಿಗಳ ಪೋಷಕರ ಕನಸು ನನಸು ಮಾಡಲು ವಿದ್ಯಾರ್ಥಿಗಳು ತನ್ನದೇ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಇದರಿಂದ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವೆಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಮಾರಂಭದ ಮುಖ್ಯ ಅತಿಥಿಯಾದ ಫ್ಲೆöÊನವ ಟೆಕ್ನಾಲಜಿಯ ಸಹ ಸಂಸ್ಥಾಪಕ ಮಹೇಶ್ ಶಾಸ್ತಿç ಮಾತನಾಡಿ, ವ್ಯವಹಾರದಲ್ಲಿ ಕೌಶಲ್ಯ ಹಾಗೂ ಪರಿಣಿತಿ ಮುಖ್ಯ, ವ್ಯವಹಾರವನ್ನು ನಿಯಂತ್ರಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.
ಕೆಎಸ್‌ಒಯುನ ವಾಣಿಜ್ಯ ಮತ್ತು ನಿರ್ವಹಣಾ ಸಂಸ್ಥೆಯ ನಿವೃತ್ತ ನಿರ್ದೇಶಕರಾದ ಡಾ. ಜಗದೀಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ನಿರ್ವಹಣೆ ಕೌಶಲ್ಯವು ಮುಖ್ಯವಾಗಿದೆ ಜಾಗತೀಕರಣಕ್ಕೆ ನಾನು ಧನ್ಯವಾದಗಳನ್ನು ಹೇಳುತ್ತೇನೆ, ಏಕೆಂದರೆ ಜಾಗತೀಕರಣ ನಮಗೆ ಸಾಕಷ್ಟು ಉದ್ಯೋಗಗಳನ್ನು ಕಲ್ಪಿಸಿಕೊಟ್ಟಿದೆ. ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ 2019-21ನೇ ಸಾಲಿನ ಮತ್ತು 2020-22ನೇ ಸಾಲಿನ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಶ್ರೀ ಸಿದ್ಧಾರ್ಥ ಇನ್ಸಿ÷್ಟಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಪ್ರಾಂಶುಪಾಲರಾದ ಡಾ. ಬಿ ಅಜಮತ್ ಉಲ್ಲಾ, ಭೋದಕ ಮತ್ತು ಭೋದಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.