
ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಅರುಣಾಚಲ ಪ್ರದೇಶದಲ್ಲಿ ಪತನಗೊಂಡಿದ್ದು, ಪೈಲಟ್‌ಗಳಿಗಾಗಿ ಶೋಧ ಕಾರ್ಯಾಚರಣೆ ಆರಂಭವಾಗಿದೆ.ಭಾರತೀಯ ಸೇನೆಯ (Indian Army) ಚೀತಾ ಹೆಲಿಕಾಪ್ಟರ್ (Cheetah helicopter) ಗುರುವಾರಅರುಣಾಚಲ ಪ್ರದೇಶದ ( Arunachal Pradesh ) ಮಂಡಲ ಹಿಲ್ಸ್ ಪ್ರದೇಶದ ಬಳಿ ಪತನಗೊಂಡಿದೆ.
ಪೈಲಟ್‌ಗಳಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಇಂದು ಬೆಳಗ್ಗೆ 09:15ರ ಸುಮಾರಿಗೆ ಅರುಣಾಚಲ ಪ್ರದೇಶದ ಬೊಮ್‌ಡಿಲಾ ಬಳಿ ಕಾರ್ಯಾಚರಣೆ ನಡೆಸುತ್ತಿದ್ದ ಆರ್ಮಿ ಏವಿಯೇಷನ್ ಚೀತಾ ಹೆಲಿಕಾಪ್ಟರ್ ಎಟಿಸಿ ಸಂಪರ್ಕ ಕಳೆದುಕೊಂಡಿದೆ. ಬೊಮ್ಡಿಲಾ ಪಶ್ಚಿಮದ ಮಂಡಲ ಬಳಿ ಅಪಘಾತ ಸಂಭವಿಸಿದ್ದು ಶೋಧ ಕಾರ್ಯಾಚರಣೆ ಆರಂಭವಾಗಿದೆ ಎಂದು ಗುವಾಹಟಿ ಡಿಫೆನ್ಸ್ ಪಿಆರ್ಒ ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ರಾವತ್ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.