ತುಮಕೂರು: ಮಧುಗಿರಿ ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 2 ಅಂಗನವಾಡಿ ಕಾರ್ಯಕರ್ತೆ ಹಾಗೂ 19 ಸಹಾಯಕಿಯರ ಹುದ್ದೆಗಳನ್ನು ತಾತ್ಕಾಲಿಕವಾಗಿ ಭರ್ತಿ ಮಾಡಲು ಅರ್ಹ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಆಫ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ತಮ್ಮ ಅರ್ಜಿಯನ್ನು ಏಪ್ರಿಲ್ 11ರೊಳಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ತಾಲ್ಲೂಕು ಪಂಚಾಯತಿ ಆವರಣ, ಮಧುಗಿರಿ ಇವರಿಗೆ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕಂಬದಹಳ್ಳಿ ಹಾಗೂ ನಿಟ್ರಹಳ್ಳಿ-1 ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯರ ಹುದ್ದೆಗಳು ಖಾಲಿ ಇದ್ದು, ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.
ಹರಳಾಪುರ, ಗಿಡ್ಡಯ್ಯನಪಾಳ್ಯ, ಚನ್ನಸಾಗರ, ಕವಣಗಾಲ-1, ಗರ‍್ರಮ್ಮನಕಟ್ಟೆ, ಗಿರೆಗೊಂಡನಹಳ್ಳಿ, ಕಂಬದಹಳ್ಳಿ, ಬಿಜವರ-1, ರ‍್ರಗುಂಟೆ, ಗುಂಡ್ಲಹಳ್ಳಿ, ಓಬಳಾಪುರ, ಭೂತನಹಳ್ಳಿ, ಸೋಂಪುರ, ತೆರಿಯೂರು, ವಿನಾಯಕನಗರ ಅಂಗನವಾಡಿ ಕೇಂದ್ರದ ಸಹಾಯಕಿ ಹುದ್ದೆಗಳು ಸಾಮಾನ್ಯ ವರ್ಗಕ್ಕೆ; ಮುದ್ದೆ ನೇರಳೇಕೆರೆ, ಬಿಟ್ಟನಕುರಿಕೆ, ಬಡವನಹಳ್ಳಿ-5 ಕೇಂದ್ರದ ಹುದ್ದೆಗಳು ಪ.ಜಾತಿಗೆ ಹಾಗೂ ಹೊಸಹಳ್ಳಿ ಕೇಂದ್ರದ ಸಹಾಯಕಿ ಹುದ್ದೆಯು ಪ.ಪಂಗಡಕ್ಕೆ ಮೀಸಲಿಡಲಾಗಿದೆ.