ಕಬ್ಜ ಕಂಡು ಫಿದಾ ಆದ್ರು ಸೆಲೆಬ್ರಿಟಿಸ್

Kabza-Upendra: ಕಬ್ಜ ಕಂಡು ಫಿದಾ ಆದ್ರು ಸೆಲೆಬ್ರಿಟಿಸ್

Kabzaa Review: ಕಬ್ಜ ಫೀವರ್ ಜೋರಾಗಿದೆ..ಮಧ್ಯರಾತ್ರಿಯಿಂದಲೇ ಕಬ್ಜ ಕಬ್ಜ ಅನ್ನೋ ಉದ್ಘಾರ ಮುಗಿಲು ಮುಟ್ಟಿದೆ..ನಿನ್ನೆ ರಾತ್ರಿಯೇ ಪ್ರೈವೇಟ್ ಶೋ ನಲ್ಲಿ ಕಬ್ಜ ಕಣ್ಣು ತುಂಬಿಕೊಂಡ ಸೆಲೆಬ್ರಿಟಿಗಳು ಉಘೇ ಉಘೇ ಅಂತಿದ್ದಾರೆ.. ಇದು ಕನ್ನಡ ಸಿನಿಮಾವಲ್ಲ ಹಾಲಿವುಡ್ ಸಿನಿಮಾ ಅಂತಿದ್ದಾರೆ..

ಬಾಲಿವುಡ್‌ ನ ಹೆಸರಾಂತ ನಟ ಅನುಪಮ್ ಖೇರ್ಸಹ ವಾವ್ ಅಂದಿದ್ದಾರೆ.. ಕಬ್ಜ ರಿಪೋರ್ಟ್ ಕೇಳಿ ಬಹುಪರಾಕ್ ಹೇಳಿದ್ದಾರೆ‌.. ಮೆಗಾ ಕ್ಯಾಂಪಿನ ನಟ ಸಾಯಿ ಧರ್ಮತೇಜ್ ಅಂತೂ ಮನಸೋ ಇಚ್ಛೆ ಹೊಗಳಿದ್ದಾರೆ.. ಕನ್ನಡದ ‌ಮತ್ತೊಂದು ಮಾಸ್ಟರ್ ಪೀಸ್ ಅಂತ ಹೃದಯದಿಂದ ಕೊಂಡಾಡಿದ್ದಾರೆ..

ಇನ್ನು ವಿಶ್ವದಾದ್ಯಂತ ಅಫೀಶಿಯಲ್ ಶೋಸ್ ಈಗಷ್ಟೇ ಶುರುವಾಗ್ತಿದ್ದು, ಕಬ್ಜ ನೋಡಲು ಚಿತ್ರಪ್ರೇಮಿಗಳು ಮುಗಿಬಿದ್ದಿದ್ದಾರೆ.. ಕೆಜಿಎಫ್೨ ಆದ್ಮೇಲೆ ಇಷ್ಟು ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಿರೋ ಕನ್ನಡ ಸಿನಿಮಾ ಕಬ್ಜನೇ.. ನಾಲ್ಕು ಸಾವಿರ ಬೆಳ್ಳಿಪರದೆಯ‌ ಮೇಲೆ ತ್ರಿಮೂರ್ತಿಗಳು ರಾರಾಜಿಸ್ತಿದ್ದಾರೆ..

Kabzaa : ʼಕಬ್ಜʼ ನೋಡುವ ಮೊದಲು ನೀವು ನೋಡಲೇಬೇಕಾದ ಟ್ಟೀಟ್‌ಗಳಿವು..!

ಕರ್ನಾಟಕದಲ್ಲಿಯೇ ನಾನೂರು ಸ್ಕ್ರೀನ್ ಗಳಲ್ಲಿ‌ ಚಂದ್ರು ಕನಸಿನ ತಪಸಿನ ಕಬ್ಜ ತೆರೆಯಲ್ಲಿ ಮೋಡಿ‌ ಮಾಡ್ತಿದೆ.. ಈಗಿನ ಲೆಕ್ಕಾಚಾರ ‌ನೋಡ್ತಿದ್ರೆ ಮೊದಲ‌ ದಿನವೇ ಕಬ್ಜ ದಾಖಲೆಯ ಚಂಡಮಾರುತ ಎಬ್ಬಿಸೋದ್ರಲ್ಲಿ ಡೌಟೇ ಇಲ್ಲ.!

You May Also Like