ಇಂದು ವಿದ್ಯುತ್ ಅದಾಲತ್/ಗ್ರಾಹಕರ ಸಂವಾದ ಸಭೆ

ತುಮಕೂರು : ಬೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗ ವ್ಯಾಪ್ತಿಯ ಮುತ್ಸಂದ್ರ, ಯಾದವನಗರ, ಸಂಗಾಪುರ ಗೊಲ್ಲರಹಟ್ಟಿ, ಲಕ್ಕೇನಹಳ್ಳಿ ಹಟ್ಟಿ, ಎ.ಕೆ. ಕಾವಲ್ ಹ್ಯಾಂಡ್‌ಪೋಸ್ಟ್, ನೆಟ್ಟೇಕೆರೆ ಗೊಲ್ಲರಹಟ್ಟಿ ಹಾಗೂ ನಲ್ಲೂರು ಗ್ರಾಮಗಳಲ್ಲಿ ಮಾರ್ಚ್ 18ರಂದು ಬೆಳಿಗ್ಗೆ 11 ಗಂಟೆಗೆ ವಿದ್ಯುತ್ ಅದಾಲತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಂಬ0ಧಿಸಿದ ಗ್ರಾಮಗಳ ವಿದ್ಯುತ್ ಗ್ರಾಹಕರು ಅದಾಲತ್‌ನಲ್ಲಿ ಭಾಗವಹಿಸಿ ಕುಂದುಕೊರತೆಗಳನ್ನು ಬಗೆಹರಿಸಿಕೊಳ್ಳಬಹುದು.
ಅದೇ ರೀತಿ ಸದರಿ ದಿನದಂದು ಮಧ್ಯಾಹ್ನ 3.30 ಗಂಟೆಗೆ ನಗರ ಉಪವಿಭಾಗ-1 ಮತ್ತು 2, ಕ್ಯಾತ್ಸಂದ್ರ ಉಪವಿಭಾಗ, ಗ್ರಾಮೀಣ ಉಪವಿಭಾಗ-1 ಮತ್ತು 2, ಗುಬ್ಬಿ ಉಪವಿಭಾಗ ಹಾಗೂ ನಿಟ್ಟೂರು ಉಪವಿಭಾಗಗಳಲ್ಲಿ ಗ್ರಾಹಕರ ಸಂವಾದ ಸಭೆಯನ್ನು ಏರ್ಪಡಿಸಲಾಗಿದ್ದು, ಗ್ರಾಹಕರು ವಿದ್ಯುತ್‌ಗೆ ಸಂಬ0ಧಪಟ್ಟ ಯಾವುದೇ ಸಮಸ್ಯೆಗಳಿದ್ದಲ್ಲಿ ಸಭೆಯಲ್ಲಿ ಭಾಗವಹಿಸಿ ಪರಿಹರಿಸಿಕೊಳ್ಳಬಹುದೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You May Also Like