ತುಮಕೂರು:ಸಾರ್ವಜನಿಕರ ಸಮಸ್ಯೆ ಏನೇ ಇದ್ದರೂ ಸಹ ಪೋಲೀಸ್ ಠಾಣೆಗೆ ಫೋನ್ ಮಾಡಿ ಅಥವಾ 112 ಗೆ ತಕ್ಷಣವೇ ಕರೆಮಾಡಿ ತಿಳಿಸಿ,ಚೈನ್ ಕಳ್ಳತನ,ಬೈಕ್ ಕಳ್ಳತನ ಇತರೆ ಏನೇ ದುರ್ಘಟನೆ ನಡೆದರೂ ತಕ್ಷಣವೇ ಪೋಲೀಸ್ ಠಾಣೆಗೆ ಕರೆ ಮಾಡಿ ತಿಳಿಸಿದರೆ ನಾವು ಮತ್ತು ನಮ್ಮ ಪೋಲೀಸರು ನಿಮ್ಮ ನೆರವಿಗೆ ತಕ್ಷಣವೇ ಧಾವಿಸುತ್ತೇವೆ,ಊರು ಬಿಟ್ಟು ಮನೆ ಬೀಗ ಹಾಕಿ ಹೋಗುವಾಗ ನಮಗೆ ತಿಳಿಸಿದರೆ ನಾವು ನಿಮ್ಮ ಮನೆಗೆ ಕ್ಯಾಮರಾ ಅಳವಡಿಸಿ ನೀವು ಬರುವವರೆಗೂ ಕಾಯುತ್ತೇವೆ ಮತ್ತು ನಿಮ್ಮ ಮನೆಯ ಸುರಕ್ಷತೆ ನಮಗೆ ಸೇರಿದ್ದು,ಸಾರ್ವಜನಿಕರು ಪೋಲೀಸ್ ಇಲಾಖೆಯೊಂದಿಗೆ ಮತ್ತು ನಮ್ಮ ಸಿಬ್ಬಂದಿಯೊAದಿಗೆ ಸಹಕಾರ ನೀಡಿ ಎಂದು ತಿಲಕ್ ಪಾರ್ಕ್ ಸಿಪಿಐ ಶಿವಕುಮಾರ್ ರವರು ತಿಳಿಸಿದರು.
ಅವರು ಇಂದು ನಗರದ ಜಯನಗರ ಪಶ್ಚಿಮ ಬಡಾವಣೆಯಲ್ಲಿರುವ ದಿವಂಗತ ರುದ್ರಾರಾಧ್ಯ ಉದ್ಯಾನವನದಲ್ಲಿ ನಡೆದ ಪೋಲೀಸ್ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಜಯನಗರ ಪೋಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಕೃಷ್ಣಕುಮಾರ್ ರವರು ಮಾತನಾಡುತ್ತಾ ಎಲ್ಲರೂ ತಮ್ಮ ಕುಟುಂಬ ವ್ಯವಸ್ಥೆಯನ್ನು ಚೆನ್ನಾಗಿ ಇಟ್ಟುಕೊಳ್ಳಿ ಪೋಲೀಸ್ ಠಾಣೆಗೆ ತಮ್ಮ ಕುಟುಂಬ ಸದಸ್ಯರ ವಿರುದ್ಧವೇ ದೂರು ತರುತ್ತಿರುವುದು ದುಃಖದ ಸಂಗತಿ,ಮಕ್ಕಳು ಮೊಬೈಲ್ ಫೋನ್ ಕಡಿಮೆ ಬಳಸಿ,ವೃದ್ಧರನ್ನು ಚೆನ್ನಾಗಿ ನೋಡಿಕೊಳ್ಳಿ,ತಮಗೆ ಏನೇ ಸಮಸ್ಯೆ ಇದ್ದರೂ ಸಹ ತಕ್ಷಣವೇ ನಮ್ಮ ಬೀಟ್ ಪೋಲೀಸ್ ಗೆ ಆಗಲಿ ಅಥವಾ ಠಾಣೆಗೆ ಕರೆ ಮಾಡಿದರೆ ತಕ್ಷಣವೇ ನಾವು ಸ್ಪಂದಿಸುತ್ತೇವೆ ಎಂದು ತಿಳಿಸಿದರು.
ಜಯನಗರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಎಸ್.ವೀರಪ್ಪದೇವರು ಮಾತನಾಡಿ ಬಡಾವಣೆಯಲ್ಲಿ ರಾತ್ರಿ ಹೊತ್ತು ಪೋಲೀಸ್ ಬೀಟ್ ಹೆಚ್ಚಿಸಿ,ಉದ್ಯಾನವನಗಳಲ್ಲಿ ಕೆಲವರು ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಅದನ್ನು ತಡೆಹಿಡಿಯಿರಿ,ಹಿರಿಯ ನಾಗರೀಕರು,ಹೆಂಗಸರ ಮತ್ತು ಯುವತಿಯರ ಸುರಕ್ಷತೆಗೆ ಪೋಲೀಸ್ ಇಲಾಖೆ ಗಮನ ಹರಿಸಬೇಕೆಂದು ಮನವಿ ಮಾಡಿದರು.
ವೇದಿಕೆಯಲ್ಲಿ ಬಿ.ವಿ.ದ್ವಾರಕಾನಾಥ್, ಎಸ್.ವೆಂಕಟೇಶ್, ಷಡಾಕ್ಷರಿ, ನಾಗರಾಜರಾವ್, ಶಾಂತರಾಜು,ಪ್ರೊ.ಎಸ್.ವಿ.ರುದ್ರಮುನಿ,ಪೋಲೀಸ್ ಸಿಬ್ಬಂದಿಗಳಾದ ಎ.ಎಸ್.ಐ.ದೇವರಾಜು,ಪೇದೆಗಳಾದ ರಾಮಕೃಷ್ಣ,ಚಿಕ್ಕಮಣಿ,ನಾಗಮ್ಮ ಮುಂತಾದವರು ಉಪಸ್ಥಿತರಿದ್ದರು.
ಬಡಾವಣೆಯ ನಾಗರೀಕರು ಉಪಸ್ಥಿತರಿದ್ದು ಪೋಲೀಸ್ ಹಿರಿಯ ಅಧಿಕಾರಿಗಳಿಗೆ ಹಲವಾರು ಅಹವಾಲುಗಳು ಮತ್ತು ಸಮಸ್ಯೆಗಳನ್ನು ತಿಳಿಸಿದರು.