ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯವು ಎಂ.ಬಿ.ಬಿ.ಎಸ್. ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ವಿವಿಧ ರ‍್ಯಾಂಕ್‌ಗಳನ್ನು ಪ್ರಕಟಿಸಿದೆ. ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ವಿದ್ಯಾರ್ಥಿಗಳು ಒಟ್ಟು ರಾಜ್ಯಕ್ಕೆ 12 ರ‍್ಯಾಂಕ್‌ಗಳನ್ನು ಪಡೆದುಕೊಂಡಿರುತ್ತಾರೆ. ವಿವಿಧ ವಿಭಾಗಗಳಲ್ಲಿ ರ‍್ಯಾಂಕ್‌ನ್ನು ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ.
ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆ ಇ.ಎನ್.ಟಿ ವಿಭಾಗದಿಂದ ರಾಕೇಶ್.ಎ 89.2%. ಅಂಕ ಪಡೆದು ರ‍್ಯಾಜಕ್ಕೆ ಪ್ರಥಮ ರ‍್ಯಾಂಕ್‌ನ್ನು ಪಡೆದಿದ್ದಾರೆ. ಇದೇ ವಿಭಾಗದಿಂದ ದೀಪು ಎಸ್.ಎ 86.8% ಅಂಕ ಪಡೆದು ತೃತೀಯ ರ‍್ಯಾಂಕ್ ಪಡೆದಿರುತ್ತಾರೆ, ನವ್ಯ.ಜಿ. 85.2% ಅಂಕ ಪಡೆದು ಏಳನೇ ರ‍್ಯಾಂಕ್ ಪಡೆದಿರುತ್ತಾರೆ. ಪ್ರೇರಣಾ 84.4% ಅಂಕ ಪಡೆದು 9ನೇ ರ‍್ಯಾಂಕ್ ಪಡೆದಿರುತ್ತಾರೆ, ಮೇಹಕ್ ಶರ್ಮ 84% ಅಂಕ ಪಡೆದು 9 ನೇ ರ‍್ಯಾಂಕ್ ಪಡೆದಿರುತ್ತಾರೆ.
ಅಂಗರಚನಾ ಶಾಸ್ತç ವಿಭಾಗದಲ್ಲಿ ದೀಪು ಎಸ್.ಎ 82.% ಅಂಕ ಪಡೆದು 9ನೇ ರ‍್ಯಾಂಕ್ ಪಡೆದಿರುತ್ತಾರೆ ಹಾಗೂ ವಂದನಾ.ಎನ್ 82.% ಅಂಕ ಪಡೆದು 9ನೇ ರ‍್ಯಾಂಕ್ ಪಡೆದಿರುತ್ತಾರೆ. ಸೂಕ್ಷö್ಮ ಜೀವಾಣು ಶಾಸ್ತç ವಿಭಾಗದಿಂದ ವಂದನಾ.ಎನ್ 79.25% ಅಂಕ ಪಡೆದು 9ನೇ ರ‍್ಯಾಂಕ್ ಪಡೆದಿರುತ್ತಾರೆ. ಮತ್ತು ಮನೀಶಿಕ್ 79.25% ಅಂಕ ಪಡೆದು 9ನೇ ರ‍್ಯಾಂಕ್ ಪಡೆದಿರುತ್ತಾರೆ. ಮಕ್ಕಳ ವೈದ್ಯಕೀಯ ಶಾಸ್ತç ವಿಭಾಗದಿಂದ ಮೇಹಕ್ ಶರ್ಮ 79.2% ಅಂಕ ಪಡೆದು 9ನೇ ರ‍್ಯಾಂಕ್ ಪಡೆದಿರುತ್ತಾರೆ. ಸಮುದಾಯ ಆರೋಗ್ಯ ವೈದ್ಯಶಾಸ್ತç ವಿಭಾಗದಿಂದ ಐಶ್ವರ್ಯ ಎಲ್.ಎನ್. 81.% ಅಂಕ ಪಡೆದು 5ನೇ ರ‍್ಯಾಂಕ್ ಪಡೆದಿರುತ್ತಾರೆ. ನ್ಯಾಯ ವಿಧಿ ವಿಜ್ಞಾನ ಶಾಸ್ತç ವಿಭಾಗದಿಂದ ಕೋಮಲ್ 82.% ಅಂಕ ಪಡೆದು 10ನೇ ರ‍್ಯಾಂಕ್ ಪಡೆದಿರುತ್ತಾರೆ.
ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ಮೊದಲನೇ ವರ್ಷ ಎಂ.ಬಿ.ಬಿ.ಎಸ್.ನಲ್ಲಿ 12 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ, (ಡಿಕ್ಟಿಷನ್), 64 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 50 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಒಟ್ಟಾರೆಯಾಗಿ ಶೇ.89% ಫಲಿತಾಂಶ ಬಂದಿರುತ್ತಾರೆ. ಎರಡನೇ ವರ್ಷ ಎಂ.ಬಿ.ಬಿ.ಎಸ್.ನಲ್ಲಿ 12 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ, (ಡಿಕ್ಟಿಷನ್), 70 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 29 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಒಟ್ಟಾರೆಯಾಗಿ ಶೇ.73% ಫಲಿತಾಂಶದಿAದ ತೇರ್ಗಡೆಯಾಗಿದ್ದಾರೆ. ಮೂರನೇ ವರ್ಷ ಎಂ.ಬಿ.ಬಿ.ಎಸ್.ನಲ್ಲಿ 8 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ, (ಡಿಕ್ಟಿಷನ್), 71 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 20 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಒಟ್ಟಾರೆಯಾಗಿ ಶೇ.88% ಫಲಿತಾಂಶದಿ0ದ ತೇರ್ಗಡೆಯಾಗಿರುತ್ತಾರೆ.
ಒಟ್ಟಾರೆಯಾಗಿ 32 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ (ಡಿಕ್ಟಿಷನ್), 205 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 89 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ರಾಜ್ಯ ಮಟ್ಟದಲ್ಲಿ ಒಳ್ಳೆಯ ಫಲಿತಾಂಶದಿAದ ತೇರ್ಗಡೆ ಹೊಂದಿ ಕಾಲೇಜಿಗೆ ಕೀರ್ತಿ ಪ್ರಗತಿ ಸಾಧಿಸಿದ್ದಾರೆ.
ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ವೈದ್ಯಕೀಯ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್, ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರಾದ ಡಾ.ರಮಣ್ ಎಂ.ಹುಲಿನಾಯ್ಕರ್ ಮತ್ತು ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್.ಪಾಟೀಲ್, ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ.ಎಂ.ಎಲ್.ಹರೇAದ್ರಕುಮಾರ್, ಶ್ರೀದೇವಿ ಆಸ್ಪತ್ರೆಯ ಸ್ತಿçÃರೋಗ ಮತ್ತು ಪ್ರಸೂತಿ ವಿಭಾಗದ ಮುಖ್ಯಸ್ಥರು ಹಾಗೂ ಉಪಪ್ರಾಂಶುಪಾಲರಾದ ಡಾ.ರೇಖಾಗುರುಮೂರ್ತಿ, ಶ್ರೀದೇವಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಕೆ.ಮೋಹನ್‌ಕುಮಾರ್, ನೇತ್ರ ತಜ್ಞರಾದ ಡಾ.ಲಾವಣ್ಯ ಮತ್ತು ಆಡಳಿತಾ ವಿಭಾಗದ ಉಪಪ್ರಾಂಶುಪಾಲರಾದ ಡಾ.ಹೇಮಂತ್‌ರಾಜ್.ಎA.ಎನ್. ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಹಾಗೂ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.