ಮಾ.24ರಿಂದ ಈ ಜಿಲ್ಲೆಗಳಲ್ಲಿ ಮತ್ತೆ ಆಲಿಕಲ್ಲು ಸಹಿತ ಮಳೆ ಸಾಧ್ಯತೆ!

TIME for Kids | Wet Weather

ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ ಹಲವೆಡೆ ಭಾನುವಾರ ಆಲಿಕಲ್ಲು ಮಳೆ ಸುರಿದಿದೆ. ಚಾಮರಾಜನಗರದ ಹರದನಹಳ್ಳಿ, ಮೈಸೂರಿನ ಹುಣಸೂರು, ತುಮಕೂರಿನ ಚಿಕ್ಕನಾಯಕನಹಳ್ಳಿ, ಬಳ್ಳಾರಿಯ ಹಗರಿ, ಉಡುಪಿಯ ಬ್ರಹ್ಮಾವರದಲ್ಲಿ ತುಸು ಬಿರುಸಾಗಿ ಮಳೆ ಸುರಿದಿದೆ. ಅಕಾಲಿಕ ಮಳೆಯಿಂದ ಹಲವು ಬೆಳೆಗಳಿಗೆ ಹಾನಿಯಾದರೆ, ಬೀಸಿಲು ಬೇಗೆಯಿಂದ ಬಸವಳಿದಿದ್ದ ಜನರಿಗೆ ತಂಪೆರೆದಿದೆ.

ಮೇಲ್ಮೈ ಸುಳಿಗಾಳಿ ಪರಿಣಾಮ ಬೆಂಗಳೂರು, ಬೆಂ.ಗ್ರಾಮಾಂತರ, ಕೊಡಗು, ಕೋಲಾರ, ರಾಮನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ತುಮಕೂರು, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ ಮತ್ತು ಯಾದಗಿರಿಯಲ್ಲಿ ಮುಂದಿನ 2 ದಿನ ಗುಡುಗು ಮಿಂಚು ಸಹಿತ ಆಲಿಕಲ್ಲು ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.

ಮಾ.24ರಿಂದ ಮತ್ತೆ ಮೇಲಿನ ಎಲ್ಲ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

You May Also Like