ಬೆಂಗಳೂರು: ಶುಕ್ರವಾರ ಇಲ್ಲವೇ ಶನಿವಾರ ರಾಜ್ಯ ವಿಧಾನಸಭೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಹೆಚ್ಚಳವಾಗಿದೆ. ನಾಳೆ ಯುಗಾದಿ ಹಬ್ಬವಿದ್ದು, ಮರು ದಿನ ಹೊಸ ತಡುಕು ಇರುವುದರಿಂದ ಈ ಸಮಯದಲ್ಲಿ ಚುನಾವಣಾ ದಿನಾಂಕವನ್ನು ನಿಗದಿಪಡಿಸಿದ್ರೆ, ಅಂದೇ ನೀತಿ ಸಂಹಿತೆಯನ್ನು ಜಾರಿ ಮಾಡಬೇಕಾದ ಅನಿವಾರ್ಯತೆ ಕೂಡ ನಿರ್ಮಾಣವಾಗುತ್ತದೆ, ಆದರಿಂದ ಹಬ್ಬ ಮುಗಿದ ಬಳಿಕ ಅಂದ್ರೆ ಶುಕ್ರವಾರ ಇಲ್ಲವೇ ಶನಿವಾರ ಕರ್ನಾಟಕ ರಾಜ್ಯ ವಿಧಾನಸಭಾ ದಿನಾಂಕವನ್ನು ನಿಗದಿ ಪಡಿಸಲಾಗುವುದು ಎನ್ನಲಾಗುತ್ತಿದೆ.
ಇನ್ನೂ ಎರಡು ಹಂತದಲ್ಲಿ ಈ ಬಾರಿ ಕೂಡ ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಚುನಾವಣೆ ನಡೆಯುವ ಸಾಧ್ಯತೆಯನ್ನು ಕೂಡ ತಳ್ಳಿ ಹಾಕುವಂತಿಲ್ಲ. ಬಹುಶಃ ಏಪ್ರಿಲ್ 10 ರಿಂದ ಏಪ್ರಿಲ್ 15ರೊಳಗೆ ಎರಡು ಹಂತದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯನ್ನೂ ಕೂಡ ರಾಜಕೀಯ ಪಂಡಿತರು ಊಹಿಸಿದ್ದು, ಎಲ್ಲದಕ್ಕೂ ಶೀಘ್ರದಲ್ಲಿ ಉತ್ತರ ಸಿಗಲಿದೆ. ಇನ್ನೂ ಈ ನಡುವೆ ಪ್ರಮುಖ ರಾಜಕೀಯ ಪಾರ್ಟಿಗಳ ಚುನಾವಣಾ ಯಾತ್ರೆಗಳು ಕೂಡ ಇಂದಿಗೆ ಮುಕ್ತಯವಾಗುತ್ತಿರುವುದನ್ನು ಕೂಡ ನಾವು ಕಾಣಬಹುದಾಗಿದೆ.