ದಾವಣಗೆರೆ: ನಾಳೆ ದಾವಣೆಗೆರೆ ಜಿಲ್ಲೆಯಲ್ಲಿ ನಡೆಯುವ ಬಿಜೆಪಿ ಮಹಾಸಂಗಮ ಸಮಾವೇಶಕ್ಕೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ. ಮಧ್ಯಾಹ್ನ 3 ಗಂಟೆಯಿಂದ 4.30ರ ವರೆಗೆ ದಾವಣಗೆರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇರಲಿದ್ದಾರೆ.
ಈ ಕಾರ್ಯಕ್ರಮಕ್ಕೆ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ವಿಜಯನಗರ, ಹಾವೇರಿ ಬಳ್ಳಾರಿ ಹಾಗೂ ಗದಗ ಜಿಲ್ಲೆಗಳಿಂದ ಹತ್ತು ಸಾವಿರ ಬಸ್ ಗಳಿಂದ ಸಮಾವೇಶಕ್ಕೆ 6 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಜೊತೆಗೆ ಬಹುತೇಕ ಕಡೆಯಿಂದ ಶಾಸಕರು, ಟಿಕೆಟ್ ಆಕಾಂಕ್ಷಿಗಳು ತಮ್ಮ ಕಾರ್ಯಕರ್ತರನ್ನ ಮಹಾಸಂಗಮಕ್ಕೆ ಆಹ್ವಾನಿಸಿದ್ದಾರೆ.
ಇನ್ನು ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ನಗರದಲ್ಲಿ ಭದ್ರತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಬಾಂಬ್ ಪತ್ತೆ ದಳ ನಿರಂತರ ತಪಾಸನೆ, ಹತ್ತಾರು ಸಲ ಸುತ್ತಾಡುತ್ತಿರುವ ಸೇನಾ ಹೆಲಿಕಾಪ್ಟರ್. ಮಹಾಸಂಗಮ ನಡೆಯುವ 2 ಕಿ.ಮೀ. ವ್ಯಾಪ್ತಿಯಲ್ಲಿ ಡ್ರೋಣ್ ಹಾರಾಟ, ಬ್ಲಾಕ್ ಶರ್ಟ್, ನೀರಿನ ಬಾಟಲ್, ಬ್ಯಾಗ್ ಗಳನ್ನು ನಿಷೇಧಿಸಲಾಗಿದೆ.
ಜೊತೆಗೆ ಸಮಾವೇಶಕ್ಕೆ ಬರುವ ಜನರನ್ನು ಎರಡು ಹಂತದಲ್ಲಿ ತಪಾಸಣೆ ಮಾಡಲಾಗುತ್ತದೆ. ಎಂಟು ಜನ ಎಸ್.ಪಿ ಮತ್ತು ಎ.ಎಸ್.ಪಿಗಳು, ಡಿವೈಎಸ್ಪಿ 32, ಇನ್ಸ್ಪೆಕ್ಟರ್ಗಳು 85, ಹೋಮ್ ಗಾರ್ಡ್ಸ್ 900 ಸೇರಿದಂತೆ 4000 ಪೊಲೀಸರನ್ನು ನಿಯೋಜಿಸಲಾಗಿದೆ.ಇತ್ತ, ಮೋದಿ ಆಗಮನದಿಂದ ದಾವಣಗೆರೆ ನಗರದಲ್ಲಿ ಒಂದು ದಿನದ ಮಟ್ಟಿಗೆ ಕೆ.ಎಸ್.ಆರ್.ಟಿ.ಸಿ ಹಾಗೂ ಖಾಸಗಿ ಬಸ್ ನಿಲ್ದಾಣ ಬಂದ್ ಆಗಲಿದೆ. ಆದ್ದರಿಂದ ನಗರದ ಹೊರವಲಯದಲ್ಲಿ ಬಸ್ ನಿಲ್ದಾಣಕ್ಕೆ ವ್ಯವಸ್ಥೆ ಮಾಡಲಾಗಿದೆ.