ವಿಧಾನಸಭಾ ಚುನಾವಣೆ : ಆಟೋ, ಟ್ಯಾಕ್ಸಿ ಚಾಲಕರಿಗೆ ಮಹತ್ವದ ಸೂಚನೆ

9 साल बाद दिल्ली में टैक्सी-ऑटो का मीटर होगा UP, 60 फीसदी तक बढ़ सकता है  किराया - Auto taxi rides may get dearer in Delhi ntc - AajTak

ಶಿವಮೊಗ್ಗ : 2023 ನೇ ಸಾಲಿನ ಸಾರ್ವತ್ರಿಕ ಚುನಾವಣಾ ಅಂಗವಾಗಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಆಟೋ ರಿಕ್ಷಾ, ಮ್ಯಾಕ್ಸಿ ಕ್ಯಾಬ್, ಮೋಟಾರ್ ಕ್ಯಾಬ್, ಮೀಟರ್ಟ್ಯಾಕ್ಸಿ ವಾಹನಗಳ ಚಾಲಕರು/ಮಾಲೀಕರುಗಳ ಸಭೆ ನಡೆಸಿ ಈ ಕೆಳಗಿನಂತೆ ಸೂಚನೆಗಳನ್ನು ನೀಡಲಾಯಿತು.

ಯಾವುದೇ ವಾಹನ ಚಾಲಕರುಗಳು ತಮ್ಮ ವಾಹನಗಳ ಪರವಾನಗಿ, ಆರ್ಸಿ, ಎಫ್ಸಿ, ಇಟಿಸಿ, ಇನ್ಶೂರೆನ್ಸ್ ಮತ್ತು ಚಾಲಕರು ತಮ್ಮ ವಾಯಿದೆಯುಳ್ಳ ಲೈಸೆನ್ಸ್ಗಳನ್ನು ಹೊಂದಿದ್ದು ವಾಹನಗಳ ಮೇಲೆ ‘ಬಾಡಿಗೆಗೆ’ ಎಂಬ ಫಲಕಗಳನ್ನು ತಪ್ಪದೇ ಪ್ರದರ್ಶಿಸಿ, ಫೇರ್ ಮೀಟರ್ಗಳನ್ನು ತಪ್ಪದೇ ಅಳವಡಿಸಿಕೊಂಡು ವಾಹನಗಳನ್ನು ಚಲಾಯಿಸುವಂತೆ ಸೂಚನೆ ನೀಡಿದರು.

ಬಾಡಿಗೆಗಾಗಿ ಪ್ರಯಾಣಿಸುವ ಪ್ರಯಾಣಿಕರ ಬಗ್ಗೆ ಎಚ್ಚರವಾಗಿದ್ದು, ಎಲ್ಲಾ ಪ್ರಯಾಣಿಕರ ಗುರುತಿನ ಚೀಟಿಯನ್ನು ತಪ್ಪದೇ ತೋರಿಸುವಂತೆ ತಿಳಿಸುವುದು ಮತ್ತು ದಾಖಲು ಮಾಡಿಕೊಳ್ಳುವುದು. ಹಾಗೂ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಮ್ಮ ಗುರುತನ್ನು ಅಥವಾ ಸರಕಿನ ಬಗ್ಗೆ ಮಾಹಿತಿ ನೀಡದಿದ್ದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡುವಂತೆ ಸೂಚಿಸಲಾಯಿತು.

ವಾಹನಗಳಲ್ಲಿ ಯಾವುದೇ ರೀತಿಯ ಅನಧಿಕೃತ ಹಾಗೂ ನಿರ್ಬಂಧಿತ ವಸ್ತುಗಳನ್ನಾಗಲೀ ಹಾಗೂ ಯಾವುದೇ ರೀತಿಯ ಅನುಮಾನಾಸ್ಪದ ಪ್ರಯಾಣಿಕರನ್ನಾಗಲೀ ಸಾಗಿಸುವಂತಿಲ್ಲ.ವಾಹನಗಳಲ್ಲಿ ಯಾವುದೇ ರೀತಿಯ ಉಡುಗೊಡರೆಗಳನ್ನಾಗಲೀ, ಆಮಿಷ ಒಡ್ಡುವ ಸರಕುಗಳನ್ನಾಗಲೀ, ಮದ್ಯವನ್ನಾಗಲೀ ಸಾಗಿಸುವಂತಿಲ್ಲ. ಹಾಗೂ ಯಾವುದೇ ರಾಜಕೀಯ ಪಕ್ಷಗಳ ಚಿನ್ಹೆಗಳನ್ನು ಸೂಕ್ತ ಒಪ್ಪಿಗೆ ವಿನಃ ವಾಹನಗಳ ಮೇಲೆ ಪ್ರದರ್ಶಿಸುವಂತಿಲ್ಲ ಎಂದು ಸಭೆಯಲ್ಲಿ ಸೂಚಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ ತಿಳಿಸಿದ್ದಾರೆ.

You May Also Like