2022-23 ನೇ ಸಾಲಿನ 5 ಮತ್ತು 8 ನೇ ತರಗತಿ ಪರೀಕ್ಷ ವೇಳಾ ಪಟ್ಟಿ ಪ್ರಕಟ

Fair, Neutral, Objective Indicator of Student's Merit—Do Board Exams Meet  Any of These Parameters?

ಸಾಂದರ್ಭಿಕ ಚಿತ್ರ

5 ಮತ್ತು 8ನೇ ತರಗತಿಯ ಮೌಲ್ಯಾಂಕನದಲ್ಲಿ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವುದಿಲ್ಲ, ಎಲ್ಲಾ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆಗೊಳಿಸಲಾಗುವುದು. 5 ಮತ್ತು 8ನೇ ತರಗತಿಯ ಮೌಲ್ಯಾಂಕನವು ವಾರ್ಷಿಕ ಪರೀಕ್ಷೆಯಾಗಿರುವುದಿಲ್ಲ, ಇದು ಕೇವಲ ಮೌಲ್ಯಾಂಕನವಾಗಿರುತ್ತದೆ ಎಂದು ಮಧುಗಿರಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಠ್ಯಪುಸ್ತಕವನ್ನಾಧರಿಸಿ ಮೌಲ್ಯಾಂಕನಕ್ಕೆ ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿದೆ ಹಾಗೂ ಮೌಲ್ಯಾಂಕನದ ಮೂಲಕ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ, ಕಲಿಕಾ ನ್ಯೂನ್ಯತೆ, ಕಲಿಕಾ ಪ್ರಗತಿಗಳನ್ನು ತಿಳಿದುಕೊಂಡು ಮುಂದಿನ ಶೈಕ್ಷಣಿಕ ವರ್ಷಕ್ಕೆ ಕಲಿಕಾ ಕೊರತೆಯನ್ನು ನೀಗಿಸಲು ಶೈಕ್ಷಣಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ಇದರ ಉದ್ದೇಶವಾಗಿದೆ ಎಂಬುದನ್ನು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ತಿಳಿಸಲಾಗಿದೆ. ಮೌಲ್ಯಾಂಕನದ ಫಲಿತಾಂಶವನ್ನು ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾತ್ರ ತಿಳಿಸಲಾಗುವುದು. ಆ ಮೂಲಕ ಫಲಿತಾಂಶದ ಗೌಪ್ಯತೆಯನ್ನು ಕಾಪಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪರೀಕ್ಷಾ ವೇಳಾಪಟ್ಟಿ.

ದಿನಾಂಕ ಮತ್ತು ವಾರ ವಿಷಯ ಸಮಯ

5 ನೇ ತರಗತಿ 8 ನೇ ತರಗತಿ
27.03.2023 (ಸೋಮವಾರ) ಪ್ರಥಮ ಭಾಷೆ ಪ್ರಥಮ ಭಾಷೆ ಮ.2.30 ಮ.4.30.
28.03.2023 (ಮಂಗಳವಾರ) ದ್ವಿತೀಯ ಭಾಷೆ ದ್ವಿತೀಯ ಭಾಷೆ ಮ.2.30 ಮ.4.30.
29.03.2023 (ಬುಧವಾರ) ಪರಿಸರ ಅಧ್ಯಯನ ತೃತೀಯ ಭಾಷೆ ಮ.2.30 ಮ.4.30.
30.03.2023 (ಗುರುವಾರ) ಗಣಿತ ಗಣಿತ ಬೆ.10.30 ಮ.12.30
31.03.2023 (ಶುಕ್ರವಾರ) ಪರೀಕ್ಷೆ ಇರುವುದಿಲ್ಲ ವಿಜ್ಞಾನ ಮ.2.30 ಮ.4.30.
01.04.2023 (ಶನಿವಾರ) ಪರೀಕ್ಷೆ ಇರುವುದಿಲ್ಲ ಸಮಾಜ ವಿಜ್ಞಾನ ಮ.2.30 ಮ.4.30.

You May Also Like