ಐಪಿಎಲ್‌ನಲ್ಲಿ ಹರಾಜಾಗುವುದು ಬೇಡ ಎಂದುಕೊಂಡಿದ್ದೆ; ಆದರೆ ಆರ್‌ಸಿಬಿ ಆಯ್ಕೆ ಮಾಡಿತ್ತು!: ಯುವ ಆಲ್‌ರೌಂಡರ್

ಐಪಿಎಲ್‌ನಲ್ಲಿ ಹರಾಜಾಗುವುದು ಬೇಡ ಎಂದುಕೊಂಡಿದ್ದೆ; ಆದರೆ ಆರ್‌ಸಿಬಿ ಆಯ್ಕೆ ಮಾಡಿತ್ತು!: ಯುವ ಆಲ್‌ರೌಂಡರ್

ಪಿಎಲ್ ಟೂರ್ನಿಯ 16ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಎಲ್ಲಾ ತಂಡಗಳ ಆಟಗಾರರು ಕೂಡ ಒಟ್ಟಾಗುತ್ತಿದ್ದು ಟೂರ್ನಿಗೆ ಸಿದ್ಧತೆ ನಡೆಸಲು ಆರಂಭಿಸಿದೆ. ಈ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಯುವ ಆಲ್‌ರೌಂಡರ್ ಆಟಗಾರ ಶಹ್ಬಾಸ್ ಅಹ್ಮದ್ ಕುತೂಹಲಕಾರಿ ಸಂಗತಿಯನ್ನು ಹಂಚಿಕೊಂಡಿದ್ದಾರೆ.

2020ರ ಐಪಿಎಲ್ ಹರಾಜಿನಲ್ಲಿ ತಾನು ಹರಾಜಾದ ವಿಚಾರವಾಗಿ ಶಹ್ಬಾಜ್ ಅಹ್ಮದ್ ಹೇಳಿಕೆ ನೀಡಿದ್ದಾರೆ.

2020ರಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ತಾನು ಹರಾಜಾಗದೆ ಉಳಿಯಲಿದ್ದೇನೆ ಎಂದು ಭಾವಿಸಿದ್ದೆ ಎಂಬುದಾಗಿ ಹೇಳಿದ್ದಾರೆ ಶಹ್ಬಾಜ್ ಅಹ್ಮದ್. ಅಲ್ಲದೆ ಶಹ್ಮಾಜ್ ಅಹ್ಮದ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನನ್ನು ಆಯ್ಕೆ ಮಾಡಲಿದೆ ಎಂದು ತಾನು ಯೋಚನೆಯನ್ನೇ ಮಾಡಿರಲಿಲ್ಲ ಎಂದು ಕೂಡ ಹೇಳಿದ್ದಾರೆ ಯುವ ಆಲ್‌ರೌಂಡರ್.

“ಆರ್‌ಸಿಬಿ ನನ್ನನ್ನು ಆಯ್ಕೆ ಮಾಡಲಿದೆ ಎಂದು ನಾನು ಭಾವಿಸಿರಲಿಲ್ಲ. ಅದು ನನಗೆ ಅಚ್ಚರಿ ಮೂಡಿಸಿತ್ತು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಆ ಸಮಯದಲ್ಲಿ(ಹರಾಜಿನ ಸಂದರ್ಭದಲ್ಲಿ) ನನಗೆ ಭುಜದ ನೋವಿತ್ತು. ಎಲ್ಲಾ ಕ್ರಿಕೆಟಿಗರು ಕೂಡ ಐಪಿಎಲ್‌ನಲ್ಲಿ ಆಡುವುದನ್ನು ಬಯಸುತ್ತಾರೆ. ಅಲ್ಲದೆ ನಾನು ದೇಶೀಯ ಕ್ರಿಕೆಟ್‌ನಲ್ಲಿಯೂ ಅದ್ಭುತವಾದ ಪ್ರದರ್ಶನ ನೀಡಿದ್ದೆ. ನನ್ನ ಜೊತೆಗಿದ್ದವು ಈ ಬಾರಿಯ ಐಪಿಎಲ್‌ನಲ್ಲಿ ನನಗೆ ಉತ್ತಮ ಅವಕಾಶವಿದೆ ಎಂದು ಹೇಳಿದ್ದರು. ಆದರೆ ಆರ್‌ಸಿಬಿ ನನ್ನನ್ನು ಕೊಂಡುಕೊಳ್ಳಲಿದೆ ಎಂದು ನಾನು ಭಾವಿಸಿರಲಿಲ್ಲ” ಎಂದಿದ್ದಾರೆ ಶಹ್ಬಾಜ್ ಅಹ್ಮದ್.

“ನಿಜ ಹೇಳಬೇಕೆಂದರೆ ಆ ಆವೃತ್ತಿಯಲ್ಲಿ ನಾನು ಹರಾಜಾಗದೆ ಉಳಿದರೆ ಒಳ್ಳೆದು ಎಂದು ಭಾವಿಸಿದ್ದೂ ಇದೆ. ಯಾಕೆಂದರೆ ಐಪಿಎಲ್‌ನಂತಾ ವೇದಿಕೆಯಲ್ಲಿ ಸಮಸ್ಸಯೆಯಾಗಬಾರದು ಎಂದು ಯೋಚಿಸಿದ್ದೆ. ನಾನು ಟೂರ್ನಿಯ ಸಂದರ್ಭದಲ್ಲಿ ಫಿಟ್ ಆಗಿರದಿದ್ದರೆ ಟೂರ್ನಿ ವ್ಯರ್ಥವಾಗುತ್ತದೆ” ಎಂದು ಶಹ್ಬಾಜ್ ಅಹ್ಮದ್ ಆರ್‌ಸಿಬಿಯ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುತ್ತಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಅವರು ಮೊದಲ ಸೆಶನ್‌ನ ಹರಾಜಿನಲ್ಲಿ ಹರಾಜಾದೆ ಉಳಿದ ಬಳಿಕ ಟಿವಿಯನ್ನು ಆಫ್ ಮಾಡಿದ್ದಾಗಿ ಹೇಳಿದ್ದು ಬಳಿಕ ಗೆಳೆಯನೋರ್ವ ಆರ್‌ಸಿಬಿ ತನ್ನನ್ನು ಕೊಂಡುಕೊಂಡಿದೆ ಎಂದು ತಿಳಿಸಿದ್ದಾಗಿ ವಿವರಿಸಿದ್ದಾರೆ ಬಂಗಾಳ ಮೂಲದ ಆಟಗಾರ.

“ಮೊದಲಿಗೆ ನನ್ನ ಟೀಮ್‌ಮೇಟ್ ಇಶಾನ್ ಪೋರೆಲ್ ಪಂಜಾಬ್ ತಂಡಕ್ಕೆ ಮೊದಲಿಗೆ ಹರಾಜಾಗಿದ್ದರು. ಬಳಿಕ ಸರದಿಯಲ್ಲಿದ್ದದ್ದು ನಾನು. ಮೊದಲ ಸುತ್ತಿನಲ್ಲಿ ನಾನು ಹರಾಜಾಗದೆ ಉಳಿದಿದ್ದೆ, ಅದು ನನಗೆ ಬಹಳ ಖುಷಿ ನೀಡಿತ್ತು. ಟಿವಿಯನ್ನು ಆಫ್ ಮಾಡಿ ನಿರಾಳವಾಗಿದ್ದೆ. ಆದರೆ ಹರಾಜು ಅಂತಿಮ ಘಟ್ಟವನ್ನು ತಲುಪುತ್ತಿದ್ದಂತೆಯೇ ನನ್ನ ಗೆಳೆಯಲು ನಾನು ಆರ್‌ಸಿಬಿ ತಂಡದ ಪಾಲಾಗಿರುವುದನ್ನು ತಿಳಿಸಿದರು. ಡ್ರೆಸ್ಸಿಂಗ್‌ರೂಮ್‌ನ್ಲಲಿ ಎಲ್ಲರೂ ಹರಾಜು ವೀಕ್ಷಿಸುತ್ತಿದ್ದರು ಹಾಗೂ ಎಲ್ಲರೂ ಕೂಡ ಬಹಳ ಖುಷಿಯಾಗಿದ್ದರು” ಎಂದಿದ್ದಾರೆ ಶಹ್ಬಾಜ್ ಅಹ್ಮದ್.

ಇನ್ನು ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾದ ಬಳಿಕ ಶಹ್ಬಾಜ್ ಅಹ್ಮದ್ ಅವರು ತಮಗೆ ಮತ್ತೊಂದು ರೀತಿಯಾದ ಭಯ ಉಂಟಾಗಲು ಆರಂಭವಾಯಿತು ಎಂದಿದ್ದಾರೆ. ಯಾಕೆಂದರೆ ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ತಂಡಕ್ಕೆ ಅವರು ಹರಾಜಾಗಿದ್ದರು. ಬಳಿಕ ಕೋವಿಡ್ 19 ಅವಧಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸಂಪೂರ್ಣವಾಗಿ ಫಿಟ್ ಆಗಿ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾಗಿದ್ದಾಗಿ ಶಹ್ಬಾಜ್ ಅಹ್ಮದ್ ವಿವರಿಸಿದ್ದಾರೆ.

“ಹರಾಜಾದ ವಿಚಾರ ತಿಳೀದ ಬಳಿಕ ನನಗೆ ಮನಸ್ಸಿನಲ್ಲಿ ಇದೆಲ್ಲಾ ಹೇಗೆ ಸಾಧ್ಯ ಎನಿಸಿತು. ನನಗೆ ಆಗ ಭಯವಾಗಲು ಆರಂಭಿವಾಗಿದ್ದು ನಾನು ಆರ್‌ಸಿಬಿ ತಂಡಕ್ಕೆ ಹರಾಜಾಗಿದ್ದೆ ಹಾಗೂ ಆಗ ಆರ್‌ಸಿಬಿ ತಂಡದ ನಯಕನಾಗಿದ್ದವರು ವಿರಾಟ್ ಕೊಹ್ಲಿಯವರು. ಈಗ ನನಗೆ ಏನಾಗಲಿದೆ ಎಂದು ನಾನು ಯೋಚಿಸಲು ಆರಂಭಿಸಿದ್ದೆ. ನಗೆ ಫೀಲ್ಡಿಂಗ್‌ನಲ್ಲಿ ಸಮಸ್ಯೆಯಾಗುವ ಭಯವಿತ್ತು ವಿರಾಟ್ ಕೊಹ್ಲಿಯವರು ಫಿಲ್‌ಇಡಮಗ್ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಆದರೆ ಕೋವಿಡ್ ನನ್ನ ಪಾಲಿಗೆ ಬಹಳ ಲಾಭವಾಯಿತು. ನನಗೆ ಭುಜದ ಶಸ್ತ್ರಚಿಕಿತ್ಸೆಗೆ ಸಮಯದೊರೆತು ಸಂಪೂರ್ಣ ಫಿಟ್ ಆಗಿ ತಂಡವನ್ನು ಸೇರಿಕೊಂಡೆ” ಎಂದಿದ್ದಾರೆ ಆರ್‌ಸಿಬಿ ತಂಡದ ಆಲ್‌ರೌಂಡರ್ ಶಹ್ಬಾಜ್ ಅಹ್ಮದ್.

 

 

 

You May Also Like