ತಮಿಳು ನಟ ಅಜಿತ್ ಕುಮಾರ್ ತಂದೆ ಸುಬ್ರಮಣಿಯಂ ನಿಧನ

Ajith Kumar: ತಮಿಳು ನಟ ಅಜಿತ್ ಕುಮಾರ್ ತಂದೆ ಸುಬ್ರಮಣಿಯಂ ನಿಧನ

ಮಿಳು ನಟ ಅಜಿತ್ ಕುಮಾರ್ ಅವರ ತಂದೆ ಪಿ. ಸುಬ್ರಮಣಿಯಂ ಇಂದು ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸುಬ್ರಮಣಿಯಂ ಇಂದು (ಮಾ.24) ಮೃತಪಟ್ಟಿದ್ದಾರೆ.

ಕಳೆದ ಜನವರಿಯಲ್ಲಿ ಅಜಿತ್ ನಟನೆಯ ‘ತುನಿವು’ ಸಿನಿಮಾ ತೆರೆಕಂಡಿತ್ತು.

ಆ ಬಳಿಕ ಫ್ಯಾಮಿಲಿಗೆ ಸಮಯ ನೀಡಿದ್ದ ಅಜಿತ್ ಪತ್ನಿ ಹಾಗೂ ಮಕ್ಕಳೊಂದಿಗೆ ಯುರೋಪ್ ಪ್ರವಾಸದಲ್ಲಿದ್ದರು. ಇದೀಗ ತಂದೆ ಸುಬ್ರಮಣಿಯಂ ನಿಧನದ ಸುದ್ದಿ ತಿಳಿದು, ಪ್ರವಾಸವನ್ನು ಮೊಟಕುಗೊಳಿಸಿ, ಚೆನ್ನೈಗೆ ವಾಪಸ್ ಆಗಿದ್ದಾರೆ.

ಅಜಿತ್ ಕುಮಾರ್ ಅವರ ತಂದೆ ಸುಬ್ರಮಣಿಯಂ ಅವರು ಮೂಲತಃ ಮಲಯಾಳಿ. ಕೇರಳದ ಪಾಲಾಕ್ಕಾಡ್‌ನಲ್ಲಿ ಜನಿಸಿದ್ದ ಅವರು, ಆನಂತರ ಕುಟುಂಬದೊಂದಿಗೆ ಚೆನ್ನೈನಲ್ಲೇ ವಾಸವಾಗಿದ್ದರು. ಇನ್ನು, ಸುಬ್ರಮಣಿಯಂ ನಿಧನದ ಹಿನ್ನೆಲೆಯಲ್ಲಿ ಅವರ ಮಕ್ಕಳಾದ ಅನಿಲ್ ಕುಮಾರ್, ಅಜಿತ್ ಕುಮಾರ್ ಮತ್ತು ಅನೂಪ್ ಕುಮಾರ್ ಅವರು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ‘ನಮ್ಮ ತಂದೆ ಪಿ ಎಸ್ ಮಣಿ (ಸುಬ್ರಮಣಿಯಂ) ಅವರು ಮುಂಜಾನೆ ನಿಧನರಾಗಿದ್ದಾರೆ. ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ 85 ವರ್ಷ ವಯಸ್ಸಾಗಿತ್ತು..’ ಎಂದು ತಿಳಿಸಿದ್ದಾರೆ.

ಸುಬ್ರಮಣಿಯಂ ಅವರಿಗೆ ನಟ ಅಜಿತ್ ಕುಮಾರ್, ಅನೂಪ್ ಕುಮಾರ್ ಮತ್ತು ಅನಿಲ್ ಕುಮಾರ್ ಎಂಬ ಮೂವರು ಮಕ್ಕಳಿದ್ದು, ಅಜಿತ್ ತಂದೆ ನಿಧನಕ್ಕೆ ತಮಿಳು ಚಿತ್ರರಂಗ ಸಂತಾಪ ಸೂಚಿಸಿದೆ.

You May Also Like