ರೈತ ಸಮುದಾಯಕ್ಕೆ ಗುಡ್ ನ್ಯೂಸ್ : ಬೆಸ್ಕಾಂನಿಂದ ಶೀಘ್ರವೇ ರಾಜ್ಯಾದ್ಯಂತ 2.6 ಲಕ್ಷ ನೀರಾವರಿ ಪಂಪ್ ಸೆಟ್ ಗಳಿಗೆ ಸೌರಶಕ್ತಿ

Good News : ರೈತ ಸಮುದಾಯಕ್ಕೆ ಗುಡ್ ನ್ಯೂಸ್ : ಬೆಸ್ಕಾಂನಿಂದ ಶೀಘ್ರವೇ ರಾಜ್ಯಾದ್ಯಂತ 2.6 ಲಕ್ಷ ನೀರಾವರಿ ಪಂಪ್ ಸೆಟ್ ಗಳಿಗೆ ಸೌರಶಕ್ತಿ

ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಶೀಘ್ರದಲ್ಲೇ ರಾಜ್ಯದಾದ್ಯಂತ ಸುಮಾರು 2.6 ಲಕ್ಷ ನೀರಾವರಿ ಪಂಪ್ ಸೆಟ್ ಗಳಿಗೆ (ಐಪಿ ಸೆಟ್ ಗಳು) ಶಕ್ತಿ ತುಂಬಲು ಸೌರಶಕ್ತಿಯನ್ನು ಬಳಸಿಕೊಳ್ಳಲಿದೆ.

ಪ್ರಧಾನ ಮಂತ್ರಿ ಕಿಸಾನ್ ಉರ್ಜಾ ಸುರಕ್ಷಾ ಎವಮ್ ಉತ್ತಾನ್ ಮಹಾಭಿಯಾನ್ (ಪಿಎಂ-ಕುಸುಮ್) ಯೋಜನೆಯಡಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

ಬೆಸ್ಕಾಂ ವ್ಯಾಪ್ತಿಯಲ್ಲಿ ಸಬ್ ಸ್ಟೇಷನ್ ಮಟ್ಟದಲ್ಲಿ ಗ್ರಿಡ್ ಸಂಪರ್ಕಿತ ವಿತರಣಾ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಏಜೆನ್ಸಿಗಳನ್ನು ಆಯ್ಕೆ ಮಾಡಲಾಗುತ್ತಿದೆ.

ಕೇಂದ್ರ ಸರ್ಕಾರದ ಪಿಎಂ ಕುಸುಮ ಯೋಜನೆಯಡಿ ಜಾಲಮುಕ್ತ ಸೌರ ಶಕ್ತಿ ಚಾಲಿತ ಪಂಪ್‍ಸೆಟ್‍ಗಳನ್ನು ನೀಡಲಾಗುತ್ತಿದ್ದು, ವಿದ್ಯುತ್ ಸಂಪರ್ಕವಿಲ್ಲದ ಪ್ರದೇಶಗಳ ಕೃಷಿ ಚಟುವಟಿಕೆಗಳಿಗೆ ಸೌರಚಾಲಿತ ಕೃಷಿ ಪಂಪ್‍ಸೆಟ್‍ಗಳನ್ನು ಅಳವಡಿಸಲು ಆದ್ಯತೆ ನೀಡಲಾಗುವುದು. ಎಲ್ಲಾ ವರ್ಗದ ಅರ್ಜಿಗಳಲ್ಲಿ ವಿಶೇಷ ಚೇತನರಿಗೆ ಶೇ.5ರಷ್ಟು ಮೀಸಲಾತಿ ಒದಗಿಸಲಾಗುತ್ತಿದೆ. ಸಾಮಾನ್ಯ ಹಾಗೂ ಪ.ಜಾ ಮತ್ತು ಪ.ಪಂ ವರ್ಗದಲ್ಲಿ ಸೂಚಿಸಲಾಗಿರುವ ವಂತಿಗೆ ಮೊತ್ತವನ್ನು ಆಯಾ ವಿಶೇಷಚೇತನ ವರ್ಗದವರ ವಂತಿಗೆಯನ್ನು ಪಾವತಿಸಲಾಗುವುದು. ಕೆ.ಆರ್.ಇ.ಡಿ.ಎಲ್ ಅಧಿಕೃತ ಜಾಲತಾಣ www.kredl.karnataka.gov.in ನಲ್ಲಿ ಮಾತ್ರ ಲಭ್ಯವಾಗುವ ಲಿಂಕ್ ಮೂಲಕವೇ ನೊಂದಾಯಿಸಿಕೊಳ್ಳಬಹುದಾಗಿದೆ.

You May Also Like