ಹಳದಿ ಕಲ್ಲಂಗಡಿ ಬೆಳೆದ ರೈತ, ಹೊಸ ತಳಿಯ ಹಣ್ಣಿನಿಂದ ದುಪ್ಪಟ್ಟು ಲಾಭ!

Yellow Watermelon: ಹಳದಿ ಕಲ್ಲಂಗಡಿ ಬೆಳೆದ ರೈತ, ಹೊಸ ತಳಿಯ ಹಣ್ಣಿನಿಂದ ದುಪ್ಪಟ್ಟು ಲಾಭ!

ಬೇಸಿಗೆ ಬಂತೆಂದರೆ ಸಾಕು, ಮಾರುಕಟ್ಟೆಯಲ್ಲಿ ಕಲ್ಲಂಗಡಿ ಹಣ್ಣುಗಳು ಯಥೇಚ್ಛವಾಗಿ ಕಾಣ ಸಿಗುತ್ತವೆ.

ಅನೇಕ ಜನರು ಬೇಸಿಗೆಯಲ್ಲಿ ಕಲ್ಲಂಗಡಿ ತಿನ್ನಲು ಇಷ್ಟಪಡುತ್ತಾರೆ. ಬಹುಪಾಲು ಜನರು ಹೆಚ್ಚಾಗಿ ಕೆಂಪು ಕಲ್ಲಂಗಡಿಗನ್ನ ನೋಡಿರುತ್ತಾರೆ, ಆದರೆ ಹಳದಿಯಲ್ಲೂ ಇದೆ ಎಂಬುದು ಹೆಚ್ಚಿನ ಜನರಿಗೆ ಗೊತ್ತಿರುವುದಿಲ್ಲ. ಬಹುಶಃ ಅದರ ರುಚಿ ನೋಡುವುದಕ್ಕಾಗಿ ಖರೀಸುವವರು ಇದ್ದಾರೆ. ಇದೀಗ ಗುಜರಾತ್​ನ ಜಾಮ್‌ನಗರದಲ್ಲಿ ಹಳದಿ ಕಲ್ಲಂಗಡಿಗಳು ರಾರಾಜಿಸುತ್ತಿವೆ.

ಹಳದಿ ಕಲ್ಲಂಗಡಿ ಕೆಂಪು ಕಲ್ಲಂಗಡಿಗಿಂತ ಎರಡು ಪಟ್ಟು ಸಿಹಿಯಾಗಿರುತ್ತದೆ ಎನ್ನಲಾಗುತ್ತಿದೆ. ಹಳದಿ ಕಲ್ಲಂಗಡಿಗಳು ಹೊರಗೆ ಕೆಂಪು ಕಲ್ಲಂಗಡಿಗಳಂತೆಯೇ ಹಸಿರು ಬಣ್ಣದಲ್ಲಿರುತ್ತವೆ. ಆದರೆ ಒಳಗೆ ಹಳದಿ ಬಣ್ಣ ಗೋಚರಿಸುತ್ತದೆ. ಅದರ ರುಚಿ ನೋಡಿದ ನಂತರ, ನೀವು ಕೆಂಪು ಕಲ್ಲಂಗಡಿ ರುಚಿಯನ್ನು ಮರೆತುಬಿಡುತ್ತೀರಾ.

ಜಾಮ್‌ನಗರದ ಪ್ರಮುಖ ಕಲ್ಲಂಗಡಿ ವ್ಯಾಪಾರಿ ಮುನ್ನಾಭಾಯ್ ಎಂಬುವವರು ಥೈಲ್ಯಾಂಡ್‌ನಿಂದ ಹಳದಿ ಕಲ್ಲಂಗಡಿ ಬೀಜಗಳನ್ನು ತರಿಸಿಕೊಂಡು ನೆಟ್ಟಿದ್ದರು. ಬೆಳೆ ಚೆನ್ನಾಗಿ ಇಳುವರಿ ಬಂದಿದೆ. ಈಗ ಆ ಕಲ್ಲಂಗಡಿಯನ್ನು ಮಾರುತ್ತಾ, ವ್ಯಾಪಾರಿಯಾಗಿಯೂ ಮತ್ತು ರೈತನಾಗಿಯೂ ಸೂಪರ್ ಸಕ್ಸಸ್ ಕಂಡಿದ್ದಾರೆ.

ಜಾಮ್‌ನಗರ ಮಾರುಕಟ್ಟೆಯಲ್ಲಿ ಈ ಕಲ್ಲಂಗಡಿಗೆ ಉತ್ತಮ ಬೇಡಿಕೆ ಇದೆ. ಗುಜರಾತ್‌ನಲ್ಲಿ ಹಳದಿ ಕಲ್ಲಂಗಡಿಗಳನ್ನು ಖರೀದಿಸಲು ಜನರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಹಳದಿ ಕಲ್ಲಂಗಡಿಗಳ ಬೆಲೆ ಕೆಂಪು ಬಣ್ಣಕ್ಕಿಂತ ದುಪ್ಪಟ್ಟಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಕೆಂಪು ಕಲ್ಲಂಗಡಿ ಕೆ.ಜಿ.ಗೆ 20ರಿಂದ 25 ರೂಪಾಯಿ ಇದ್ದರೆ, ಈ ಹಳದಿ ಕಲ್ಲಂಗಡಿ ಬೆಲೆ ಕೆಜಿಗೆ 40 ರಿಂದ 50 ರೂಪಾಯಿಗಳಿದೆ. ಹಳದಿ ಕಲ್ಲಂಗಡಿ ರುಚಿಯಿಂದಾಗಿ ಖರೀದಿಗೆ ಗ್ರಾಹಕರು ಆಸಕ್ತಿ ತೋರುತ್ತಿದ್ದಾರೆ ಎನ್ನುತ್ತಾರೆ ಮುನ್ನಾಭಾಯ್ ಈಗ ಆಧುನಿಕ ಕೃಷಿಯಲ್ಲಿ ಹಳದಿ ಕಲ್ಲಂಗಡಿಗಳ ಕೃಷಿ ಹೆಚ್ಚಾಗಿದೆ. ಇವು ದುಪ್ಪಟ್ಟು ಲಾಭ ನೀಡುತ್ತಿದ್ದು, ಜನರು ಖರೀದಿಗೆ ಆಸಕ್ತಿ ತೋರುತ್ತಿರುವುದರಿಂದ ಹಲವು ರೈತರು ಹಳದಿ ಕಲ್ಲಂಗಡಿ ಬೆಳೆಯಲು ಶುರು ಮಾಡಿದ್ದಾರೆ.

ಕ್ಯಾಪ್ಸಿಕಂನಲ್ಲಿ ವಿವಿಧ ಬಣ್ಣಗಳಿರುವುದನ್ನ ನಾವು ನೋಡಿದ್ದೆವು. ಇದೀಗ ಅನಾನಸ್ ಬಣ್ಣದ ಕಲ್ಲಂಗಡಿ ಬೆಳೆಯಲಾಗುತ್ತಿದ್ದು, ಈ ಹೊಸ ಪ್ರಯೋಗಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬೇಡಿಕೆಯೂ ಭಾರೀ ಪ್ರಮಾಣದಲ್ಲಿದೆ.

You May Also Like