ಚುನಾವಣಾ ನೀತಿ ಸಂಹಿತೆ ಎಫೆಕ್ಟ್: ಮಾರ್ಗಮಧ್ಯೆ ಸರ್ಕಾರಿ ಕಾರು ಬಿಟ್ಟು, ಖಾಸಗಿ ಕಾರಿನಲ್ಲಿ ತೆರಳಿದ ಸಚಿವರು, ಶಾಸಕರು

 

Election commission announced karnataka poll date mrq | Karnataka Assembly  Election Date 2023: ಮೇ 10ರಂದು ಮತದಾನ, ಫಲಿತಾಂಶ ಮೇ 13 ; ಕರ್ನಾಟಕ ಚುನಾವಣೆಗೆ ಡೇಟ್  ಫಿಕ್ಸ್– News18 Kannada

ಬೆಂಗಳೂರು : ಮುಂದಿನ ವಿಧಾನ ಸಭೆ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಮಾರ್ಗಮಧ್ಯೆ ಸರ್ಕಾರಿ ಕಾರು ಬಿಟ್ಟು ಖಾಸಗಿ ಕಾರಿನಲ್ಲಿ ಸಚಿವರು, ಶಾಸಕರು ಪ್ರಯಾಣ ಬೆಳೆಸುತ್ತಿದ್ದಾರೆ.

ವರುಣಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಸರ್ಕಾರಿ ಕಾರು ಬಿಟ್ಟು ಖಾಸಗಿ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾರೆ .

ಸಿದ್ದರಾಮಯ್ಯ ಬಳಸುತ್ತಿದ್ದ KS01GA7002 ಫಾರ್ಚೂನರ್‌ ಕಾರಾಗಿತ್ತು. ಸರ್ಕಾರಿ ಕಾರಿನಲ್ಲಿದ್ದ ವಸ್ತುಗಳನ್ನು ಖಾಸಗಿ ಕಾರಿಗೆ ಸ್ಥಳಾಂತರ ಮಾಡಿದ್ದಾರೆ.

ಸಿಎಂ ಬೊಮ್ಮಾಯಿ ನಿವಾಸದಲ್ಲಿದ್ದ 2 ಕಾರುಗಳನ್ನು ವಾಪಸ್‌ ಪಡೆಯಲಾಗಿದೆ, ಸಿಎಂ ಬೊಮ್ಮಾಯಿ ರೇಸ್‌ಕೋಸ್‌ ನಿವಾಸಕ್ಕೆ ಸರ್ಕಾರಿ ಕಾರು ಬಿಟ್ಟು ಸಚಿವ ಸೋಮಣ್ಣ ಭೇಟಿ ನೀಡಿದ್ದಾರೆ

ಇನ್ನೂ ಸಚಿವ ಹಾಲ್ಲಪ್ಪ ಆಚಾರ್‌ ಸರ್ಕಾರಿ ಕಾರು ಬಿಟ್ಟು ಸ್ವಂತ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಸರ್ಕಾರಿ ಕಾರಿನಲ್ಲಿದ್ದ ಹಾಲಪ್ಪ ಆಚಾರ್‌ ವಸ್ತುಗಳನ್ಜು ತಮ್ಮ ಸ್ವಂತ ಕಾರಿಗೆ ಶಿಫ್ಟ್‌ ಮಾಡಿ ತೆರಳಿದ್ದಾರೆ.

ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಸರ್ಕಾರಿ ವಾಹನ ಬಿಟ್ಟು ಖಾಸಗಿ ವಾಹನದಲ್ಲೇ ಸಂಸದ ರಾಘವೇಂದ್ರ ಎಂಎಲ್‌ಎ ರುದ್ರೇಗೌಡ ತೆರಳಲಿದ್ದಾರೆ. ಅಷ್ಟೇ ಅಲ್ಲದೇ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಕೊಪ್ಪಳ ಯಲಬುರ್ಗಾದಲ್ಲಿ ಬ್ಯಾನರ್‌ ಹಾಗೂ ಕಟೌಟ್‌ಗಳನ್ನು ತೆರವು ಗೊಳಿಸಲಾಗುತ್ತಿದೆ.

ಇದೀಗ ಬಂದ ಸುದ್ದಿಯಾಗಿದ್ದು ಹೆಚ್ಚಿನ ಮಾಹಿತಿ ಲಭ್ಯವಾದ ತಕ್ಷಣ ಅಪ್‌ಡೇಟ್‌ ಮಾಡಲಾಗುತ್ತದೆ.

You May Also Like