ಧರ್ಮಸ್ಥಳದಲ್ಲಿ ಭಕ್ತಾಧಿಗಳಿಗೆ ‘ಹೊಸ ರೂಲ್ಸ್‌’ : ನೇತ್ರಾವತಿ ನದಿಯಲ್ಲಿ ‘ಸ್ನಾನದ ವೇಳೆ ಸೋಪು ಶ್ಯಾಂಪು ಬಳಕೆ ನಿಷೇಧ’

BIG NEWS : ಧರ್ಮಸ್ಥಳದಲ್ಲಿ ಭಕ್ತಾಧಿಗಳಿಗೆ 'ಹೊಸ ರೂಲ್ಸ್‌' : ನೇತ್ರಾವತಿ ನದಿಯಲ್ಲಿ 'ಸ್ನಾನದ ವೇಳೆ ಸೋಪು ಶ್ಯಾಂಪು ಬಳಕೆ ನಿಷೇಧ' | Dharmasthala

ಕ್ಷಿಣ ಕನ್ನಡ : ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ದೇವಸ್ಥಾನಕ್ಕೆ ನಾಡಿನ ಮೂಲೆ ಮೂಲೆಗಳಿಂದ ಭಕ್ತಾದಿಗಳು ಆಗಮಿಸುತ್ತಾರೆ. ಈ ನಿಟ್ಟಿನಲ್ಲಿ ಮಹತ್ವದ ಆದೇಶವೊಂದು ಹೊರಡಿಸಲಾಗಿದೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿ ನೇತ್ರಾವತಿ ನದಿಯ ದಡದಲ್ಲಿರುವ ಧರ್ಮಸ್ಥಳವು ಒಂದು ಜನಪ್ರಿಯ ದೇವಾಲಯ ಪಟ್ಟಣವಾಗಿದೆ. ಕರಾವಳಿ ಭಾಗದಲ್ಲಿ ದಿನದಿಂದ ದಿನಕ್ಕೆ ಬೇಸಿಗೆಯ ತಾಪಮಾನ ಹೆಚ್ಚಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗುತ್ತಿದೆ. ಹೀಗಾಗಿ ಭಕ್ತಾದಿಗಳು ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುವಾಗ ಶ್ಯಾಂಪೂ ಅಥವಾ ಸೋಪು ಇನ್ನಿತರ ವಸ್ತುಗಳ ಉಪಯೋಗವನ್ನು ನಿಷೇಧ ಮಾಡಲಾಗಿದೆ.

ಅಷ್ಟೇ ಅಲ್ಲದೇ ಧರ್ಮಸ್ಥಳ ಗ್ರಾಮ ಪಂಚಾಯತ್, ನೇತ್ರಾವತಿ ಸ್ನಾನಘಟ್ಟ, ನೇತ್ರಾನಗರ, ಹರಿಕೆಮಂಡೆಯ ಸುತ್ತಮುತ್ತಲಿನ ಅಂಗಡಿಗಳಲ್ಲಿ ಶ್ಯಾಂಪೂ ಅಥವಾ ಸೋಪು ಮಾರದಂತೆ ಅಧಿಕೃತ ಸೂಚನೆ ಯನ್ನು ನೀಡಲಾಗಿದೆ. ಭಕ್ತಾಧಿಗಳು ಸ್ವಚ್ಟತೆಯನ್ನು ಕಾಪಾಡುವ ದೃಷ್ಟಿಯಿಂದ ಈ ರೂಲ್ಸ್‌ಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ ಸೂಚನೆ ನೀಡಲಾಗುತ್ತಿದೆ.

You May Also Like