ಕಳ್ಳತನ ಮಾಡಿದ ಬೈಕ್‌ ನಲ್ಲಿ ತಿರುಗಾಡುತ್ತಿದ್ದ ಇಬ್ಬರು ಆರೋಪಿಗಳ ಪೊಲೀಸರಿಂದ ಬಂಧನ..!!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ಕಳ್ಳತನ ಮಾಡಿದ ಬೈಕ್‌ ನಲ್ಲಿ ತಿರುಗಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಬಂಧಿತ ಆರೋಪಿಗಳು ಚಿತ್ರದುರ್ಗ ಮೂಲದ ಫಾರಿಶ್‌ ಶರ್ಮಾ(19), ಧನುಷ್‌ (20) ಎಂದು ತಿಳಿಯಲಾಗಿದೆ.
ಯಮಹಾ ಅರ್ ಎಕ್ಸ್ ,ಬಜಾಜ್ ಪಲ್ಸರ್ ಬೈಕ್ ಗಳನ್ನು ಆರೋಪಿತಗಳಿಂದ ಸ್ವಾಧೀನಪಡಿಸಕೊಳ್ಳಲಾಗಿದೆ.
ಮಂಗಳೂರು ನಗರದ ಮಲ್ಲಿಕಟ್ಟೆಯ ಬಳಿ ಬೈಕ್‌ ಸವಾರಿಯಲ್ಲಿದ್ದ ಇಬ್ಬರು ವ್ಯಕ್ತಿಗಳು ಸಂಶಯಸ್ಪದವಾಗಿ ಕಂಡು ಬಂದ ಬಗ್ಗೆ ಅವರನ್ನು ತಡೆದು ಪರಿಶೀಲಿಸಿದ್ದಾರೆ. ಈ ವೇಳೆ ಈ ಎರಡು ಬೈಕ್‌ ಗಳು ಈ ಹಿಂದೆ ಮಂಗಳೂರು ನಗರದ ಪಂಪವಲ್ ನ ಕಪಿತಾನಿಯಾ ಬಳಿ ಕಳವು ಮಾಡಿದ್ದ ಯಮಹಾ ಅರ್ ಎಕ್ಸ್ ಬೈಕ್ ನ್ನು ಹಾಗೂ ವಲೇನ್ಸಿಯಾ ಬಳಿ ಕಳವು ಮಾಡಿದ್ದ ಬಜಾಜ್ ಪಲ್ಸರ್ ಬೈಕ್ ಗಳೆಂದು ತಿಳಿದು ಬಂದಿದೆ.
ಬಂಧಿತ ಆರೋಪಿಗಳಲ್ಲಿ ಫಾರಿಶ್‌ ಶರ್ಮಾ ವಿರುದ್ದ 2022 ರಲ್ಲಿ ಚಿತ್ರದುರ್ಗ ಜಿಲ್ಲೆಯ ಬಡಾವಣೆ ಠಾಣೇಯಲ್ಲಿ ಬೈಕ್‌ ಕಳವು ಪ್ರಕರಣ ದಾಖಲಾಗಿದೆ.ಪೊಲೀಸರು ತನಿಖೆ ಕೈಗೊಂಡಿದ್ದಾರೆ.

You May Also Like