ಸ್ಮಶಾನ ಭೂಮಿ ಸೌಲಭ್ಯ: ದೂರು ಅರ್ಜಿ ಸಲ್ಲಿಸಲು ಅವಕಾಶ

Free Monochrome Photo of Man Walking in Cemetery Stock Photo

ತುಮಕೂರು: ಉಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ನ್ಯಾಯಾಂಗ ನಿಂದನಾ ಅರ್ಜಿ ಅನ್ವಯ ಜಿಲ್ಲೆಯಲ್ಲಿರುವ ಪ್ರತಿಯೊಂದು ಗ್ರಾಮದಲ್ಲಿಯೂ ಕಡ್ಡಾಯವಾಗಿ ಸ್ಮಶಾನ ಭೂಮಿ ಸೌಲಭ್ಯ ಹೊಂದಿರಬೇಕೆ0ದು ಆದೇಶ ನೀಡಲಾಗಿದೆ. ಈ ಆದೇಶದನ್ವಯ ಯಾವುದೇ ಗ್ರಾಮದಲ್ಲಿ ಸ್ಮಶಾನ ಭೂಮಿ ಸೌಲಭ್ಯವಿಲ್ಲದಿದ್ದಲ್ಲಿ ಅಥವಾ ಸ್ಮಶಾನ ಜಮೀನು ಒತ್ತುವರಿಯಾಗಿದ್ದಲ್ಲಿ ಸಂಬ0ಧಿಸಿದ ಗ್ರಾಮದ ಗ್ರಾಮಸ್ಥರು/ಸಾರ್ವಜನಿಕರು ಕೂಡಲೇ ಆಯಾ ಗ್ರಾಮ ಆಡಳಿತ ಅಧಿಕಾರಿ/ಕಂದಾಯ ನಿರೀಕ್ಷಕರು/ತಹಶೀಲ್ದಾರರಿಗೆ ತಮ್ಮ ಹೆಸರು/ತಂದೆಯ ಹೆಸರು/ಆಧಾರ್ ಚೀಟಿ ಸಂಖ್ಯೆ/ಗ್ರಾಮದ ವಿವರಗಳೊಂದಿಗೆ ಲಿಖಿತ ದೂರು ಅರ್ಜಿ ನೀಡಲು ಅವಕಾಶ ಕಲ್ಪಿಸಲಾಗಿದೆ.
ಸ್ಮಶಾನ ಭೂಮಿ ಒತ್ತುವರಿಯಾಗಿದ್ದಲ್ಲಿ ಗ್ರಾಮಸ್ಥರು ಕೂಡಲೇ ದೂರು ಸಲ್ಲಿಸಬಹುದಾಗಿದೆ ಎಂದು ತಹಶೀಲ್ದಾರ್ ಎಂ. ಸಿದ್ದೇಶ್ ತಿಳಿಸಿದ್ದಾರೆ.

You May Also Like