ಈ ಬಾರಿಯೂ `ಶಿಗ್ಗಾಂವಿ’ ಕ್ಷೇತ್ರದಿಂದ ಸ್ಪರ್ಧೆ : ಸಿಎಂ ಬೊಮ್ಮಾಯಿ ಸ್ಪಷ್ಟನೆ

BREAKING NEWS : ಈ ಬಾರಿಯೂ `ಶಿಗ್ಗಾಂವಿ' ಕ್ಷೇತ್ರದಿಂದ ಸ್ಪರ್ಧೆ : ಸಿಎಂ ಬೊಮ್ಮಾಯಿ ಸ್ಪಷ್ಟನೆ

ಬೆಂಗಳೂರು : ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರ ಬದಲಾವಣೆ ಮಾಡುವುದಿಲ್ಲ ಶಿಗ್ಗಾಂವಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಶಿಕ್ಷಣ ಮತ್ತು ಆರೋಗ್ಯಕ್ಕೆ ನಮ್ಮ ಸರ್ಕಾರ ವಿಶೇಷ ಆಧ್ಯತೆ ನೀಡಿದೆ.

ದುಡ್ಡೇ ದೊಡ್ಡಪ್ಪ ಬದಲಾಗಿ, ದುಡಿಮೆಯೇ ದೊಡ್ಡಪ್ಪ ಆಗಿದೆ. ನಾವು ಮಾಡಿದ ಸಾಧನೆಯ ರಿಪೋರ್ಟ್ ಹಿಡಿದು ಮತ ಕೇಳುತ್ತಿದ್ದೇವೆ ಎಂದು ಹೇಳಿದ್ದಾರೆ.

ಕೊರೊನಾ ಮತ್ತು ಪ್ರವಾಹದ ಸಂದರ್ಭದಲ್ಲೂ ಅಭಿವೃದ್ಧಿ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷದ ದುರಾಡಳಿತದ ಬಗ್ಗೆಯೂ ಜನರಿಗೆ ತಿಳಿಸುತ್ತೇವೆ. ಕಾಂಗ್ರೆಸ್ ನಾಯಕರು ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ.ಆದರೆ ನಾವು ಧರ್ಮ ಜೋಡಣೆ ಕೆಲಸ ಮಾಡಿದ್ದೇವೆ.ಕಾಂಗ್ರೆಸ್ ಅಧಿಕಾರದಲ್ಲಿ 50 ಕ್ಕೂ ಹೆಚ್ಚು ಹಗರಣಗಳಾಗಿತ್ತು. ನಮ್ಮ ಸರ್ಕಾರ ಭ್ರಷ್ಟಾಚಾರದ ವಿಚಾರದಲ್ಲಿ ರಾಜೀ ಇಲ್ಲ ಎಂದರು.

You May Also Like