ತಿರುಪತಿಗೆ ಹೋಗ್ತಾ ಇದ್ದೀರಾ? ಹಾಗಾದ್ರೆ ತಿಮ್ಮಪ್ಪನ ದರ್ಶನಕ್ಕೆ 30 ಗಂಟೆ ಕ್ಯೂನಲ್ಲೇ ನಿಲ್ಲಬೇಕು!

Tirumala: ತಿರುಪತಿಗೆ ಹೋಗ್ತಾ ಇದ್ದೀರಾ? ಹಾಗಾದ್ರೆ ತಿಮ್ಮಪ್ಪನ ದರ್ಶನಕ್ಕೆ 30 ಗಂಟೆ ಕ್ಯೂನಲ್ಲೇ ನಿಲ್ಲಬೇಕು!

ವಾರಾಂತ್ಯವಾಗಿದ್ದ ಕಾರಣ ನಿನ್ನೆ ಭಾನುವಾರ ತಿರುಮಲ ತಿರುಮಲದಲ್ಲಿ (Tirumala) ಭಕ್ತರ ಸಂಖ್ಯೆ ಹೆಚ್ಚಾಗಿತ್ತು.

ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರಿಂದ (Devotees) 21 ಕಂಪಾರ್ಟ್​​ಮೆಂಟ್​​ಗಳು (Compartments) ತುಂಬಿದ್ದವು. ಟೋಕನ್ (Tokens) ಇಲ್ಲದ ಭಕ್ತರಿಗೆ 30 ಗಂಟೆಯೊಳಗೆ ಸರ್ವದರ್ಶನ (Sarvadarsan) ದೊರೆಯಲಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಒಂದೇ ದಿನ 75,510 ಮಂದಿ ಭಕ್ತರು ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದುಕೊಂಡಿದ್ದರು. 36,272 ಮಂದಿ ಮುಡಿ ಸಮರ್ಪಿಸಿದ್ದಾರೆ. ಭಕ್ತರು ಹುಂಡಿಯಲ್ಲಿ ಅರ್ಪಿಸುವ ಕಾಣಿಕೆಯ ಆದಾಯ 3.69 ಕೋಟಿ ರೂಪಾಯಿ ದೊರೆತಿದೆ ಎಂದು ಟಿಟಿಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಇದರ ನಡುವೆ ಟಿಟಿಡಿ ತಿರುಮಲಕ್ಕೆ ಕಾಲ್ನಡಿಗೆ ಮೂಲಕ ಆಗಮಿಸುವ ಭಕ್ತರಿಗೆ ದಾರಿಯಲ್ಲಿಯೇ ದಿವ್ಯದರ್ಶನ ಟೋಕನ್‌ಗಳ ವಿತರಣೆಯನ್ನು ಮಾಡುವುದನ್ನು ಶನಿವಾರದಿಂದ ಪುನರಾರಂಭಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ ಟಿಟಿಡಿ ಮೂರು ವರ್ಷಗಳಿಂದ ದಿವ್ಯದರ್ಶನ ಟೋಕನ್ ನಿಲ್ಲಿಸಲಾಗಿತ್ತು.

(ಸಾಂದರ್ಭಿಕ ಚಿತ್ರ)

ಭಕ್ತರ ಮನವಿಯ ಮೇರೆಗೆ ಅಲಿಪಿರಿ ಕಾಲ್ನಡಿಗೆ ಮಾರ್ಗದಲ್ಲಿ ಗಾಳಿಗೋಪುರದ ಹಾಗೂ ಶ್ರೀವಾರಿ ಮೆಟ್ಟಿಲು ಮಾರ್ಗದ 1250ನೇ ಮೆಟ್ಟಿಲ ಬಳಿ ದಿವ್ಯದರ್ಶನ ಟೋಕನ್ ನೀಡಲಾಗುತ್ತಿದೆ. ಭಕ್ತರು ತಮ್ಮ ಆಧಾರ್ ಕಾರ್ಡ್ ನೊಂದಿಗೆ ನೇರವಾಗಿ ಹಾಜರಾದರೆ ಮಾತ್ರ ಟೋಕನ್ ನೀಡಲಾಗುವುದು ಎಂದು ವಿವರಿಸಲಾಗಿದೆ. ದಿವ್ಯದರ್ಶನ ಟೋಕನ್‌ಗಳ ವಿತರಣೆಯನ್ನು ಕೆಲವು ದಿನಗಳ ಕಾಲ ಪ್ರಾಯೋಗಿಕವಾಗಿ ಪರಿಶೀಲಿಸುವುದಾಗಿ ಟಿಟಿಡಿ ಸ್ಪಷ್ಟಪಡಿಸಿದೆ. 

ಇನ್ನು, ಅಲಿಪಿರಿ ಮಾರ್ಗದಲ್ಲಿ ಬರುವ ಭಕ್ತಿರಿಗೆ ಪ್ರತಿದಿನ 10 ಸಾವಿರ ಟಿಕೆಟ್​​ ಮತ್ತು ಶ್ರೀವಾರಿ ಮೆಟ್ಟಿಲು ಮಾರ್ಗದಲ್ಲಿ ಬರುವ ಭಕ್ತರಿಗೆ ಪ್ರಾಯೋಗಿಕವಾಗಿ ಪ್ರತಿದಿನ 5 ಸಾವಿರ ಟೋಕನ್ ನೀಡಲಾಗುತ್ತಿದೆ. 300 ರೂಪಾಯಿ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳು ಮತ್ತು ಸೇವಾ ಟಿಕೆಟ್‌ಗಳನ್ನು ಪಡೆದ ಭಕ್ತರಿಗೆ ಕಾಲ್ನಡಿಗೆ ಮಾರ್ಗದ ದರ್ಶನದ ಟೋಕನ್‌ಗಳನ್ನು ನೀಡಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಕಲಿಯುಗ ವೈಕುಂಠಂ ಎಂದೇ ಭಕ್ತರಿಂದ ಖ್ಯಾತಿ ಪಡೆದಿರುವ ತಿರುಮಲ ತಿರುಪತಿ ದೇವಸ್ಥಾನಕ್ಕೆ ನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡಿ ಶ್ರೀ ವೆಂಟಕೇಶ್ವರ ಸ್ವಾಮಿ ದರ್ಶನ ಪಡೆದುಕೊಳ್ಳುತ್ತಾರೆ. ಆದರೆ ಕೊರೊನಾ ಕಾರಣದಿಂದ ಇಳಿಮುಖವಾಗಿದ್ದ ಭಕ್ತರ ಸಂಖ್ಯೆ ಕಳೆದ ಕೆಲ ತಿಂಗಳುಗಳಿಂದ ನಿರಂತರವಾಗಿ ಹೆಚ್ಚಳವಾಗುತ್ತಿದೆ. (ಸಾಂದರ್ಭಿಕ ಚಿತ್ರ)

You May Also Like