ನವದೆಹಲಿ : ಆಧಾರ್ ಕಾರ್ಡ್’ಗೆ ಪ್ಯಾನ್ ಲಿಂಗ್ ಮಾಡುವುದನ್ನ ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಇನ್ನು ಈ ಹಿಂದೆ ಇದಕ್ಕೆ ಮಾರ್ಚ್ 31ರವರೆಗೆ ಕಾಲಾವಕಾಶ ನೀಡಲಾಗಿತ್ತು. ನಂತ್ರ ಈ ಕಾಲಾವಕಾಶವನ್ನ ಮಾರ್ಚ್ 31 ರಿಂದ ಜೂನ್ 30, 2023 ರವರೆಗೆ ವಿಸ್ತರಿಸಿದೆ.
ಈ ಮೂಲಕ ಸರ್ಕಾರ ಇನ್ನೂ 3 ತಿಂಗಳು ಕಾಲ ಸಮಯ ನೀಡಿದೆ.
ಅದ್ರಂತೆ, ಸಧ್ಯ ಆಧಾರ್-ಪ್ಯಾನ್ ಲಿಂಕ್ ಮಾಡಲು 1000 ರೂಪಾಯಿ ದಂಡ ವಿಧಿಸಲಾಗುತ್ತದೆ. ಆದ್ರೆ, ಈಗ ಮತ್ತೆ ಮೂರು ತಿಂಗಳು ಕಾಲಾವಕಾಶ ನೀಡಿರುವುದ್ರಿಂದ 1000 ದಂಡ ಪಾವತಿಸಬೇಕಿಲ್ಲ, ಉಚಿತವಾಗಿ ಮಾಡಿಸಬಹುದು ಅನ್ನೋ ಸುದ್ದಿ ಸಾಮಾಜೀಕ ಮಾಧ್ಯಮಗಳಲ್ಲಿ ಓಡಾಡ್ತಿದೆ. ಇದು ನಿಜಾವಾ.? ದಂಡವಾಗಿ ಸಾವಿರ ರೂಪಾಯಿ ಪಾವತಿಸುವ ಅಗತ್ಯವಿಲ್ವಾ.? ಇದಕ್ಕೆ ಸರ್ಕಾರ ಹೇಳಿದ್ದೇನು.? ಮುಂದೆ ಓದಿ.
ಪ್ಯಾನ್- ಆಧಾರ್ ಕಾರ್ಡ್ ಲಿಂಕ್ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿದ್ದು, ಯಾವುದೇ ವಿನಾಯ್ತಿ ನೀಡಿಲ್ಲ. ನೀವು ಲಿಂಕ್ ಮಾಡಿಸಲು 1000 ರೂಪಾಯಿ ದಂಡ ಕಟ್ಟಲೇಬೇಕು ಎಂದು ಸ್ಪಷ್ಟಿಪಡಿಸಿದೆ. ಇನ್ನು ಈ ರೀತಿಯ ಸುದ್ದಿಯನ್ನ ನಂಬಬೇಡಿ ಅಂತಲೂ ಕೇಂದ್ರ ಸರ್ಕಾರ ತಿಳಿಸಿದೆ.