ಮಹಾವಿದ್ಯಾಲಯಗಳ ಪಠ್ಯವಸ್ತು ಪುನರ್-ಮನನ ಕಾರ್ಯಾಗಾರ

ತುಮಕೂರು: ನಗರದ ಶ್ರೀ ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯ ಮತ್ತು ತುಮಕೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಶಿಕ್ಷಣ ಮಹಾವಿದ್ಯಾಲಯಗಳ ಸಹಯೋಗದಲ್ಲಿ ಪಠ್ಯವಸ್ತು ಪುನರ್-ಮನನ ಕಾರ್ಯಾಗಾರವನ್ನುತುಮಕೂರು ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಎಂ.ವೆ0ಕಟೇಶ್ವರಲು ಉದ್ಘಾಟಿಸಿ ಮಾತನಾಡಿದರು.

ಸ್ನಾತಕ ಶಿಕ್ಷಣವು ಪದವಿ ಶಿಕ್ಷಣಕ್ಕಿಂತ ಭಿನ್ನವಾದಕೋರ್ಸ್ಆಗಿದೆ.ಶಿಕ್ಷಣದ ಮಹತ್ವವನ್ನುಅರಿಯಬೇಕು.ಪರೀಕ್ಷೆಗಳನ್ನು ಭಯಪಡದೇಧೈರ್ಯದಿಂದಎದುರಿಸಬೇಕು.
ಶಿಕ್ಷಣದಲ್ಲಿ ಸಮಸ್ಯೆಗಳು ಬೇರೆಕಡೆಯಿಂದ ಹುಟ್ಟುವುದಿಲ್ಲ. ನಮ್ಮಿಂದ ಸಮಸ್ಯೆಗಳು ಹುಟ್ಟುತ್ತವೆ. ಆ ಸಮಸ್ಯೆಗಳಿಗೆ ನಮ್ಮಲ್ಲೇ ಪರಿಹಾರಕಂಡುಕೊಳ್ಳಬೇಕು.ಶಿಕ್ಷಣವನ್ನು ಬದುಕಿನಅಸ್ತçವಾಗಿ ಬದಲಾಯಿಸಿಕೊಳ್ಳಬೇಕು ಎಂದರು.

ಸ್ನಾತಕ ಶಿಕ್ಷಣ ಅಧ್ಯಯನ ಮಂಡಳಿಯ ಅಧ್ಯಕ್ಷರಾದ ಡಾ.ಕೆ.ಎಸ್.ಸಿದ್ದರಾಜುರವರು ಮಾತನಾಡಿ, ವಿವಿಧ ವಿಶ್ವವಿದ್ಯಾಲಯಗಳಲ್ಲಿ ಏಕ ರೂಪದ ಶಿಕ್ಷಣವನ್ನು ಕಾಣುತ್ತಿದ್ದೇವೆ.
ಎರಡು ವರ್ಷ ಸ್ನಾತಕ ಶಿಕ್ಷಣ ತರಬೇತಿಯನ್ನು ಹಮ್ಮಿಕೊಂಡ ದಿನದಿಂದಲೇ ಹೊಸ ಪಠ್ಯಕ್ರಮಕ್ಕೆ ನಮ್ಮನ್ನು ನಾವು ತೆರೆದುಕೊಂಡಿದ್ದೇವೆ. ಈ ಹಿಂದೆಯೂ ಸಹ ಹೊಸ ಪಠ್ಯ ಪುಸ್ತಕಕ್ಕೆ ಸಂಬ0ಧಪಟ್ಟ0ತೆ ಕಾರ್ಯಾಗಾರಗಳನ್ನು ಇದೇಕಾಲೇಜಿನ ಸಭಾಂಗಣದಲ್ಲಿ ನಡೆಸಿದ್ದೇವೆ. ಮೊದಲ ಮತ್ತುತೃತೀಯ ಸೆಮಿಸ್ಟರ್ ಪಠ್ಯ ವಸ್ತು ಸೇರಿದಂತೆಎರಡು ವರ್ಷಗಳ ಸ್ನಾತಕ ಶಿಕ್ಷಣ ಬದಲಾವಣೆಆದಾಗರಾಜ್ಯ ಪಠ್ಯವಸ್ತು ಪುನರ್‌ರಚನೆ ಸಮಿತಿಯಲ್ಲಿಚರ್ಚೆ ಮಾಡಲಾಗಿದೆ. ಅದರಂತೆ ನಾವು ಕೆಲವೊಂದು ಆಯಾಮಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಶ್ರೀ ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ.ಬಿ.ಎಸ್. ಲತಾರವರು ಮಾತನಾಡಿ, ವಿದ್ಯಾರ್ಥಿಗಳಿಗೆ ಒಂದೇರೀತಿಯಉತ್ತಮ ಶಿಕ್ಷಣ ನೀಡಬೇಕು. ನಾವೆಲ್ಲರೂಒಟ್ಟಾಗಿಶಿಕ್ಷಣದ ಗುನಮಟ್ಟವನ್ನು ಸುಧಾರಿಸಲು ಪ್ರಯತ್ನಿಸೋಣಎಂದರು.
ಕಾರ್ಯಕ್ರಮದಲ್ಲಿಸ್ನಾತಕ ಶಿಕ್ಷಣ ಪರೀಕ್ಷಾ ಮಂಡಳಿ ಅಧ್ಯಕ್ಷರಾದಡಾ.ಶಿವಕುಮಾರ ಸ್ವಾಮಿಎಸ್ ಹಾಗೂಜಿಲ್ಲೆಯ ಹದಿನಾರು ಸ್ನಾತಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲರು, ಭೋದಕ ಮತ್ತು ಭೋದಕೇತರವರ್ಗಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

You May Also Like