ನವದೆಹಲಿ: ಲೋಕಸಭೆಯ ಬಜೆಟ್ ಅಧಿವೇಶನ ಗುರುವಾರ ನಿಗದಿಯಂತೆ ಕೊನೆಗೊಂಡಿತು.
ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ವಿರೊಧ ಪಕ್ಷಗಳು ಪ್ರತಿಭಟನೆ ಆರಂಭಿಸಿದವು. ನಂತರ ಸ್ಪೀಕರ್ ಕಲಾಪವನ್ನು ನಿಮಿಷ ಮುಂದೂಡಿದರು.
ಮತ್ತೆ ಸದನ ಸೇರುತ್ತಿದ್ದಂತೆ, ಅದಾನಿ ವಿವಾದಕ್ಕೆ ಸಂಬಂಧಿಸಿ ಜೆಪಿಸಿ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್, ಡಿಎಂಕೆ ಸಂಸದರು ಪ್ರತಿಭಟನೆ ಮುಂದುವರಿಸಿದ್ದರಿಂದ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಸ್ಪೀಕರ್ ಓಂ ಬಿರ್ಲಾ ಘೋಷಣೆ ಮಾಡಿದರು.
ವಿರೋಧ ಪಕ್ಷಗಳು ಅದಾನಿ ವಿವಾದಕ್ಕೆ ಸಂಬಂಧಿಸಿದಂತೆ ಜೆಪಿಸಿ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದವು. ಇದರಿಂದ ಇಡೀ ಬಜೆಟ್ ಅಧಿವೇಶನ ವಿರೋಧ ಪಕ್ಷಗಳ ಪ್ರತಿಭಟನೆಯಲ್ಲೇ ಮುಕ್ತಾಯವಾಯಿತು.