ಸ್ಪರ್ಧೆಯಲ್ಲಿ ವಿಜೇತ ಕ್ರಿಡಾಪಟುಗಳಿಗೆ ಅಭಿನಂದನೆ

ತುಮಕೂರು: ಇತ್ತೀಚಿಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ವೆಟರನ್ ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿದ 42ನೇ ರಾಷ್ಟçಮಟ್ಟದ ವೆಟರನ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ತುಮಕೂರಿನ ಕ್ರೀಡಾಪಟುಗಳಾದ ತುಂಬಾಡಿ ಗ್ರಾಮದ ಚಿಕ್ಕತಿಮ್ಮಯ್ಯ ಭರ್ಜಿ ಎಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ, ಗುಂಡು ಎಸೆತ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ, ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಹಾಗೂ 4100 ಮೀಟರ್ ರಿಲೆ ಓಟದಲ್ಲಿ ಕಂಚಿನ ಪದಕ ಪಡೆದರು.
ಜಗದೀಶ್ 4400 ಮೀಟರ್ ರಿಲೇ ಓಟದಲ್ಲಿ ಚಿನ್ನದ ಪದಕ, 400 ಮೀ ಓಟದಲ್ಲಿ ಕಂಚಿನ ಪದಕ 800 ಮೀ ಓಟದಲ್ಲಿ ಕಂಚಿನ ಪದಕ 5 ಕಿ.ಮೀ ವೇಗದ ನಡಿಗೆ ಸ್ಪರ್ಧೆಯಲ್ಲಿ ಕಂಚಿನ ಪದಕ, 4100 ಮೀಟರ್ ರಿಲೇ ಓಟದಲ್ಲಿ ಕಂಚಿನ ಪಡೆದು ಅಂತರಾಷ್ಟ್ರೀಯ  ಮಟ್ಟಕ್ಕೆ ಆಯ್ಕೆಯಾದರು.
ಇದೇ ಸಂದರ್ಭದಲ್ಲಿ ರವಿ ಸಿ.ಎಂ 5 ಕಿ.ಮೀ ಓಟದಲ್ಲಿ ಕಂಚಿನ ಪದಕ ಪಡೆದ. ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಮುಂಜಾನೆ ಗೆಳೆಯರ ಬಳಗದ ವತಿಯಿಂದ ಅಂತರಾಷ್ಟ್ರೀಯ  ಕ್ರೀಡಾಪಟು ಟಿ.ಕೆ ಆನಂದ್ ನೇತೃತ್ವದಲ್ಲಿ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ದನಿಯ ಕುಮಾರ್, ದಲಿತ ಸಂಘದ ಅಧ್ಯಕ್ಷ ಪಿ.ಎನ್. ರಾಮಯ್ಯ, ಹರೀಶ್, ವೆಂಕಟೇಶ್, ಮಹೇಶ್ ಸ್ವಾಮಿ, ಉದಯ್, ಸುದರ್ಶನ್ ಹಾಗೂ ಇತರ ಕ್ರಿಡಾಪಟುಗಳು ಉಪಸ್ಥಿತರಿದ್ದರು.

You May Also Like